ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking news: ಅಬಕಾರಿ ಹಗರಣ: 40 ಕಡೆ ಇಡಿ ದಾಳಿ, ಬಿಜೆಪಿ ಕುಟುಕು ಸಿಬಿಐಗೆ

|
Google Oneindia Kannada News

ನವದೆಹಲಿ ಸೆಪ್ಟೆಂಬರ್ 16: ಅಬಕಾರಿ ಹಗರಣದಲ್ಲಿ ಬಿಜೆಪಿ ಗುರುವಾರ ಕುಟುಕು ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಆರೋಪಿಗಳು ಕೋಟ್ಯಂತರ ಮೌಲ್ಯದ ವಹಿವಾಟಿನ ಬಗ್ಗೆ ಮಾತನಾಡುತ್ತಿದ್ದಾರೆ. ಈ ವಿಡಿಯೋ ನಂತರ ಶುಕ್ರವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ (ಇಡಿ) ದೇಶದ ಹಲವು ನಗರಗಳ 40 ಸ್ಥಳಗಳಲ್ಲಿ ದಾಳಿ ನಡೆಸಿದೆ. ಇಡಿ ಪ್ರಕಾರ, ಹೈದರಾಬಾದ್, ಬೆಂಗಳೂರು, ಮಂಗಳೂರು ಮತ್ತು ಚೆನ್ನೈನಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈ ದಾಳಿಯಲ್ಲಿ ಏನು ಪತ್ತೆಯಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಇದಕ್ಕೂ ಮೊದಲು ಸೆಪ್ಟೆಂಬರ್ 6 ರಂದು, ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದೆಹಲಿ ಮತ್ತು ಇತರ ಹಲವು ನಗರಗಳಲ್ಲಿ 35 ಸ್ಥಳಗಳಲ್ಲಿ ದಾಳಿ ನಡೆಸಿತ್ತು.

ಮತ್ತೊಂದೆಡೆ, ಗುರುವಾರ ಪಕ್ಷವು ಬಿಡುಗಡೆ ಮಾಡಿದ ಬಿಜೆಪಿ ಕುಟುಕನ್ನು ಸಿಬಿಐ ಕೂಡ ಪರಿಗಣಿಸಿದೆ. ಈ ಸ್ಟಿಂಗ್ ವಿಡಿಯೊದಲ್ಲಿ ಆರೋಪಿ ಅಮಿತ್ ಅರೋರಾ, 'ಎಎಪಿ ಸರ್ಕಾರವು ತನ್ನ ಹೊಸ ನೀತಿಯಿಂದ ಸಣ್ಣ ಆಟಗಾರರನ್ನು ಹೊರಗಿಟ್ಟಿದೆ, ಇದರಿಂದಾಗಿ ಕೆಲವೇ ಜನರು ಮದ್ಯದ ವ್ಯವಹಾರದಲ್ಲಿ ಏಕಸ್ವಾಮ್ಯವನ್ನು ಹೊಂದಬಹುದು' ಎಂದು ಹೇಳಿದ್ದಾರೆ. ಇದಲ್ಲದೆ, ದೆಹಲಿ ಸರ್ಕಾರದ ಸಹಾಯದಿಂದ ಅವರು ಹೇಗೆ ಕೋಟಿಗಟ್ಟಲೆ ಹಣ ಮಾಡಿದರು ಎಂಬುದನ್ನು ಅವರು ಹೇಳಿದರು. ಅಮಿತ್ ಅರೋರಾ ಅವರ ಏಳು ನಿಮಿಷಗಳ ಅವಧಿಯ ವಿಡಿಯೊವನ್ನು ಈಗ ಸಿಬಿಐ ತನಿಖೆ ನಡೆಸುತ್ತಿದ್ದು, ಮದ್ಯ ನೀತಿ ಹಗರಣದ ಬಗ್ಗೆ ಹೊಸ ಸಂಗತಿಗಳನ್ನು ಬಹಿರಂಗಪಡಿಸುತ್ತಿದೆ.

ಮೂಲಗಳ ಪ್ರಕಾರ ಅಮಿತ್ ಅರೋರಾ ಅವರು ಮನೀಶ್ ಸಿಸೋಡಿಯಾ ಅವರಿಗೆ ಆಪ್ತರು. ಅವರನ್ನು ಸಿಬಿಐ ವಿಚಾರಣೆಗೊಳಪಡಿಸಿದೆ. ಜೊತೆಗೆ ಅವರ ಕಂಪನಿ ಬಡ್ಡಿ ರಿಟೇಲ್ ಪ್ರೈವೇಟ್ ಲಿಮಿಟೆಡ್ ಮೇಲೆ ದಾಳಿ ನಡೆಸಲಾಗಿದೆ. ಈ ವಿಡಿಯೋ ನಿಜವಾಗಿದ್ದರೆ, ಅರೋರಾ ಜೊತೆಗೆ ಸಿಸೋಡಿಯಾ ಕೂಡ ಸಿಕ್ಕಿಬೀಳಬಹುದು.

Excise scam: ED raids 40 places, BJP stings CBI

ಬಿಜೆಪಿಯ ಕುಟುಕು ಕುರಿತು ಮಾತನಾಡಿದ ಸಿಸೋಡಿಯಾ ಅವರು ಬಿಜೆಪಿ ಈ ಸ್ಟಿಂಗ್ ವಿಡಿಯೋ ಸಿಬಿಐಗೆ ನೀಡಬೇಕು ಮತ್ತು ನಾಲ್ಕು ದಿನಗಳಲ್ಲಿ ತನಿಖೆಗೆ ಕೇಳಬೇಕು ಎಂದು ಹೇಳಿದ್ದರು. ಸೋಮವಾರದೊಳಗೆ ಈ ಕುಟುಕು ತನಿಖೆ ಪೂರ್ಣಗೊಳ್ಳಬೇಕು. ಇದು ನಿಜವೇ ಆಗಿದ್ದರೆ ಅವರನ್ನು ಬಂಧಿಸಬೇಕು, ಇಲ್ಲದಿದ್ದರೆ ಮೋದಿ ಸರ್ಕಾರ ದೇಶದ ಕ್ಷಮೆ ಯಾಚಿಸಬೇಕು. ಬಿಜೆಪಿ ಮತ್ತು ಪ್ರಧಾನಿ ಮೋದಿ ಕಚೇರಿ ಹಲವು ರಾಜ್ಯಗಳಲ್ಲಿ ಸರ್ಕಾರಗಳನ್ನು ಬೀಳಿಸಲು ಪಿತೂರಿ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

English summary
In the excise scam, the BJP on Thursday released a sting video in which the accused are talking about transactions worth crores. After this video, the Enforcement Directorate (ED) raided 40 locations in many cities of the country on Friday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X