ದೆಹಲಿಯಲ್ಲಿ 5 ವರ್ಷದ ಬಾಲಕನ ಎದುರೇ ತಂದೆಯ ಬರ್ಬರ ಹತ್ಯೆ

ಬೆಂಗಳೂರು, ಏ.1: ಮಗನ ಎದುರೇ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿ ಉಸ್ಮಾನ್‌ಪುರದಲ್ಲಿ ಭಾನುವಾರ ರಾತ್ರಿ ನಡೆದಿದೆ.

40 ವರ್ಷದ ಅಕಿಬುದ್ದೀನ್ ಸಾರಿಗೆ ನಿಗಮದಲ್ಲಿ ಕೆಲಸ ನಿರ್ವಹಿಸುತ್ತಿದ್ದರು, ರಾತ್ರಿ 11.45ರ ಸುಮಾರಿಗೆ ಅವರ ಮಗ ಹಾಗೂ ಸಹೋದರಿಯೊಂದಿಗೆ ಮನೆಗೆ ತೆರಳುವಾಗ ಘಟನೆ ನಡೆದಿದೆ.

ಏಕಾಏಕಿ ಬಂದ ದುಷ್ಕರ್ಮಿಗಳು ಸಾಕಷ್ಟು ಬಾರಿ ಅಕಿಬುದ್ದೀನ್ ಮೇಲೆ ಗುಂಡು ಹಾರಿಸಿದ್ದಾರೆ. ಇದನ್ನು ನೋಡಿ ಗಾಬರಿಗೊಂಡ ಮಗ ಓಡಿ ಮನೆಗೆ ಹೋಗಿ ವಿಷಯ ತಿಳಿಸಿದ್ದಾನೆ.

DTC employee shot dead in front of his 5-year-old son

ಕುಟುಂಬದವರು ನೀಡಿರುವ ಮಾಹಿತಿ ಪ್ರಕಾರ 5 ಮಂದಿ ದುಷ್ಕರ್ಮಿಗಳು ಅಕಿಬಿದ್ದೀನ್ ಮೇಲೆ ದಾಳಿ ನಡೆಸಿದ್ದರು. ದ್ವೇಷದಿಂದಲೇ ಈ ರೀತಿ ಮಾಡಿದ್ದಾರೆ ಹಾಗೂ ಆ ಕೊಲೆಗಾರರು ಯಾರು ಎಂದು ನಮಗೆ ಗೊತ್ತಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+