ರೈಲಿನಲ್ಲಿ ಪ್ರಯಾಣಿಕರಂತೆ ಬಂದು ಏನೇನು ಕಳ್ಳತನ ಮಾಡ್ತಾರೆ ಗೊತ್ತಾ?

ನವದೆಹಲಿ, ಜನವರಿ 15: ರೈಲಿನಲ್ಲಿ ಪ್ರಯಾಣಿಕರಂತೆ ಬಂದು ಏನೇನು ಕಳ್ಳತನ ಮಾಡ್ತಾರೆ ಗೊತ್ತಾ? ನೀವು ಊಹಿಸಲೂ ಕೂಡ ಸಾಧ್ಯವಿಲ್ಲ. 2018ರಲ್ಲಿ ಒಟ್ಟು 62 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

ಕಳೆದ 2017ರಲ್ಲಿ ದೂರದ ಪ್ರಯಾಣದ ರೈಲುಗಳಲ್ಲಿ 1.95 ಲಕ್ಷ ಟವೆಲ್‌ಗಳನ್ನು ಕಳ್ಳತನ ಮಾಡಿದರೆ, 81,736 ಬೆಡ್‌ಶೀಟ್‌ಗಳನ್ನು ದೋಚಿದ್ದಾರೆ. ಇದೇ ವೇಳೆ 55,573 ತಲೆದಿಂಬುಗಳು ಕವರ್‌ಗಳು ಹಾಗೂ 5038 ತಲೆದಿಂಬುಗಳು, 7043 ಬ್ಲಾಂಕೆಟ್‌ಗಳು ಕಳ್ಳತನವಾಗಿದೆ. ಅದರಲ್ಲಿ 200 ಟಾಯ್ಲೆಟ್ ಮಗ್‌ಗಳು, 1 ಸಾವಿರ ಟ್ಯಾಪ್‌ಗಳು, 300 ಫ್ಲಷ್‌ಪೈಪ್‌ಗಳು ಕೂಡ ಕಳ್ಳತನವಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಭಾರತೀಯ ರೈಲ್ವೆ ಪ್ರಯಾಣಿಕರ ಉತ್ತಮ ಸೇವೆಗಾಗಿ ಪ್ರಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ಪ್ರಯಾಣಿಕರಿಗೆ ನೀಡುವ ವಸ್ತುಗಳನ್ನು ಕಾಪಾಡಿಕೊಳ್ಳುವ ಸವಾಲನ್ನು ಎದುರಿಸಬೇಕಾಗಿದೆ. ಕ್ಷುಲ್ಲಕವೆಂದರೆ ಪ್ಯಾಸೆಂಜರ್ ರಿಸರ್ವೇಷನ್ ಪಡೆದು ಪ್ರಯಾಣಿಸುವ ಶ್ರೀಮಂತ ಪ್ರಯಾಣಿಕರೇ ಅಥವಾ ಶ್ರೀಮಂತ ಮಧ್ಯಮ ವರ್ಗದ ಪ್ರಯಾಣಿಕರೇ ರೈಲ್ವೆ ಕೋಚ್‌ಗಳಲ್ಲಿನ ಸೀಲಿಂಗ್ ಫ್ಯಾನ್, ಟಾಯ್ಲೆಟ್‌ ಮಗ್‌ಗಳು, ತಲೆದಿಂಬುಗಳು ಹಾಗೂ ಬ್ಲಾಂಕೆಟ್‌ಗಳನ್ನೇ ಕಳ್ಳತನ ಮಾಡುತ್ತಾರೆ. ರೈಲು ಪ್ರಯಾಣಿಕರ ನಿರ್ವಹಣೆ ರೈಲ್ವೆ ಇಲಾಖೆಗೆ ಭಾರಿ ಹೊರೆಯಾಗಿ ಪರಿಣಮಿಸುತ್ತಿದೆ.

Dept worries lakhs together things stolen in railway coaches

2018ರ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಸುಮಾರು 79,350 ಹ್ಯಾಂಡ್ ಟವೆಲ್, 27,545 ಬೆಡ್‌ಶೀಟ್‌, 21,050 ತಲೆ ದಿಂಬಿನ ಕವರ್‌ಗಳು, 2,150 ತಲೆದಿಂಬುಗಳು, 2065 ಬ್ಲಾಂಕೆಟ್‌ಗಳನ್ನು ಕಳ್ಳತನ ಮಾಡಿದ್ದಾರೆ. ಒಟ್ಟು ಸುಮಾರು 62 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+