ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ದೇವೇಗೌಡರ ಬೆಂಬಲ
Recommended Video
ನವದೆಹಲಿ,
ಜನವರಿ 13: ಕನಕಪುರದ ಕಪಾಲಿ ಬೆಟ್ಟದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ಮಾಡಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಪರೋಪಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'>ಏಸು
ಪ್ರತಿಮೆ ನಿರ್ಮಾಣವನ್ನು ವಿರೋಧಿಸುತ್ತಿರುವ ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು ಕನಕಪುರದಲ್ಲಿ ಏಸು ಪ್ರತಿಮೆ ನಿರ್ಮಾಣ ವಿರೋಧಿಸಲು ಬೆಂಗಳೂರು ಮತ್ತು ಮಂಗಳೂರಿನಿಂದ ಬಂದು ಪ್ರತಿಭಟನೆ ಮಾಡಿದ್ದಾದರೂ ಏಕೆ ಎಂದು ಕೇಳಿದರು. id='are-slot-2' class='oiad oi-axt oiadv'>
ಎಲ್ಲಾ ಧರ್ಮದವರಿಗೂ ರಕ್ಷಣೆ ಕೊಡಬೇಕು
ಭಾರತ ಜಾತ್ಯತೀತ ರಾಷ್ಟ್ರವಾಗಿದೆ. ಅಂಬೇಡ್ಕರ್ ಅವರು ಕಾನೂನು ಬರೆದು ಎಲ್ಲಾ ಧರ್ಮಗಳಿಗೆ ರಕ್ಷಣೆ ಕೊಡಬೇಕು ಎಂದು ಹೇಳಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ 5 ಧರ್ಮೀಯರನ್ನು ಸೇರಿಸಿ ಮುಸ್ಲಿಮರನ್ನು ಮಾತ್ರ ಹೊರಗಿಟ್ಟರು. ಬಿಜೆಪಿಯವರು ಈ ಕಾಯ್ದೆಯನ್ನು ರಾಜಕೀಯ ಕಾರಣಕ್ಕೇ ಮಾಡಿರುವುದು.

ಏಸು ಪ್ರತಿಮೆ ನಿರ್ಮಾಣಕ್ಕೆ ಪರೋಕ್ಷ ಬೆಂಬಲ
ಕನಕಪುರದ ಕಪಾಲಿ ಬೆಟ್ಟದಲ್ಲಿ 110 ಅಡಿ ಎತ್ತರದ ಏಸುವಿನ ಏಕಶಿಲಾ ಪ್ರತಿಮೆ ನಿರ್ಮಾಣಕ್ಕೆ ಹೊರಟಿರುವ ಡಿಕೆಶಿ ನಿರ್ಧಾರಕ್ಕೆ ದೇವೇಗೌಡರು ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಟ್ಟದ ಮೇಲೆ ಡಿಕೆ ಶಿವಕುಮಾರ್ ಏಸು ಪ್ರತಿಮೆ ನಿರ್ಮಿಸಲು ತೆಗೆದುಕೊಂಡಿರುವ ನಿರ್ಣಯಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದು ಮಾಜಿ ಪ್ರಧಾನಿಯವರು ಸ್ಪಷ್ಟಪಡಿಸಿದ್ದಾರೆ.

ಇದು ಕಂದಾಯ ಇಲಾಖೆಗೆ ಸೇರಿದ ವಿಚಾರ
ಇದು ಕಂದಾಯ ಇಲಾಖೆ ಗೆ ಸೇರಿದ ವಿಷಯ,ಒಂದೆಡೆ ಮುನೇಶ್ವರ ಬೆಟ್ಟ ಮತ್ತೊಂದೆಡೆ ಏಸು ಬೆಟ್ಟ ಅನ್ನೋ ವಿವಾದ ಇದೆ ,ವಿವಾದ ಹುಟ್ಟುಹಾಕುವ ಕೆಲಸ ಮೊದಲಿಂದ ನಡೆಯುತ್ತಿದೆ,ಇದು ಡಿಕೆ ಶಿವಕುಮಾರ್ ಗೆ ಗೊತ್ತಿದೆ.ಈಗಾಗಲೇ ಕಂದಾಯ ಸಚಿವರು ಹೇಳಿದ್ದಾರೆ
ಅವರು ಪರಿಶೀಲನೆ ಮಾಡುತ್ತಾರೆ.ನನ್ನ ಆದ್ಯತೆ ಅಲ್ಲಿ ಕಾನೂನು ಸುವ್ಯವ್ಯಸ್ಥತೆ ಕಾಪಾಡುವುದೇ ಆಗಿದೆ ಎಂದು ಗೇಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬಿಜೆಪಿ ಬಗ್ಗೆ ಎಲ್ಲರಿಗೂ ಭ್ರಮೆ ಇದೆ
ಬಿಜೆಪಿಯ ಬಗ್ಗೆ ಮಾಧ್ಯಮಗಳಿಗೆ ಭ್ರಮೆ ಇದೆ. ಬಿಜೆಪಿಯವರು 19 ಚರ್ಚ್ಗಳನ್ನು ಒಡೆದರು.
ಬೈಬಲ್ ಅನ್ನು ಸುಟ್ಟುಹಾಕಿದರು. ಇಬ್ಬರು ಮಕ್ಕಳನ್ನೂ ಸುಟ್ಟರು. 10 ಮಂದಿ ದಾದಿಯರನ್ನು ರೇಪ್ ಮಾಡಿದರು. ಆಗ ಯಾರೂ ಕೂಡ ಮಾತನಾಡಲಿಲ್ಲ ಎಂದು ವಿವರಿಸಿದರು.












Click it and Unblock the Notifications