ಬಿಯರ್ ಬಾಟಲಿ ಮೇಲೆ ಗಣೇಶ, ಷೂ ಮೇಲೆ ಓಂ ಚಿಹ್ನೆ

ನವದೆಹಲಿ, ಫೆಬ್ರವರಿ 23: ಬಿಯರ್ ಬಾಟಲ್ ಮೇಲೆ ಗಣೇಶನ ಚಿತ್ರ, ಷೂ ಮೇಲೆ ಓಂ ಚಿಹ್ನೆ- ಇದು ಅಮೆರಿಕ ಮೂಲದ ಆನ್ ಲೈನ್ ಮಾರಾಟಗಾರರು ಮಾರುತ್ತಿರುವ ವಸ್ತುಗಳು. ಹಿಂದೂಗಳ ಭಾವನೆಗೆ ಧಕ್ಕೆ ಮಾಡುತ್ತಿವೆ ಎಂಬ ದೂರು ಈ ಆನ್ ಲೈನ್ ಮಾರಾಟಗಾರರ ವಿರುದ್ಧ ಇದೀಗ ದಾಖಲಾಗಿದೆ.

ಓಂ ಚಿಹ್ನೆ ಇರುವ ಷೂ ಮಾರಿದ್ದಕ್ಕೆ yeswevibe.com ವಿರುದ್ಧ ಹಾಗೂ ಗಣೇಶನ ಚಿತ್ರವಿರುವ ಬಿಯರ್ ಬಾಟಲಿ ಮಾರಿದ್ದಕ್ಕೆ lostcoast.com ವಿರುದ್ಧ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಆಯುಕ್ತ ನರೇಶ್ ಕದ್ಯಾನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಆ ವೆಬ್ ಸೈಟ್ ಗಳು ಮಾರುತ್ತಿರುವ ವಸ್ತುಗಳನ್ನು ತಕ್ಷಣದಿಂದ ಮಾರಾಟದಿಂದ ಹಿಂಪಡೆಯುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

FIR Against US-Based Online Retailers For Selling Shoes With 'Om' Symbol, Beer With Ganesha's Image

ಇನ್ನು ದೆಹಲಿಯ ಪ್ರಶಾಂತ್ ವಿಹಾರ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದ್ದು, ಜಗತ್ತಿನಲ್ಲಿರುವ ಎಲ್ಲ ಹಿಂದೂಗಳ ಪಾಲಿಗೆ ಓಂ ಚಿಹ್ನೆ ಪವಿತ್ರವಾದುದು. ಅದನ್ನು ಷೂ ಮೇಲೆ ಬಳಸಿರುವುದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ದೂರಲಾಗಿದೆ. ಮತ್ತೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದ್ದರಿಂದ ಐಪಿಸಿ 295A, 153A ಅಡಿ ದೂರು ದಾಖಲಿಸಲಾಗಿದೆ.

ಕಳೆದ ವರ್ಷ ಜೂನ್ ನಲ್ಲಿ ಆನ್ ಲೈನ್ ಮೂಲಕ ಅಮೆಜಾನ್ ಮಾರಾಟ ಮಾಡುತ್ತಿದ್ದ ಹಿಂದೂ ದೇವತೆಗಳ ಚಿತ್ರವಿರುವ ಡೋರ್ ಮ್ಯಾಟ್ ಗಳ ವಿರುದ್ಧ ಕೂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಯಾವಾಗ ಇಸ್ಲಾಂಗೆ ಸಂಬಂಧಿಸಿದ ಚಿತ್ರಗಳನ್ನು ಬಳಸಿತೋ ಅಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಆ ನಂತರ ಅಮೆಜಾನ್ ವೆಬ್ ಸೈಟ್ ನಿಂದ ಆ ವಸ್ತುಗಳ ಮಾರಾಟವನ್ನು ವಾಪಸ್ ಪಡೆದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+