• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫೇಸ್‌ಬುಕ್ ರಾಜಕೀಯ ವಿವಾದ: ಉದ್ಯೋಗಿಗಳ ಆಂತರಿಕ ವಿಚಾರಣೆ

|
Google Oneindia Kannada News

ನವದೆಹಲಿ, ಆಗಸ್ಟ್‌ 20: ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್‌ ಭಾರತದಲ್ಲಿ ಬಿಜೆಪಿಯ ನಿಯಂತ್ರಣದಲ್ಲಿದೆ ಎಂಬ ರಾಜಕೀಯ ಆರೋಪಗಳು ಬಂದ ನಂತರ ಫೇಸ್‌ಬುಕ್ ಸಾರ್ವಜನಿಕ ನೀತಿ ನಿರ್ದೇಶಕಿ ಅಂಖಿ ದಾಸ್‌ ಸೇರಿದಂತೆ ಅತಿದೊಡ್ಡ ಮಾರುಕಟ್ಟೆಯಲ್ಲಿ ರಾಜಕೀಯ ವಿಷಯವನ್ನು ಹೇಗೆ ನಿಯಂತ್ರಿಸುತ್ತಾರೆ ಎಂಬ ಬಗ್ಗೆ ನೌಕರರಿಂದ ಆಂತರಿಕವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಆಗಸ್ಟ್ 14 ರಂದು ಯುಎಸ್ ಮೂಲದ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟಗೊಂಡ ವರದಿಯೊಂದು ಫೇಸ್‌ಬುಕ್ ಭಾರತದಲ್ಲಿ ತನ್ನ ಕಾರ್ಯವನ್ನು ಸುಧಾರಿಸಲು ಯತ್ನಿಸುತ್ತಿದ್ದು, ಯಾವುದೇ ತೊಂದರೆಗಳಿಲ್ಲದೆ ಕೆಲಸ ಮಾಡಲು ಬಿಜೆಪಿ ನಾಯಕರ ಪರ ಕಾರ್ಯನಿರ್ವಹಿಸುತ್ತಿದೆ ಎಂದಿದೆ.

ಫೇಸ್‌ಬುಕ್ ಪಾಲಿಸಿ ಮುಖ್ಯಸ್ಥೆ ಅಂಖಿ ದಾಸ್‌ಗೆ ಜೀವ ಬೆದರಿಕೆ: ದೂರು ದಾಖಲುಫೇಸ್‌ಬುಕ್ ಪಾಲಿಸಿ ಮುಖ್ಯಸ್ಥೆ ಅಂಖಿ ದಾಸ್‌ಗೆ ಜೀವ ಬೆದರಿಕೆ: ದೂರು ದಾಖಲು

ಕಂಪನಿಯು ದ್ವೇಷ-ಭಾಷಣ ನಿಯಮಗಳನ್ನು ಬಿಜೆಪಿ ನಾಯರಿಗೆ ಅನ್ವಯಿಸುವುದನ್ನು ದಾಸ್ ವಿರೋಧಿಸಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ ನಂತರ ವಿಶ್ವದ ಅತಿದೊಡ್ಡ ಸಾಮಾಜಿಕ ನೆಟ್‌ವರ್ಕ್ ಭಾರತದಲ್ಲಿ ಸಾರ್ವಜನಿಕ-ಸಂಬಂಧ ಮತ್ತು ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ.

ಇದರ ಜೊತೆಗೆ ಇತ್ತೀಚೆಗೆಷ್ಟೇ ಅಂಖಿ ದಾಸ್‌ ತಮಗೆ ಫೇಸ್‌ಬುಕ್ ಹಾಗೂ ಟ್ವಿಟರ್ ಮೂಲಕ ಬೆದರಿಕೆ ನೀಡಲಾಗುತ್ತಿದೆ ಎಂದು ದೂರು ನೀಡಿದ್ದಾರೆ. ಜೊತೆಗೆ ಫೋನ್ ಮಾಡಿ ಕೂಡ ಬೆದರಿಕೆ ಹಾಕಲಾಗುತ್ತಿದೆ ಎಂದು ತಮ್ಮ ನಾಲ್ಕು ಪುಟಗಳ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಮೆರಿಕಾ ಮತ್ತು ಪ್ರಪಂಚದಾದ್ಯಂತ, ಫೇಸ್‌ಬುಕ್ ಉದ್ಯೋಗಿಗಳು ಭಾರತದಲ್ಲಿನ ತಂಡವು ಸಾಕಷ್ಟು ಕಾರ್ಯವಿಧಾನಗಳು ಮತ್ತು ವಿಷಯ ನಿಯಂತ್ರಣ ಅಭ್ಯಾಸಗಳನ್ನು ಅನುಸರಿಸುತ್ತಿದೆಯೇ ಎಂಬ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಎಂದು ಚರ್ಚೆಯ ಪರಿಚಿತ ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.

English summary
Facebook and its top lobbying executive in India, Ankhi Das, are facing questions internally from employees over how political content is regulated in its biggest market
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X