ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಗ್ಗೆ ಎಚ್ಚರವಿರಲಿ, ಹೊಸದಾಗಿ ಎರಡು ರೋಗಲಕ್ಷಣ ಸೇರ್ಪಡೆ?

|
Google Oneindia Kannada News

ದೆಹಲಿ, ಜೂನ್ 11: ರೋಗ ಲಕ್ಷಣಗಳು ಇಲ್ಲವಾದರೂ ಕೊರೊನಾ ವೈರಸ್ ಬರುತ್ತಿದೆ ಎಂಬ ಆಘಾತಕಾರಿ ವಿಷಯವನ್ನು ವೈದ್ಯಕೀಯ ತಜ್ಞರ ಅಧ್ಯಯನಗಳು ಹೇಳುತ್ತಿದೆ. ಆದರೂ ಸೋಂಕಿನ ಲಕ್ಷಣಗಳ ಕುರಿತು ಸಾರ್ವಜನಿಕರು ಎಚ್ಚರಿಕೆಯಂದಿರಬೇಕು.

ಇಲ್ಲಿಯವರೆಗೂ ಸುಮಾರು 13 ರೀತಿಯ ರೋಗ ಲಕ್ಷಣಗಳು ಕಂಡು ಬಂದರೆ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಬಹುದು ಎಂದು ನಿರ್ಧರಿಸಲಾಗಿದೆ. ಇದೀಗ, ಇನ್ನು ಎರಡು ರೋಗ ಲಕ್ಷಣ ಹೊಸದಾಗಿ ಸೇರ್ಪಡೆ ಮಾಡುವ ಬಗ್ಗೆ ಚರ್ಚೆಯಾಗ್ತಿದೆ ಎಂಬ ವಿಚಾರ ಬಹಿರಂಗವಾಗಿದೆ. ಮುಂದೆ ಓದಿ....

ಭಾರತದಲ್ಲಿ ಕೊರೊನಾ ವೈರಸ್ ಅಂಟಿದವರಿಗೆಲ್ಲ ಸಾವು ಪಕ್ಕಾನಾ?ಭಾರತದಲ್ಲಿ ಕೊರೊನಾ ವೈರಸ್ ಅಂಟಿದವರಿಗೆಲ್ಲ ಸಾವು ಪಕ್ಕಾನಾ?

ಯಾವುದು ಆ ಎರಡು ರೋಗಲಕ್ಷಣ

ಯಾವುದು ಆ ಎರಡು ರೋಗಲಕ್ಷಣ

ಕೊರೊನಾ ವೈರಸ್ ಪತ್ತೆ ಹಚ್ಚಲು ಅನುಸರಿಸಲಾಗುತ್ತಿರುವ ಮಾನದಂಡಗಳಲ್ಲಿ ವಾಸನೆ ಮತ್ತು ಅಭಿರುಚಿ ನಷ್ಟವನ್ನು ಸೇರಿಸಲು ಸರ್ಕಾರ ಚಿಂತಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ನಿಯೋಜಿಸಿರುವ ರಾಷ್ಟ್ರೀಯ ಕಾರ್ಯಪಡೆ ಸಮಿತಿಯೂ ಈ ಕುರಿತು ಚರ್ಚಿಸಿದೆ ಎಂದು ಸಮಿತಿ ಸದಸ್ಯರು ಬುಧವಾರ ಹೇಳಿದ್ದಾರೆ.

ರೋಗಿಗಳಲ್ಲಿ ಇದನ್ನು ಗುರುತಿಸಲಾಗಿದೆ

ರೋಗಿಗಳಲ್ಲಿ ಇದನ್ನು ಗುರುತಿಸಲಾಗಿದೆ

ಕೊರೊನಾ ಸೋಂಕಿನಿಂದ ಬಳಲುತ್ತಿರುವ ಅನೇಕ ರೋಗಿಗಳಲ್ಲಿ ಈ ಲಕ್ಷಣ ಕಂಡು ಬಂದಿದೆ. ವಾಸನೆ ಗ್ರಹಿಸುವುದು ಮತ್ತು ಅಭಿರುಚಿ ಗುರುತಿಸದೆ ಇರುವುದು ಕೆಲವು ರೋಗಿಗಳಲ್ಲಿ ಗಮನಿಸಲಾಗಿದೆ. ಹಾಗಾಗಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಜೊತೆ ಈ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳ ತಿಳಿಸಿವೆ. ಆದರೆ, ಈ ಕುರಿತು ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಆರಂಭದಲ್ಲಿ ಜ್ವರ, ಕೆಮ್ಮು, ಶೀತ

ಆರಂಭದಲ್ಲಿ ಜ್ವರ, ಕೆಮ್ಮು, ಶೀತ

ಕೊವಿಡ್ ಸೋಂಕು ಪರೀಕ್ಷೆಯ ಮೊದಲ ಮಾನದಂಡವನ್ನು ಜನವರಿಯಲ್ಲಿ ನಿಗದಿಪಡಿಸಲಾಗಿತ್ತು. ಜ್ವರ, ಕೆಮ್ಮು ಮತ್ತು ಉಸಿರಾಟದ ಲಕ್ಷಣಗಳನ್ನು ಕೊರೊನಾ ರೋಗಲಕ್ಷಣಗಳಾಗಿ ಗುರುತಿಸಲಾಯಿತು. ನಂತರದ ದಿನದಲ್ಲಿ ಜಠರ ಕರುಳಿನ ಸಮಸ್ಯೆಗಳಾದ ಅತಿಸಾರ ಅಥವಾ ವಾಂತಿ ಕೂಡ ಪಟ್ಟಿಯಲ್ಲಿ ಸೇರಿಸಲಾಯಿತು.

13 ರೋಗ ಲಕ್ಷಣ ಪಟ್ಟಿ ಮಾಡಲಾಗಿದೆ

13 ರೋಗ ಲಕ್ಷಣ ಪಟ್ಟಿ ಮಾಡಲಾಗಿದೆ

ಪ್ರಸ್ತುತ ಜ್ವರ, ಕೆಮ್ಮು, ಅತಿಸಾರ, ವಾಂತಿ, ಹೊಟ್ಟೆ ನೋವು, ಉಸಿರಾಟ, ವಾಕರಿಕೆ, ಹಿಮೋಪ್ಟಿಸಿಸ್ (ರಕ್ತದ ಕೆಮ್ಮು), ದೇಹದ ನೋವು, ಗಂಟಲು ನೋವು, ಎದೆ ನೋವು, ನೆಗಡಿ ಮತ್ತು ಕಫ ಸೇರಿದಂತೆ ಒಂದು ಅಥವಾ ಹೆಚ್ಚಿನ ರೋಗ ಲಕ್ಷಣ ಕಂಡುಬಂದರೆ ಅಂತವರು ಕೊರೊನಾ ಪರೀಕ್ಷೆಗೆ ಒಳಪಡಲು ಅನುಮೋದಿಸಲಾಗಿದೆ. ಈಗ ರುಚಿ ಮತ್ತು ವಾಸನೆ ಗ್ರಹಿಕೆಯ ಕುರಿತು ಲಕ್ಷಣಗಳು ಸೇರಿದರೆ 15 ಲಕ್ಷಣಗಳು ಆಗಲಿದೆ.

English summary
National task force listed Extra two criteria to COVID 19 Test. but its not finalize. may be its also added soon says report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X