ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಸಿಡಿ ಚುನಾವಣೆಗೂ ಮುನ್ನ ಮಾಕೇನ್ ಮೇಲೆ ದೌರ್ಜನ್ಯದ ಆರೋಪ

ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೂ ಮುನ್ನ ದೆಹಲಿ ರಾಜ್ಯ ಘಟಕದ ಅಧ್ಯಕ್ಷ ಅಜಯ್ ಮಾಕೇನ್ ವಿರುದ್ಧ ಗಂಭೀರ ದೌರ್ಜನ್ಯದ ಆರೋಪಗಳು ಕೇಳಿ ಬಂದಿದೆ.

By ಅನುಶಾ ರವಿ
|
Google Oneindia Kannada News

ದೆಹಲಿ, ಏಪ್ರಿಲ್ 14: ದೆಹಲಿಯ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಚನಾ ಸಚ್ದೇವ್ ರಾಜ್ಯದ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಜಯ್ ಮಾಕೇನ್ ವಿರುದ್ಧ ದೌರ್ಜನ್ಯದ ಆರೋಪ ಮಾಡಿದ್ದಾರೆ.

ಇದೇ ವೇಳೆ ರಚನಾ ಸಚ್ದೇವ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೋಭಾ ಓಜಾ ಮತ್ತು ಮತ್ತೊಬ್ಬ ನಾಯಕ ನೆಟ್ಟಾ ಡಿ ಸೋಜಾ ವಿರುದ್ಧವೂ ಮಾನಸಿಕ ದೌರ್ಜನ್ಯ ಹಾಗೂ ಉದ್ದೇಶ ಪೂರ್ವಕ ಸಂಚಿನ ಆರೋಪ ಮಾಡಿದ್ದಾರೆ.[EVM ಪರಿಚಯಿಸಿದ್ದು ಯಾರು? ಸಿಬಲ್ ಗೆ ಸುಪ್ರೀಂ ಪ್ರಶ್ನೆ!]

District President of Mahila Congress accuses Ajay Maken of harassment

ಈ ಕುರಿತು ತುಘ್ಲಕ್ ರೋಡ್ ಪೊಲೀಸ್ ಠಾಣೆಗೆ ರಚನಾ ದೂರು ಸಲ್ಲಿಸಿದ್ದಾರೆ. ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೀಟು ಹಂಚಿಕೆ ಸಂದರ್ಭದಲ್ಲಿ ತಾವು ಕಾಳಜಿ ವಹಿಸಿದ್ದಕ್ಕೆ ಮೂವರೂ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂದೂ ಅವರು ದೂರಿನಲ್ಲಿ ಹೇಳಿದ್ದಾರೆ.[ದೆಹಲಿ ಉಪಚುನಾವಣೆ: ಠೇವಣಿ ಕಳೆದುಕೊಂಡ ಆಮ್ ಆದ್ಮಿ ಪಕ್ಷ]

ದೂರಿನಲ್ಲಿ ತಿಳಿಸಿರುವಂತೆ, ಟಿಕೆಟ್ ಹಂಚಿಕೆಯಲ್ಲಾದ ತಾರತಮ್ಯಗಳನ್ನು ರಚನಾ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದಾರೆ. ಇದರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದರು. ಇದರಿಂದ ಸಿಟ್ಟಾಗಿದ್ದ ಅಜೇಯ್ ಮಾಕೇನ್ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

"ನನಗೆ ಕ್ಷಮೆ ಕೇಳುವಂತೆ ಹೇಳಲಾಯಿತು. ಆದರೆ ಯಾವಾಗ ಕ್ಷಮೆ ಕೇಳಲಿಲ್ಲವೋ ನನಗೆ ಬೆದರಿಕೆ ಹಾಕಿದರು," ಎಂದು ರಚನಾ ಸಚ್ದೇವ್ ಹೇಳಿದ್ದಾರೆ. ತನಗೆ ಬೆದರಿಕೆ ಕರೆಗಳೂ ಬರುತ್ತಿವೆ ಎಂದು ರಚನಾ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ ದೂರಿನಲ್ಲಿ ರಚನಾ ಸಚ್ದೇವ್ ಉಲ್ಲೇಖಿಸಿರುವ ಎಲ್ಲಾ ನಾಯಕರೂ ಆರೋಪಗಳನ್ನು ತಿರಸ್ಕರಿಸಿದ್ದು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದ್ದಾರೆ.

English summary
The district president of Mahila Congress on Friday accused Delhi Congress Chief Ajay Maken of harassment. Rachna Sachdeva also made allegations against Mahila Congress president Shobha Oza and another Congress leader, Netta D'Souza, of mental harassment and criminal intimidation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X