• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Breaking: ಪ್ರಧಾನಿ ಮೋದಿ ನಿವಾಸದ ಬಳಿ ಬೆಂಕಿ ಅವಘಡ

|

ನವದೆಹಲಿ, ಡಿಸೆಂಬರ್ 30: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ಬೆಂಕಿ ಅವಘಡ ಸಂಭವಿಸಿದೆ.

ದೆಹಲಿಯ ಲೋಕಕಲ್ಯಾಣ ಮಾರ್ಗದ ಪ್ರಧಾನಿ ಅವರ ಅಧಿಕೃತದ ಬಳಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯನ್ನು ನಿಯಂತ್ರಕ್ಕೆ ತರಲಾಗಿದೆ.

ಮೋದಿ ಅವರ ಅಧಿಕೃತ ನಿವಾಸ ಅಥವಾ ಕಚೇರಿ ಆವರಣದಲ್ಲಿ ಬೆಂಕಿ ಅವಘಡ ಸಂಭವಿಸಿಲ್ಲ ಬದಲಿಗೆ ಮೋದಿ ಅವರಿಗೆ ಭದ್ರತೆ ಒದಗಿಸುತ್ತಿರುವ ಎಸ್‌ಪಿಜಿ ಕಚೇರಿ ಬಳಿ ಬೆಂಕಿ ಅವಘಡ ಸಂಭವಿಸಿದೆ. ಇದು ಮೋದಿ ಅವರ ಅಧಿಕೃತ ನಿವಾಸದ ಬಳಿಯೇ ಇದೆ.

ಸಂಜೆ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ.

ಬೆಂಕಿ ಅವಘಡದ ಬಗ್ಗೆ ಪ್ರಧಾನಿ ಕಾರ್ಯಾಲಯವು ಟ್ವೀಟ್ ಮಾಡಿದ್ದು, ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಅವಘಡವು ಪ್ರಧಾನಿ ಕಚೇರಿಯ ಅಥವಾ ನಿವಾಸದ ಆವರಣದಲ್ಲಿ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದೆ.

ಒಂಬತ್ತು ಮಂದಿ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಮಾಹಿತಿಯಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ಮುನ್ನವೇ ಎಸ್‌ಪಿಜಿ ತಂಡವು ಬೆಂಕಿ ಆರಿಸುವ ಪ್ರಯತ್ನದಲ್ಲಿ ಬಹುತೇಕ ಸಫಲವಾಗಿತ್ತು ಎನ್ನಲಾಗಿದೆ.

English summary
Fire accident happen near PM Narendra Modi's official house New Delhi's Lok Kalyan Marga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X