ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಎನ್ನಾರೈಗಳಿಗೆ ಮತದಾನದ ಹಕ್ಕು: ಸುಷ್ಮಾ

By Mahesh
|
Google Oneindia Kannada News

ನವದೆಹಲಿ, ಡಿ.23: ಶೀಘ್ರದಲ್ಲೇ ಅನಿವಾಸಿ ಭಾರತೀಯರಿಗೆ ತಾಯ್ನಾಡಿನಲ್ಲಿ ಮತ ಹಾಕುವ ಹಕ್ಕು ಜಾರಿಗೆ ಬರಲಿದೆ. ಈ ಕುರಿತಂತೆ ಚುನಾವಣಾ ಆಯೋಗ ತಿದ್ದುಪಡಿ ಮಾಡಲು ಮುಂದಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಭಾರತದಲ್ಲಿ ನಡೆಯಲಿರುವ ಎಲ್ಲ ಹಂತದ ಚುನಾವಣೆಗಳಲ್ಲೂ ಎನ್ನಾರೈಗಳು ಮತದಾನ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಚುನಾವಣಾ ಆಯೋಗ ಹಾಲಿ ಇರುವ ಕಾನೂನಿಗೆ ತಿದ್ದುಪಡಿ ಮಾಡಲು ಮುಂದಾಗಿದೆ.

ಈಗಾಗಲೇ 2010ರಲ್ಲಿ ಜನಪ್ರತಿನಿಧಿ ಹಕ್ಕು ಕಾಯ್ದೆಗೆ ಸಂಸತ್ತಿನ ಉಭಯ ಸದನಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಭಾರತದ ಎಲ್ಲ ಚುನಾವಣೆಗಳಲ್ಲೂ ಮತದಾನದ ಹಕ್ಕು ನೀಡಲು ಈ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. [ಅನಿವಾಸಿ ಭಾರತೀಯರಿಗೆ ನರೇಂದ್ರ ಮೋದಿ ಅಭಯ]

EC working on NRI voting rights, says Sushma Swaraj

ಒಂದು ವೇಳೆ ಕಾಯ್ದೆ ಅನುಷ್ಠಾನವಾದರೆ ವಿವಿಧ ದೇಶಗಳಲ್ಲಿರುವ ಸುಮಾರು 11 ಮಿಲಿಯನ್ ಭಾರತೀಯರು ಮತದಾನದ ಹಕ್ಕನ್ನು ಪಡೆಯಲಿದ್ದಾರೆ. ಜ.15ರ ನಂತರ ನಡೆಯಲಿರುವ ಎಲ್ಲ ಚುನಾವಣೆಗಳಲ್ಲೂ ಅನಿವಾಸಿ ಭಾರತೀಯರಿಗೆ ಮತ ಚಲಾಯಿಸುವ ಹಕ್ಕು ಜಾರಿಯಾಗಲಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

13ನೇ ಪ್ರವಾಸಿ ಭಾರತೀಯ ದಿವಸದ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್, ಜ.7ರಂದು ಯುವ ಪ್ರವಾಸಿ ಭಾರತೀಯ ದಿವಸ ಆಯೋಜನೆ ಮಾಡಲಾಗಿದ್ದು, ಅನಿವಾಸಿ ಭಾರತೀಯರು ಹಾಗೂ ಪಿಐಒಗಳ ಮಕ್ಕಳ ಸಮಾವೇಶ ನಡೆಯಲಿದೆ ಎಂದರು.

ಮಹಾತ್ಮಾಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ ಬಂದ ನೆನಪಿನ 100ನೇ ಸ್ಮರಣಾ ದಿನಾಚರಣೆಯನ್ನು ಜ.9ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದರು.(ಎಎನ್ ಐ)

English summary
External Affairs Minister Sushma Swaraj on Monday assured the non-resident Indians (NRIs) that they may soon get voting rights as the Election Commission (EC) is working on it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X