ಫೇಲ್ ಆದವರಿಗೆ ಟಾಪರ್ ಮೇಲೆ ಮುನಿಸು ಸಹಜ: ರಾಹುಲ್ ಗೆ ಜೇಟ್ಲಿ ಟಾಂಗ್

ನವದೆಹಲಿ, ಫೆಬ್ರವರಿ 11: 'ಫೇಲ್ ಆದವರಿಗೆ ಟಾಪರ್ ಮೇಲೆ ಕೋಪ ಬರುವುದು, ದ್ವೇಷವಿರುವುದು ಸಹಜವೇ' ಎಂದು ರಾಹುಲ್ ಗಾಂಧಿ ಅವರ ಕುರಿತು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿಕೆ ನೀಡಿದ್ದಾರೆ.

ಅನಾರೋಗ್ಯದಿಂದಾಗಿ ಅಮೇರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೇಟ್ಲಿ, ಇತ್ತೀಚೆಗಷ್ಟೇ ಭಾರತಕ್ಕೆ ವಾಪಸ್ಸಾದರು.

ಲೋಕಸಭಾ ಚುನಾವಣೆಗೂ ಮುನ್ನ ವಿಪಕ್ಷಗಳನ್ನು ಕಟುವಾಗಿ ಟೀಕಿಸಿ ಬ್ಲಾಗ್ ಬರೆದಿರುವ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದ್ವೇಷಿರುವುದು ಸಹಜ. ಏಕೆಂದರೆ ಫೇಲ್ ಆದವರಿಗೆ ಎಂದಿಗೂ ಟಾಪರ್ ಗಳ ಮೇಲೆ ದ್ವೇಷವಿರುತ್ತದೆ' ಎಂದು ಜೇಟ್ಲಿ ಟೀಕಿಸಿದರು.

Failed student hates topper: Jaitley mocks Rahul Gandhi

"ಈ ದೇಶದಲ್ಲಿ ಸಂವಿಧಾನಕ್ಕೆ ಅವಹೇಳನ ಮಾಡುತ್ತಿರುವವರೇನಾದರೂ ಇದ್ದರೆ, ಅವರು ರಾಹುಲ್ ಗಾಂಧಿ. ಇತಿಹಾಸ ಅದಕ್ಕೆಂದೇ ಅವರನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ" ಎಂದರು.

ಇವಿಎಂ ಕುರಿತ ಆರೋಪ ಬಾಲಿಶ, ಇವಿಎಂ ಅನ್ನು ಪರಿಚಯಿಸುವ ಸಂದರ್ಭದಲ್ಲಿ ಬಿಜೆಪಿ ಅಧಿಕಾರದಲ್ಲಿರಲಿಲ್ಲ, ಮಾತ್ರವಲ್ಲ, ಅಧಿಕಾರದ ಹೊಸ್ತಿಲಿಗೆ ಬರುವಂತೆಯೂ ಇರಲಿಲ್ಲ. ಆದರೆ ಈಗ ಇವಿಎಂ ದೋಷವನ್ನು ಬಿಜೆಪಿಯ ತಲೆಗೆ ಕಟ್ಟಿದರೆ ಅದು ಸರಿಯೇ ಎಂದು ಅವರು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+