ಅನರ್ಹ ಶಾಸಕರ ಚುನಾವಣೆ ಭವಿಷ್ಯ ಸುಪ್ರೀಂನಲ್ಲಿ ಇಂದು ನಿರ್ಧಾರ
ನವದೆಹಲಿ, ಸೆಪ್ಟೆಂಬರ್ 23: ಅನರ್ಹ ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಹೂಡಿದ್ದ ಅರ್ಜಿ ಇಂದು ವಿಚಾರಣೆಗೆ ಬರಲಿದ್ದು, ಉಪಚುನಾವಣೆಯಲ್ಲಿ ಅನರ್ಹರು ಸ್ಪರ್ಧಿಸಬಹುದೇ ಇಲ್ಲವೇ ಎಂಬುದು ಇಂದು ನಿರ್ಣಯವಾಗಲಿದೆ.
ಉಪಚುನಾವಣೆ ಈಗಾಗಲೇ ಘೋಷಣೆಯಾಗಿದ್ದು ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಹಾಗಾಗಿ ಇಂದಿನ ಸುಪ್ರೀಂ ವಿಚಾರಣೆ ಅತ್ಯಂತ ಮಹತ್ವದ್ದಾಗಿದ್ದು, ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಬಹುದೇ ಇಲ್ಲವೆ ಎಂಬುದು ಇಂದು ನಿರ್ಣಯವಾಗಲಿದೆ.
ಉಪಚುನಾವಣೆಗೆ ಅನರ್ಹ ಶಾಸಕರು ಸ್ಪರ್ಧಿಸುವಂತಿಲ್ಲ ಎಂದು ಚುನಾವಣೆ ಆಯೋಗವು ಈಗಾಗಲೇ ಹೇಳಿದೆ. ಹಾಗಾಗಿ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ ಬಿಟ್ಟು ಬೇರೆ ಗತಿ ಇಲ್ಲದಾಗಿದೆ.

ಉಪಚುನಾವಣೆಗೆ ತಡೆ ಕೋರಿ ಅನರ್ಹ ಶಾಸಕರ ಪರ ವಕೀಲರು ಇಂದು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಸಹ ಇದೆ. ಎಲ್ಲರ ಕಣ್ಣು ಇಂದಿನ ಸುಪ್ರೀಂಕೋರ್ಟ್ ವಿಚಾರಣೆ ಮತ್ತು ಆದೇಶದ ಮೇಲಿದೆ.
ಶನಿವಾರ ಯಡಿಯೂರಪ್ಪ ಅವರೊಂದಿಗೆ ಸಭೆ ನಡೆಸಿರುವ ಅನರ್ಹ ಶಾಸಕರು, ಒಂದು ವೇಳೆ ಸುಪ್ರೀಂನಲ್ಲಿ ತಮ್ಮ 'ಅನುಕೂಲಕ್ಕೆ' ತಕ್ಕಂತೆ ಆದೇಶ ಬರದೇ ಹೋಗಿ ಉಪಚುನಾವಣೆ ಸ್ಪರ್ಧಿಸಲು ಸಾಧ್ಯವಾಗದಿದ್ದರೆ ಸಂಬಂಧಿಗಳಿಗೆ ಟಿಕೆಟ್ ನೀಡಬೇಕು ಎಂದು ಮಾತಾಗಿದೆ ಎನ್ನಲಾಗಿದೆ.












Click it and Unblock the Notifications