ದೆಹಲಿಯ ಕಾರ್ಖಾನೆಯೊಂದರಲ್ಲಿ ಸಿಲಿಂಡರ್ ಸ್ಫೋಟ: ಆರು ಮಂದಿ ಬಲಿ

ನವದೆಹಲಿ, ಜನವರಿ 04:ಪಶ್ಚಿಮ ದೆಹಲಿಯ ಮೋತಿ ನಗರ್ ಎಂಬಲ್ಲಿಯ ಕಾರ್ಖಾನೆಯೊಂದರಲ್ಲಿ ಎಲ್ ಪಿಜಿ ಸಿಲಿಂಡರ್ ಸ್ಫೋಟಿಸಿದ ಪರಿಣಾಮ ಆರು ಮಂದಿ ಮೃತರಾದ ಘಟನೆ ಗುರುವಾರ ರಾತ್ರಿ ನಡೆದಿದೆ.

ಸೀಲಿಂಗ್ ಫ್ಯಾನ್ ಗಳಿಗೆ ಫೇಂಟ್ ಮಾಡುವ ಕಾರ್ಖಾನೆ ಇದಾಗಿದ್ದು, ದೆಹಲಿಯ ಸುದರ್ಶನ್ ಪಾರ್ಕ್ ಬಳಿ ಇದೆ. 8:50 ರ ಸಮಯಕ್ಕೆ ಸಿಲೀಂಡರ್ ಸ್ಫೋಟ ಸಂಭವಿಸಿದ್ದು, ಕೂಡಲೇ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಆದರೂ ಕಟ್ಟಡದಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

Few Dead In Explosion At Factory In West Delhi; Many Still Trapped

ಕಾರ್ಖಾನೆಯ ಮಾಲೀಕರೂ ಸಹ ಗಂಭೀರವಾಗಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ 15 ಜನರನ್ನು ರಕ್ಷಿಸಲಾಗಿದ್ದು, ಆಚಾರ್ಯ ಭಿಕ್ಷು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಐದು ವರ್ಷ ವಯಸ್ಸಿನ ಮಗುವೂ ಮೃತವಾಗಿದೆ ಎನ್ನಲಾಗಿದೆ.

ಘಟನೆಯಲ್ಲಿ ಕಾರ್ಖಾನೆಯ ಒಂದು ಭಾಗ ಕುಸಿದ ಪರಿಣಾಮ ಅವಶೇಷದೊಳಗೆ 8-10 ಜನ ಸಿಲುಕಿರಬಹುದು ಎನ್ನಲಾಗಿದೆ. ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+