ಮಹಾರಾಷ್ಟ್ರದಲ್ಲಿ ಹಪ್ಪಳ ತಿಂದು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆಯೇ?: ಸಂಜಯ್

ಮುಂಬೈ, ಸೆಪ್ಟೆಂಬರ್ 17: ಮಹಾರಾಷ್ಟ್ರದ ಜನರು ಹಪ್ಪಳ ತಿಂದು ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆಯೇ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ವ್ಯಂಗ್ಯವಾಡಿದ್ದಾರೆ.

ದೇಶದಲ್ಲಿ ದಾಖಲಾಗುತ್ತಿರುವ ಬಹುತೇಕ ಸೋಂಕಿತ ಪ್ರಕರಣಗಳು ಮಹಾರಾಷ್ಟ್ರದಲ್ಲಿಯೇ ವರದಿಯಾಗುತ್ತಿದೆ ಎಂದು ಬಿಜೆಪಿ ನಾಯಕರು ನೀಡಿದ್ದ ಹೇಳಿಕೆಗೆ ಸಂಸತ್‌ನಲ್ಲಿ ರಾವತ್ ಉತ್ತರಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಕುರಿತು ಕೆಲ ನಾಯಕರು ಮಾತನಾಡುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಚೇತರಿಸಿಕೊಂಡವರ ಸಂಖ್ಯೆಯೂ ಅಧಿಕವಿದೆ ಎಂದು ಬಿಜೆಪಿ ನಾಯಕರ ಕಾಲೆಳೆದರು.

Did People Recover By Eating Bhabhi Ji Ke Papad Sanjay Raut

ಇದೇ ವೇಳೆ ಪಾಪಡ್ ಪದವನ್ನು ಬಳಸುವ ಮೂಲಕ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘಾವಲ್ ಹೇಳಿಕೆಯನ್ನು ರಾವತ್ ನೆನಪಿಸಿದರು. ಪಾಪಡ್(ಹಪ್ಪಳ) ಸೇವನೆಯಿಂದ ದೇಹದಲ್ಲಿ ರೋಗ ನಿರೋಧ ಶಕ್ತಿ ಹೆಚ್ಚುತ್ತದೆ ಎಂದು ಮೇಘಾವಲ್ ಹೇಳಿಕೆ ನೀಡಿದ್ದರು. ಸ್ವಲ್ಪ ಸಮಯದ ಬಳಿಕ ಅವರಿಗೇ ಕೊರೋನ ಸೋಂಕು ತಗಲಿತ್ತು.

'ವಿಶ್ವ ಆರೋಗ್ಯ ಸಂಸ್ಥೆ ಕೊಳೆಗೇರಿ ಧಾರಾವಿಯಲ್ಲಿ ಕೊರೊನವನ್ನು ನಿಯಂತ್ರಿಸಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ(ಬಿಎಂಸಿ) ಪ್ರಯತ್ನವನ್ನು ಶ್ಲಾಘಿಸಿದೆ.

ನನ್ನ ತಾಯಿ ಹಾಗೂ ಸಹೋದರನಿಗೂ ಕೊವಿಡ್-19 ರೋಗ ತಗಲಿತ್ತು. ಮಹಾರಾಷ್ಟ್ರದ ಹಲವು ಜನರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಇಂದು ಧಾರಾವಿಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.

Recommended Video

      Worlds Longest Tunnel - Atal Tunnel ಇದೆ ನೋಡಿ ಜಗತ್ತಿನ ಅತಿ ಉದ್ದದ ಸುರಂಗ ಮಾರ್ಗ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+