ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಾಣಸಿಯಲ್ಲಿ ಆರತಿ ಮಾಡಿದ್ದಕ್ಕೆ ಮುಸ್ಲಿಂ ಮಹಿಳೆಯರಿಗೆ ಫತ್ವಾ!

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ವಾರಾಣಸಿಯಲ್ಲಿ ದೀಪಾವಳಿಯ ಪ್ರಯುಕ್ತ ಮುಸ್ಲಿಂ ಮಹಿಳೆಯರು ಆರತಿ ಮಾಡಿದ್ದಕ್ಕಾಗಿ ಅವರ ವಿರುದ್ಧ ಫತ್ವಾ ಹೊರಡಿಸಲಾಗಿದೆ. ಇಸ್ಲಾಂ ನ ಪ್ರಭಾವಿ ಸಂಘಟನೆ ದಾರುಲ್ ಉಲುಮ್ ದಿಯೊಬಂದ್ ಫತ್ವಾ ಹೊರಡಿಸಿದ್ದು, ಯಾವುದೇ ಮುಸ್ಲಿಂ ಮಹಿಳೆಯರು ಅಲ್ಲಾ ಹೊರತಾಗಿ ಬೇರೆ ಯಾವುದೇ ದೇವರನ್ನು ಪೂಜಿಸಿದಲ್ಲಿ ಅಂಥವರನ್ನು ಇಸ್ಲಾಂ ಮತದಿಂದ ಹೊರಹಾಕಲಾಗುವುದು ಎಂದಿದ್ದಾರೆ.

 Fatwa against Muslim men and women from worshipping any other God than Allah

ಅಲ್ಲಾ ಹೊರತಾಗಿ ಬೇರೆ ದೇವರನ್ನು ಪೂಜಿಸುವ ಮುಸ್ಲಿಮರನ್ನು, ಮುಸ್ಲಿಮರಲ್ಲ ಎಂದು ಪರಿಗಣಿಸಲಾಗುವುದು ಎಂದು ಅವರಿಂದು(ಅ.21) ಫತ್ವಾ ಹೊರಡಿಸಿದ್ದಾರೆ.

ಫೇಸ್ ಬುಕ್, ವಾಟ್ಸ್ ಆಪ್ ನಂಥ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರು ತಮ್ಮದು, ಅಥವಾ ತಮ್ಮ ಕುಟುಂಬದ ಚಿತ್ರಗಳನ್ನು ಹಾಕುವಂತಿಲ್ಲ ಎಂದು ಇತ್ತೀಚೆಗಷ್ಟೇ ದಾರುಲ್ ಫತ್ವಾ ಹೊರಡಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

English summary
The influential Islamic seminary, Darul Uloom Deoband, on Oct 21st issued a new 'fatwa' or edict where prohibiting Muslim men and women from worshipping any other God than Allah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X