ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಬಿವಿಪಿ ಸದಸ್ಯನಿಂದ ಹಲ್ಲೆ: ವೈರಲ್ ವಿಡಿಯೋದ ಅಸಲಿಯತ್ತು ಬಹಿರಂಗ

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

Recommended Video

ವೈರಲ್ ಆದ ವೀಡಿಯೋದಿಂದ ಬಯಲಾಯ್ತು ಅಸಲಿಯತ್ತು | ABVP | ONEINDIA KANNADA

ನವದೆಹಲಿ, ಜನವರಿ 10: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಭಾನುವಾರ ನಡೆದ ಹಿಂಸಾಚಾರದ ವಿಡಿಯೋವೊಂದು ಎಬಿವಿಪಿಗೆ ತೀವ್ರ ಮುಜುಗರ ಉಂಟುಮಾಡಿದೆ. ಎಡಪಂಥೀಯ ಗುಂಪುಗಳು ಎಬಿವಿಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಎನ್ನಲಾಗಿದ್ದ ವಿಡಿಯೋದ ಸತ್ಯಾಂಶ ಬಯಲಾಗಿದ್ದು, ವಾಸ್ತವವಾಗಿ ದಾಳಿ ಮಾಡುತ್ತಿದ್ದ ವ್ಯಕ್ತಿ ಎಬಿವಿಪಿಯ ಕಾರ್ಯಕರ್ತ ಎನ್ನುವುದು ಬಹಿರಂಗವಾಗಿದೆ.

ಈ ವಿಡಿಯೋವನ್ನು ಜೆಎನ್‌ಯು ಉಪ ಕುಲಪತಿ ಎಂ ಜಗದೀಶ್ ಕುಮಾರ್ ರೀಟ್ವೀಟ್ ಮಾಡಿದ್ದರು. 'ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳನ್ನು ಹಾಳುಮಾಡುವ ಹಿಂಸಾಚಾರದ ಹಿಂದಿನ ಕೈಗಳ ಬಗ್ಗೆ ವಿಡಿಯೋ ಪುರಾವೆ ಒದಗಿಸುತ್ತದೆ' ಎಂದು ಅವರು ಬರೆದಿದ್ದರು.

ಜೆಎನ್‌ಯು: ಬಿಡುಗಡೆಯಾದ ಹೊಸ ವಿಡಿಯೋ, ಹೇಳುತ್ತೆ ಬೇರೊಂದು ಕಥೆಯಾ ಜೆಎನ್‌ಯು: ಬಿಡುಗಡೆಯಾದ ಹೊಸ ವಿಡಿಯೋ, ಹೇಳುತ್ತೆ ಬೇರೊಂದು ಕಥೆಯಾ

ಕೆಂಪು ಜಾಕೆಟ್ ತೊಟ್ಟ ವ್ಯಕ್ತಿಯು ಹಸಿರು ಉಡುಪು ಧರಿಸಿದ ವ್ಯಕ್ತಿಗೆ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದನ್ನು ಮೊದಲು ಹಂಚಿಕೊಂಡಿದ್ದ ಪತ್ರಕರ್ತರೊಬ್ಬರು, 'ಇದು ಜೆಎನ್‌ಯು ಆವರಣದಲ್ಲಿ ಘರ್ಷಣೆಗೆ ಕುಮ್ಮಕ್ಕು ನೀಡಿದೆ. ಎಡ ಪಕ್ಷಗಳೊಂದಿಗೆ ನಂಟು ಹೊಂದಿರುವ ವಿದ್ಯಾರ್ಥಿಗಳು ಪ್ರವೇಶ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಎಬಿವಿಪಿ ಸದಸ್ಯರಿಗೆ ಥಳಿಸಿದ್ದಾರೆ. ಎಡಪಕ್ಷಗಳಿಂದ ಬಂದ ವಿದ್ಯಾರ್ಥಿಗಳು ಜೆಎನ್‌ಯುದಲ್ಲಿ ಪ್ರವೇಶ ಪ್ರಕ್ರಿಯೆಯನ್ನು ರದ್ದುಗೊಳಿಸಲು ಬಯಸಿದ್ದಾರೆ' ಎಂದು ಬರೆದಿದ್ದರು.

ವೈರಲ್ ಆಗಿದ್ದ ವಿಡಿಯೋ

ಈ ವಿಡಿಯೋವನ್ನು ಪ್ರಸಾರ ಭಾರತಿ ಸುದ್ದಿ ಸೇವೆಯು ಹಂಚಿಕೊಂಡಿತ್ತು. ಬಳಿಕ ಬಿಜೆಪಿ ಸದಸ್ಯರಾದ ಹಿಮಾಚಲ ಪ್ರದೇಶ ಬಿಜೆಪಿ ಸಂಚಾಲಕ ಮತ್ತು ಐಟಿ ಮುಖ್ಯಸ್ಥ ಚೇತನ್ ಭ್ರಾಗ್ತಾ, ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ಬಿಜೆಪಿ ವಕ್ತಾರ ಸುರೇಶ್ ನಖುವಾ ಹಂಚಿಕೊಂಡಿದ್ದರು. ಬಳಿಕ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಶೇರ್ ಮಾಡಿದ್ದರು.

ವಿಡಿಯೋ: ಬಿಜೆಪಿ-ಕಾಂಗ್ರೆಸ್ ವಿದ್ಯಾರ್ಥಿ ಘಟಕಗಳ ಬೀದಿ ಕಾಳಗ, 10 ಮಂದಿಗೆ ಗಾಯವಿಡಿಯೋ: ಬಿಜೆಪಿ-ಕಾಂಗ್ರೆಸ್ ವಿದ್ಯಾರ್ಥಿ ಘಟಕಗಳ ಬೀದಿ ಕಾಳಗ, 10 ಮಂದಿಗೆ ಗಾಯ

ಹಲ್ಲೆ ನಡೆಸಿದ್ದು ಎಬಿವಿಪಿ ಸದಸ್ಯ

ಹಲ್ಲೆ ನಡೆಸಿದ್ದು ಎಬಿವಿಪಿ ಸದಸ್ಯ

ಆದರೆ ನಕಲಿ ಸುದ್ದಿಗಳನ್ನು ಪತ್ತೆಹಚ್ಚುವ 'ಆಲ್ಟ್ ನ್ಯೂಸ್' ಈ ವಿಡಿಯೋದ ಅಸಲಿಯತ್ತನ್ನು ಪತ್ತೆಹಚ್ಚಿದೆ. ಕೆಂಪು ಜಾಕೆಟ್ ಧರಿಸಿದ್ದ ವ್ಯಕ್ತಿ ಜೆಎನ್‌ಯುದ ಅಂತಾರಾಷ್ಟ್ರೀಯ ಅಧ್ಯಯನ ಶಾಲೆಯ (ಎಸ್‌ಐಎಸ್) ವೆಸ್ಟ್ ಏಷ್ಯನ್ ಸ್ಟಡೀಸ್‌ನ ಮೂರನೇ ವರ್ಷದ ಪಿಎಚ್‌ಡಿ ವಿದ್ಯಾರ್ಥಿ ಎಬಿವಿಪಿ ಸದಸ್ಯ ಶರ್ವೇಂದರ್ ಕುಮಾರ್. ಎಸ್‌ಐಎಸ್‌ನ ಇಬ್ಬರು ಸೇರಿದಂತೆ ಜೆಎನ್‌ಯುದ ನಾಲ್ವರು ವಿದ್ಯಾರ್ಥಿಗಳನ್ನು ಇದನ್ನು ಖಚಿತಪಡಿಸಿದ್ದಾರೆ ಎಂದು ಆಲ್ಟ್ ನ್ಯೂಸ್ ತಿಳಿಸಿದೆ. ಈ ವಿಡಿಯೋದಲ್ಲಿ ಕಾಣಿಸಿರುವುದು ಶರ್ವೇಂದರ್ ಕುಮಾರ್, ಎಸ್‌ಐಎಸ್‌ನ ವಿದ್ಯಾರ್ಥಿಯೇ ಆಗಿರುವ ವಿವೇಕ್ ಪಾಂಡೆಯನ್ನು ಹೊಡೆಯುತ್ತಿರುವ ದೃಶ್ಯ.

ನಮ್ಮ ಸದಸ್ಯ ಹೌದು

ನಮ್ಮ ಸದಸ್ಯ ಹೌದು

ಈ ಬಗ್ಗೆ ಜೆಎನ್‌ಯುದ ಎಬಿವಿಪಿ ಘಟಕದ ಅಧ್ಯಕ್ಷ ದುರ್ಗೇಶ್ ಕುಮಾರ್ ಅವರನ್ನು ಸಂಪರ್ಕಿಸಿದಾಗ, 'ಎಬಿವಿಪಿಯ ಯಾವುದೇ ಸದಸ್ಯ, ಯಾವುದೇ ಹಿಂಸಾಚಾರದಲ್ಲಿ ಪಾಲ್ಗೊಂಡಿಲ್ಲ' ಎಂದಿದ್ದರು. ಆದರೆ ವಿಡಿಯೋದಲ್ಲಿ ಶರ್ವೇಂದರ್ ಕುಮಾರ್ ಹಲ್ಲೆ ನಡೆಸಿರುವುದು ಕಾಣಿಸುತ್ತದೆ ಎಂದಾಗ ಅವರು ಅದನ್ನು ಒಪ್ಪಿಕೊಂಡಿದ್ದರು' ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಶರ್ವೇಂದರ್ ಕುಮಾರ್ ಎಬಿವಿಪಿಯ ಸದಸ್ಯ ಮತ್ತು ವೆಸ್ಟ್ ಏಷ್ಯನ್ ಸ್ಟಡೀಸ್‌ನಲ್ಲಿ ತಮ್ಮ ಕಿರಿಯ ಎಂದು ಒಪ್ಪಿಕೊಂಡಿರುವ ದುರ್ಗೇಶ್ ಕುಮಾರ್, 'ಅವರು ಯಾರನ್ನೋ ಏಕೆ ಹೊಡೆದರೋ, ನನಗೆ ಗೊತ್ತಿಲ್ಲ' ಎಂದಿದ್ದಾರೆ.

ರಾಷ್ಟ್ರಪತಿ ಭವನದತ್ತ ಪ್ರತಿಭಟನಾ ಮೆರವಣಿಗೆ: ಜೆಎನ್‌ಯು ವಿದ್ಯಾರ್ಥಿಗಳ ವಶರಾಷ್ಟ್ರಪತಿ ಭವನದತ್ತ ಪ್ರತಿಭಟನಾ ಮೆರವಣಿಗೆ: ಜೆಎನ್‌ಯು ವಿದ್ಯಾರ್ಥಿಗಳ ವಶ

ಉಪ ಕುಲಪತಿ ನೀಡಿದ ಪ್ರತಿಕ್ರಿಯೆ

ಉಪ ಕುಲಪತಿ ನೀಡಿದ ಪ್ರತಿಕ್ರಿಯೆ

ಸುಳ್ಳು ಆರೋಪದೊಂದಿಗೆ ವಿಡಿಯೋವನ್ನು ಏಕೆ ಹಂಚಿಕೊಂಡಿದ್ದೀರಿ ಎಂದು ಜೆಎನ್‌ಯು ಉಪ ಕುಲಪತಿ ಜಗದೀಶ್ ಕುಮಾರ್ ಅವರನ್ನು ಪ್ರಶ್ನಿಸಿದಾಗ, 'ನಾನು ಕೂಡ ಎಂಎಚ್‌ಆರ್‌ಡಿ ಖಾತೆಯ ಟ್ವೀಟ್‌ಅನ್ನು ಹಂಚಿಕೊಂಡಿದ್ದೇನೆ. ಇದು ಸರ್ಕಾರದಿಂದ ನಡೆಯುತ್ತಿರುವ ಟ್ವಿಟ್ಟರ್ ಖಾತೆಗಳಾಗಿವೆ. ಭಾನುವಾರದ ಹಿಂಸಾಚಾರದಲ್ಲಿ ಭಾಗಿಯಾದವರನ್ನು ಗುರುತಿಸಲು ತನಿಖೆಯಿಂದ ಸಾಧ್ಯವಾಗಲಿದೆ' ಎಂದು ಹೇಳಿದ್ದಾಗಿ ಪತ್ರಿಕೆ ವರದಿ ಮಾಡಿದೆ.

English summary
A video went viral claiming JNU left wing students beating ABVP members was false, as per Altnews which assesses fake news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X