ಜನವರಿ 13ಕ್ಕೆ ದೇಶದಲ್ಲಿ ಮೊದಲ ಕೊರೊನಾ ಲಸಿಕೆ?

ನವದೆಹಲಿ, ಜನವರಿ 05: ಭಾರತದಲ್ಲಿ ಸೆರಂ ಇನ್ ಸ್ಟಿಟ್ಯೂಟ್ ನ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಜನವರಿ 3ರಂದು ಅನುಮತಿ ದೊರೆತಿದೆ. ಸಾಮೂಹಿಕ ಲಸಿಕಾ ಕಾರ್ಯಕ್ರಮಕ್ಕೆ ರಾಜ್ಯಗಳು ಸಿದ್ಧತೆ ನಡೆಸಿದ್ದು, ಡ್ರೈ ರನ್ ಕೂಡ ನಡೆಸಲಾಗಿದೆ.

ದೇಶಾದ್ಯಂತ ಜನವರಿ 2ರಂದು ನಡೆಸಿದ ಪೂರ್ವಾಭ್ಯಾಸದಿಂದ ದೊರೆತ ಪ್ರತಿಕ್ರಿಯೆ ಆಧರಿಸಿ ಕೊರೊನಾ ಲಸಿಕೆಯನ್ನು, ಲಸಿಕೆಗೆ ಅನುಮತಿ ದೊರೆತ ಹತ್ತು ದಿನಗಳ ಒಳಗೆ ವಿತರಿಸುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಹೀಗಾಗಿ ಜನವರಿ 13ರಂದು ಕೊರೊನಾ ಲಸಿಕೆ ದೊರೆಯುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

First Covid 19 Shots Likely On January 13 Says Health Secretary

ಮಂಗಳವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ದೊರೆತ ಹತ್ತು ದಿನಗಳ ಒಳಗೆ ಲಸಿಕೆಗಳನ್ನು ವಿತರಿಸಲು ಸಿದ್ಧತೆ ನಡೆಸಿದ್ದೇವೆ" ಎಂದು ತಿಳಿಸಿದ್ದಾರೆ.

ಕರ್ನಾಲ್, ಮುಂಬೈ, ಚೆನ್ನೈ ಹಾಗೂ ಕೋಲ್ಕತ್ತಾದಲ್ಲಿ ನಾಲ್ಕು ಪ್ರಾಥಮಿಕ ಲಸಿಕಾ ಸಂಗ್ರಹಣಾ ವ್ಯವಸ್ಥೆಯನ್ನು ಮಾಡಲಾಗಿದೆ. ದೇಶದಲ್ಲಿ 37 ಲಸಿಕಾ ಶೇಖರಣೆ ಕೇಂದ್ರಗಳನ್ನು ರೂಪಿಸಲಾಗಿದೆ. ಈ ಕೇಂದ್ರಗಳಲ್ಲಿ ಬೃಹತ್ ಪ್ರಮಾಣದಲ್ಲಿ ಲಸಿಕೆಗಳನ್ನು ಶೇಖರಿಸಿ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+