ಪಾರ್ಟಿ ಫಂಡ್ ಸಂಗ್ರಹದಲ್ಲಿ ಕಮಲ ಪಕ್ಷವೇ ನಂಬರ್ ಒನ್
Recommended Video

ನವದೆಹಲಿ, ಡಿಸೆಂಬರ್ 3: ಇತರೆ ನಾಲ್ಕು ರಾಷ್ಟ್ರೀಯ ಪಕ್ಷಗಳಿಗಿಂತ ಬಿಜೆಪಿ ದೇಣಿಗೆ ಸಂಗ್ರಹಿಸಿ ಮೊದಲ ಸ್ಥಾನದಲ್ಲಿದೆ. ಕಳೆದ ಆರ್ಥಿಕ ವರ್ಷದಲ್ಲಿ ಒಂದು ಸಾವಿರ ಕೋಟಿ ರೂ ದೇಣಿಗೆ ಸಂಗ್ರಹಿಸಿದ್ದಾಗಿ ಚುನಾವಣಾ ಆಯೋಗಕ್ಕೆ ಬಿಜೆಪಿ ಮಾಹಿತಿ ನೀಡಿದೆ.
2017-18ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಿದೆ.ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಜ.2ರಂದು ವಿತರಣೆ ಮಾಡಿದ್ದ 222 ಕೋಟಿ ರೂ ಮೊತ್ತದ ಬಾಂಡ್‌ಗಳ ಪೈಕಿ ಶೇ.95 ಬಾಂಡ್‌ಗಳು ಬಿಜೆಪಿ ಪಾಲಾಗಿದೆ.
ಹಾಗಾದರೆ ಬಿಎಸ್‌ಪಿ, ಟಿಎಂಸಿ ದೇಣಿಗೆ ಎಷ್ಟು ಎಂದು ನೋಡುವುದಾದರೆ 2017-18ನೇ ಸಾಲಿನಲ್ಲಿ 681 ಕೋಟಿ ದೇಣಿಗೆ ಪಡೆದಿದ್ದ ಬಹುಜನ ಸಮಾಜವಾದಿ ಪಕ್ಷ ಕಳೆದ ಸಾಲಿನಲ್ಲಿ 717 ಕೋಟಿ ರೈ ದೇಣಿಗೆ ಸಂಗ್ರಹಿಸಿದೆ. ತೃಣಮೂಲ ಕಾಂಗ್ರೆಸ್ 2016-17ನೇ ಸಾಲಿನಲ್ಲಿ 262 ಕೋಟಿ ರೂ ಪಡೆದಿತ್ತು. ಇದು 291 ಕೋಟಿ ರೂ ಏರಿಕೆಯಾಗಿದೆ.

ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ 2017-18ನೇ ಸಾಲಿನಲ್ಲಿ 104 ಕೋಟಿ ರೂ ದೇಣಿಗೆ ಪಡೆದಿದೆ. ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ವಾರ್ಷಿಕ ರಿಟರ್ನ್ಸ್ ಆಯೋಗಕ್ಕೆ ಇದುವರೆಗೂ ಸಲ್ಲಿಸಿಲ್ಲ.












Click it and Unblock the Notifications