ಕೇಜ್ರಿವಾಲ್ ವಿರುದ್ಧ ಇಂಟರ್ನೆಟ್ನಲ್ಲಿ ಸಿಕ್ಕಾಪಟ್ಟೆ ತೆಗಳಿಕೆ
ನವದೆಹಲಿ, ಏಪ್ರಿಲ್ 4: ದೇಶದಲ್ಲಿ ಚುನಾವಣೆ ಕಾವು ಹಾಗಿರಲಿ ಕೆಲ ರಾಜಕಾರಣಿಗಳು ಸಿಕ್ಕಾಪಟ್ಟೆ ಜನರ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಇಂಟರ್ನೆಟ್ ಬಳಕೆದಾರರು ಕಳೆದ ವಾರ ಅರವಿಂದ್ ಕೇಜ್ರಿವಾಲ್, ದಿಗ್ವಿಜಯ್ ಸಿಂಗ್ ಮತ್ತು ನರೇಂದ್ರ ಮೋದಿ ಮೇಲೆ ಮುಗಿಬಿದ್ದು, ಸಿಕ್ಕಾಪಟ್ಟೆ ಬಯ್ದಾಡಿದ್ದಾರೆ. ರಾಹುಲ್ ಗಾಂಧಿ 8ನೆಯ ಸ್ಥಾನದಲ್ಲಿದ್ದಾರೆ.
ಚುನಾವಣೆ ಸಮಯವಾದ್ದರಿಂದ ಜನ ರಾಜಕೀಯದ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದು, ಇಂಟರ್ನೆಟ್ನನಲ್ಲಿ ಒಂದೇ ಸಮನೆ ಕಮೆಂಟುಗಳನ್ನ ಹಾಕುತ್ತಾ, ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಮಾರ್ಚ್ 28ರಿಂದ ಏಪ್ರಿಲ್ 3ರವರೆಗಿನ ಒಂದು ವಾರದ ಮಾಹಿತಿ ಪ್ರಕಾರ ಅತಿ ಹೆಚ್ಚು ಬೈಗುಳ ತಿಂದಿರುವುದು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್.
ಇನ್ನು, ಮಸಿ ಹಾಕಿಸಿಕೊಂಡಿದ್ದು, ಕೆನ್ನೆಗೆ ಏಟು ತಿಂದಿದ್ದು, ಕುತ್ತಿಗೆಗೆ ಕೈಹಾಕಿದ್ದು, ಮೊಟ್ಟೆ ಎಸೆದಿದ್ದು ಮುಂತಾದ ಕಿಡಿಗೇಡಿ ಕೃತ್ಯಗಳನ್ನು ಇಲ್ಲಿ ಗಣನೆಗೆ ತೆಗೆದುಕೊಂಡಿಲ್ಲ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಎಂಟಿಎಸ್ (MTS) ಮತ್ತು ಸೋಷಿಯಲ್ ಸಮೋಸಾ (Social Samosa) ಸಂಸ್ಥೆಗಳು ಜಂಟಿಯಾಗಿ ಬಿಡುಗಡೆ ಮಾಡಿರುವ ಎಂಟಿಎಸ್ ಎಲೆಕ್ಷನ್ ಟ್ರ್ಯಾಕರ್ ಇಂಟರ್ನೆಟ್ ಜಗತ್ತಿನಲ್ಲಿರುವ ಫೇಸ್ ಬುಕ್, ಟ್ವಿಟ್ಟರ್, ಯೂ ಟ್ಯೂಬ್, ಗೂಗಲ್ ಪ್ಲಸ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಜನರು ಮಾಡುವ ಕಮೆಂಟುಗಳನ್ನ ಸಂಗ್ರಹಿಸಿ, ಈ ವರದಿಯನ್ನು ಸಿದ್ದಪಡಿಸಿದೆ.
ಇನ್ನು, ಪಕ್ಷಗಳ ವಿಚಾರಕ್ಕೆ ಬಂದರೆ ಕಳೆದ ವಾರ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸಮಾನವಾಗಿ ಬೈಗುಳ ತಿಂದಿವೆ. ಆಮ್ ಆದ್ಮಿ ಕೂಡ ಹಿಂದೆ ಬಿದ್ದಿಲ್ಲ.
Facebookನಲ್ಲಿ BJPಗೆ 35,15,074 likes ಇದ್ದರೆ, Congressಗೆ 25,68,983 likes ಮತ್ತು AAPಗೆ 18,65,980 likes
Twitterನಲ್ಲಿ AamAadmiPartyಗೆ 6,02,384 followers ಇದ್ದರೆ, BJP4Indiaಗೆ 4,20,647 followers ಮತ್ತು ತೃತೀಯ ಸ್ಥಾನದಲ್ಲಿ INCIndiaಗೆ 1,64,038 followers ಇದ್ದಾರೆ.
ಯಾರಿಗೆಷ್ಟು ಬೈಗುಳ?
1) ಅರವಿಂದ್ ಕೇಜ್ರಿವಾಲ್ - 19.78%, 2) ದಿಗ್ವಿಜಯ್ ಸಿಂಗ್ - 18.18%, 3) ಮೋದಿ - 17.09%, 4) ಅರುಣ್ ಜೇಟ್ಲಿ - 16.4%, 5) ಸೋನಿಯಾ ಗಾಂಧಿ - 13.77%, 6) ಉಮರ್ ಅಬ್ದುಲ್ಲಾ - 13.31%, 7) ಶರದ್ ಪವಾರ್ - 13.31%, 8) ರಾಹುಲ್ ಗಾಂಧಿ - 11%












Click it and Unblock the Notifications