ಆರ್ಥಿಕ ಸಮೀಕ್ಷೆ 2022: ಬೆಂಗಳೂರು ಅಲ್ಲ ದೆಹಲಿ ಈಗ ಸ್ಟಾರ್ಟ್ ಅಪ್‌ಗಳ ರಾಜಧಾನಿ
ನವದೆಹಲಿ, ಜನವರಿ 31: ಆರ್ಥಿಕ ಸಮೀಕ್ಷೆ 2022ರ ಪ್ರಕಾರ ಬೆಂಗಳೂರು ಬದಲು ದೆಹಲಿ ಸ್ಟಾರ್ಟ್ ಅಪ್ ರಾಜಧಾನಿಯಾಗಿದೆ. 2021-22ರ ಆರ್ಥಿಕ ಸಮೀಕ್ಷಾ ವರದಿ ಪ್ರಕಾರ, ಏಪ್ರಿಲ್ 2019 ಮತ್ತು ಡಿಸೆಂಬರ್ 2021ರ ನಡುವೆ ಬೆಂಗಳೂರಿನ 4,145 ಸ್ಟಾರ್ಟ್ ಅಪ್ ಗಳೊಂದಿಗೆ ಹೋಲಿಸಿದಾಗ ದೆಹಲಿಯಲ್ಲಿ ಗುರುತಿಸಲಾದ ಸುಮಾರು 5 ಸಾವಿರ ಸ್ಟಾರ್ಟ್ ಆಪ್ ಗಳು ಸೇರಿವೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬಾಹ್ಯಾಕಾಶ ವಲಯದಲ್ಲಿ ಸ್ಟಾರ್ಟ್ ಅಪ್ ಗಳ ಸಂಖ್ಯೆ ಹೆಚ್ಚಾಗಿದೆ. ಸುಮಾರು 75 ಸ್ಟಾರ್ಟ್ ಅಪ್ ಗಳು ಬಾಹ್ಯಾಕಾಶ ತಂತ್ರಜ್ಞಾನ ವರ್ಗದಲ್ಲಿವೆ. 2021ರಲ್ಲಿ 555 ಜಿಲ್ಲೆಗಳು ಕನಿಷ್ಠ ಒಂದು ಸ್ಟಾರ್ಟ್ ಅಪ್ ಹೊಂದಿವೆ. ಇದಕ್ಕೆ ಬದಲಿಗೆ 2016-17ರಲ್ಲಿ ಕೇವಲ 121 ಜಿಲ್ಲೆಗಳು ಕನಿಷ್ಠ ಒಂದು ಹೊಸ ಸ್ಟಾರ್ಟ್ ಆಪ್ ಗಳನ್ನು ಹೊಂದಿದ್ದವು.
2021ರಲ್ಲಿ ಅಮೆರಿಕದಲ್ಲಿ 487 ಮತ್ತು ಚೀನಾದಲ್ಲಿ 301 ಯೂನಿಕಾರ್ನ್ ಗಳು ಸೇರಿದ್ದವು. ಜನವರಿ 14, 2022ರ ಹೊತ್ತಿಗೆ ದೇಶದಲ್ಲಿ ಒಟ್ಟು 277. 77 ಬಿಲಿಯನ್ ಮೌಲ್ಯದೊಂದಿಗೆ 83 ಯೂನಿಕಾರ್ನ್ ಗಳು ದೇಶದಲ್ಲಿ ಇರಲಿವೆ. ಬಹುತೇಕ ಈ ಸ್ಟಾರ್ಟ್ ಅಪ್ ಗಳು ಸೇವಾ ವಲಯದ್ದಾಗಿವೆ. 2016-17ರಲ್ಲಿ 733 ಸ್ಟಾರ್ಟ್ ಅಪ್ ಗಳಿಂದ 2021-22ರ ವೇಳೆಗೆ ದೇಶದಲ್ಲಿ ಸುಮಾರು 14,000 ಹೊಸ ಸ್ಟಾರ್ಟ್ ಗಳು ಬೆಳವಣಿಗೆಯಾಗುತ್ತಿವೆ.

ಪ್ರಸ್ತುತ ಆರ್ಥಿಕ ವರ್ಷದಲ್ಲಿ ದೇಶದ ಜೆಡಿಪಿ ಶೇ. 9.2 ರಷ್ಟು ಬೆಳವಣಿಗೆಯಾಗಿದ್ದರೂ 2022-23 ರಲ್ಲಿ ನೈಜ ಜೆಡಿಪಿ ಬೆಳವಣಿಗೆ ದರ ಶೇ. 8 ರಿಂದ 8-5 ರಷ್ಟು ಇರಲಿದೆ ಎಂದು ಆರ್ಥಿಕ ಸಮೀಕ್ಷೆ ವರದಿ ಅಂದಾಜಿಸಿದೆ.
ದೇಶಾದ್ಯಂತ ವ್ಯಾಪಕ ರೀತಿಯಲ್ಲಿ ಕೋವಿಡ್ ಲಸಿಕೆ ನೀಡಿಕೆ, ನಿಯಮಗಳ ಸರಾಗಗೊಳಿಸುವಿಕೆ, ದೃಢವಾದ ರಫ್ತು ಬೆಳವಣಿಗೆ ಮತ್ತು ಬಂಡವಾಳದ ವೆಚ್ಚವನ್ನು ಹೆಚ್ಚಿಸಲು ಹಣಕಾಸಿನ ಸ್ಥಳಾವಕಾಶದ ಲಭ್ಯತೆ 2022-23ರಲ್ಲಿ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಲಿವೆ. 2022-23ರ ಬೆಳವಣಿಗೆಯ ದೃಷ್ಟಿಕೋನದಲ್ಲಿ ಆರ್ಥಿಕತೆಯ ಪುನರುಜ್ಜೀವನಕ್ಕೆ ಬೆಂಬಲವನ್ನು ಒದಗಿಸಲು ಖಾಸಗಿ ವಲಯದ ಹೂಡಿಕೆ ಹೆಚ್ಚಿಸಲು ಮುಂಬರುವ ವರ್ಷವು ಆಯ್ಕೆಗೆ ಸಿದ್ಧವಾಗಿದೆ ಎಂದು ಆರ್ಥಿಕ ಸಮೀಕ್ಷೆ ವರದಿಯು ಹೇಳಿದೆ.
ಒಂದು ಎಚ್ಚರಿಕೆಯೊಂದಿಗೆ ಈ ನಿರೀಕ್ಷೆ ಮಾಡಲಾಗಿದೆ. ಮುಂದೆ ಸಾಂಕ್ರಾಮಿಕ ಸಬಂಧಿತ ಆರ್ಥಿಕ ಹೊಡೆತಗಳು ಇರುವುದಿಲ್ಲ, ಮಾನ್ಸೂನ್ ಸಾಮಾನ್ಯವಾಗಿರುತ್ತದೆ, ಪ್ರಮುಖ ಕೇಂದ್ರೀಯ ಬ್ಯಾಂಕುಗಳಿಂದ ಜಾಗತಿಕ ದ್ರವ್ಯತೆ ಹಿಂತೆಗೆದುಕೊಳ್ಳುವಿಕೆಯು ವಿಶಾಲವಾಗಿ ಕ್ರಮಬದ್ಧವಾಗಿರುತ್ತದೆ, ತೈಲ ಬೆಲೆಗಳು 70 -75 ಬಿಲಿಯನ್ ಅಮೆರಿಕನ್ ಡಾಲರ್ ವ್ಯಾಪ್ತಿಯಲ್ಲಿರುತ್ತದೆ. ಜಾಗತಿಕ ಪೂರೈಕೆ ಸರಪಳಿ ಅಡಚಣೆಗಳು ವರ್ಷದ ಅವಧಿಯಲ್ಲಿ ಸ್ಥಿರವಾಗಿ ಸರಾಗವಾಗುತ್ತವೆ ಎಂದು ವರದಿ ಹೇಳುತ್ತದೆ.
ಭಾರತದ ಆರ್ಥಿಕ ಸರ್ವೇ ಪ್ರಕಾರ ಒಟ್ಟು 11, 308 ಸ್ಟಾರ್ಟ್ ಅಪ್ ಗಳೊಂದಿಗೆ ಮಹಾರಾಷ್ಟ್ರ ಹೆಚ್ಚಿನ ಸಂಖ್ಯೆಯ ಮಾನ್ಯತೆಗೊಂಡ ಸ್ಟಾರ್ಟ್ ಅಪ್ ಗಳನ್ನು ಹೊಂದಿದೆ.
ಜನವರಿ 10, 2022ರ ಹೊತ್ತಿಗೆ ಸುಮಾರು 61, 400 ಸ್ಟಾರ್ಟ್ ಅಪ್ ಗಳನ್ನು ದೇಶದಲ್ಲಿ ಗುರುತಿಸಲಾಗಿದೆ ಎಂದು ಹೇಳಲಾಗಿದೆ. 2021ರಲ್ಲಿ 44ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಯೂನಿಕಾರ್ನ್ ಆಗಿ ಬದಲಾದ್ದರಿಂದ ಅಮೆರಿಕ, ಚೀನಾ ನಂತರ ಭಾರತ ಯೂನಿಕಾರ್ನ್ ಗಳ ಸಂಖ್ಯೆಯಲ್ಲಿ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮುವಲ್ಲಿ ನೆರವಾಯಿತು.












Click it and Unblock the Notifications