ಓಮಿಕ್ರಾನ್ ಭೀತಿ: ಚುನಾವಣಾ ಆಯೋಗ, ಆರೋಗ್ಯ ಸಚಿವಾಲಯ ಅಧಿಕಾರಿಗಳ ಸಭೆ

ನವದೆಹಲಿ, ಡಿಸೆಂಬರ್ 24: ಭಾರತೀಯ ಚುನಾವಣಾ ಆಯೋಗವು ಡಿಸೆಂಬರ್ 27ರಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳ ಜತೆ ಸಭೆ ಹಮ್ಮಿಕೊಂಡಿದೆ. ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಪಂಚ ರಾಜ್ಯಗಳ ಚುನಾವಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಭೆ ನಡೆಸಲು ಮುಂದಾಗಿದೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಘೋಷಣೆಯನ್ನು ಜನವರಿ ತಿಂಗಳಿನಲ್ಲಿ ಚುನಾವಣಾ ಆಯೋಗ ಮಾಡಲಿದೆ. ಡಿಸೆಂಬರ್ 23ರಂದು ಅಲಹಾಬಾದ್ ಹೈಕೋರ್ಟ್ ಚುನಾವಣಾ ಮೆರವಣಿಗೆ ನಿಷೇಧಿಸುವಂತೆ ಹಾಗೂ ಚುನಾವಣೆಯನ್ನು ಮುಂದೂಡುವಂತೆ ಮನವಿ ಮಾಡಿತ್ತು.

ದೇಶದಲ್ಲಿ ಓಮಿಕ್ರಾನ್​ ಸೋಂಕು ಹೆಚ್ಚಾಗುವ ಲಕ್ಷಣ ಹೊಂದಿರುವ ಹಿನ್ನಲೆ ಕೇಂದ್ರದ ಆರೋಗ್ಯ ಇಲಾಖೆ ಈ ಹಿಂದೆ ಕೋವಿಡ್ ಸೋಂಕು ಸಮಯದಲ್ಲಿ ನಿರ್ಮಾಣ ಮಾಡಿದ್ದ ವಾರ್​ ರೂಂ ರೂಪಿಸಲು ಸಮಿತಿ ಸಲಹೆ ನೀಡಿದೆ. ಅಲ್ಲದೇ ರಾಜ್ಯಗಳಲ್ಲಿ ಹಿಂಪಡೆದಿರುವ ರಾತ್ರಿ ಕರ್ಫ್ಯೂ ಸೇರಿದಂತೆ ಅನೇಕ ನಿಯಮ ಜಾರಿಗೆ ತರಲು ಸೂಚನೆ ನೀಡಲಾಗಿದೆ. ರಾಜ್ಯಗಳಲ್ಲಿ ವ್ಯಾಪಕ ಪರೀಕ್ಷೆ, ನಿಯಂತ್ರಣ, ಸೋಂಕು ತಡೆಗಟ್ಟುವಿಕೆಗೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಲಹೆ ನೀಡಿದೆ.

EC And Health Ministry To Hold Meet On Assembly Elections On December 27

ಆರೋಗ್ಯ ಸಚಿವಾಲಯಕ್ಕೆ ಬರೆಯಲಾದ ಪತ್ರದಲ್ಲಿ ಸೋಂಕು ನಿಯಂತ್ರಣಕ್ಕೆ ದೂರದೃಷ್ಟಿ, ದತ್ತಾಂಶ ವಿಶ್ಲೇಷಣೆ, ಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಕಟ್ಟುನಿಟ್ಟಾದ ಮತ್ತು ತ್ವರಿತ ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಸಮಿತಿ ತಿಳಿಸಿದೆ.

ತೆಲಂಗಾಣದಲ್ಲಿ ಇಂದು ಎರಡು ಓಮಿಕ್ರಾನ್​ ಸೋಂಕು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 24ಕ್ಕೆ ಏರಿದೆ. ದೆಹಲಿ ಮತ್ತು ಮಹಾರಾಷ್ಟ್ರ ನಂತರದ ಸ್ಥಾನದಲ್ಲಿ ತೆಲಂಗಾಣ ಇದೆ. ಇನ್ನು ಅರುಣಾಚಲ ಪ್ರದೇಶದಲ್ಲಿ ಕೂಡ ಇಂದು ಮೊದಲ ಓಮಿಕ್ರಾನ್ ಪ್ರಕರಣ ದಾಖಲಾಗಿದೆ.

ಓಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂಬರುವ ಉತ್ತರ ಪ್ರದೇಶ ಚುನಾವಣೆಯನ್ನು ಒಂದು ಅಥವಾ 2 ತಿಂಗಳು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗಕ್ಕೆ ಅಲಹಾಬಾದ್‌ ಹೈಕೋರ್ಟ್‌ ಮನವಿ ಮಾಡಿದೆ. ಜೊತೆಗೆ ಚುನಾವಣೆಗೆ ಸಂಬಂಧಿಸಿದಂತೆ ಜನ ಸೇರುವುದನ್ನು ತಡೆಯಬೇಕು ಎಂದು ಹೇಳಿದೆ.

ಹೈಕೋರ್ಟ್‌ನಲ್ಲಿ ಜಾಮೀನು ಸಂಬಂಧಿ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಸಮಯದಲ್ಲಿ ಕೋರ್ಟ್‌ ಈ ವಿಷಯವನ್ನು ಪ್ರಸ್ತಾಪಿಸಿದೆ. 'ಚುನಾವಣಾ ಮೆರವಣಿಗೆಗಳನ್ನು ತಡೆಯದೇ ಇದ್ದರೆ ಮುಂದಿನ ಪರಿಣಾಮಗಳು 2ನೇ ಅಲೆಗಿಂತಲೂ ಭೀಕರವಾಗಿರುತ್ತದೆ.

ಬಂಗಾಳದಲ್ಲಿ ನಡೆದ ಗ್ರಾಮಪಂಚಾಯತ್‌ ಚುನಾವಣೆಯ ನಂತರ ಅತಿ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದರು. ಹಾಗಾಗಿ ಈ ಚುನಾವಣೆಯ ಸಮಯದಲ್ಲೂ ಇಂತಹ ಸಮಸ್ಯೆ ತಲೆದೋರಬಹುದು. ಹಾಗಾಗಿ ಚುನಾವಣಾ ರಾರ‍ಯಲಿಗಳನ್ನು ನಿಷೇಧಿಸಿ ಮತ್ತು ಚುನಾವಣೆಯನ್ನು ಸ್ವಲ್ಪ ಕಾಲ ಮುಂದೂಡಿ ಎಂದು ಕೋರ್ಟ್‌ ಮನವಿ ಮಾಡಿದೆ. ಇದೇ ವೇಳೆ ಕೋವಿಡ್‌ ಲಸಿಕೆ ವಿತರಿಸಲು ಮೋದಿ ಕೈಗೊಂಡ ಕ್ರಮಗಳನ್ನು ನ್ಯಾಯಮೂರ್ತಿ ಶೇಖರ್‌ ಯಾದವ್‌ ಶ್ಲಾಘಿಸಿದರು.

ಹಲವು ವರ್ಷಗಳ ಹೋರಾಟದ ಬಳಿಕ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಸುತ್ತಮುತ್ತ ನಡೆದಿದೆ ಎನ್ನಲಾದ ಭೂ ಅಕ್ರಮದ ಕುರಿತಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಅತ್ಯಂತ ವಿವರವಾದ ಮಾಹಿತಿ ನೀಡಿದರು.

ಬಿಜೆಪಿಯ ಮುಖಂಡರ ಸಂಬಂಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ದೇವಸ್ಥಾನದ ಸುತ್ತಮುತ್ತಲೂ ಅಕ್ರಮವಾಗಿ ಭೂಮಿ ಖರೀದಿ ಮಾಡಿದ್ದರ ಕುರಿತಾಗಿ ಬಂದಿರುವ ಪ್ರತ್ಯೇಕ ಆರೋಪಗಳ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಈಗಾಗಲೇ ತನಿಖೆಯನ್ನೂ ಆರಂಭ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಆಸ್ತಿ ಮಾರಾಟದ ದಾಖಲೆಗಳನ್ನು ತೋರಿಸಿದರು. ರಾಮಮಂದಿರ ಸುತ್ತಮುತ್ತಲಿನ ಜಾಗ ಅಂದಾಜು 2 ಕೋಟಿ ರೂಪಾಯಿ ಮೌಲ್ಯದ್ದಾಗಿದ್ದು, ಇದನ್ನು ಎರಡು ಬಾರಿ ಮಾರಾಟ ಮಾಡಲಾಗಿದೆ.

ಮೊದಲ ಬಾರಿಗೆ ಇದನ್ನು 8 ಕೋಟಿಗೆ ಮಾರಾಟ ಮಾಡಲಾಗಿದ್ದರೆ, 2ನೇ ಬಾರಿಗೆ 18.5 ಕೋಟಿ ರೂಪಾಯಿಗೆ 2020ರಲ್ಲಿ ಕೇಂದ್ರ ಸರ್ಕಾರ ನಿರ್ಮಿಸಿರುವ ರಾಮಮಂದಿರ ಟ್ರಸ್ಟ್‌ಗೆ ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+