ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ 9.1 ತೀವ್ರತೆಯ ಭೂಕಂಪವಾಗುತ್ತಂತೆ ಹೌದಾ..?!

|
Google Oneindia Kannada News

ನವದೆಹಲಿ, ಮಾರ್ಚ್ 22: ದೆಹಲಿಯಲ್ಲಿ 9.1 ತೀವ್ರತೆಯ ಭೂಕಂಪವಾಗುತ್ತಂತೆ! ಹಾಗೊಂದು ಮೆಸೇಜ್ whatsapp ನಲ್ಲಿ ವೈರಲ್ ಆಗಿದೆ. ದೆಹಲಿ ಜನರ ನಿದ್ದೆ ಕೆಡಿಸುತ್ತಿದೆ. ಆದರೆ ಈ ಸುದ್ದಿ ಶುದ್ಧ ಸುಳ್ಳು ಎಂದಿದೆ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ(ನಾಸಾ).

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ರಾಜಧಾನಿಯಲ್ಲಿ ಏಪ್ರಿಲ್ 7 ರಿಂದ 15 ರವೊಳಗೆ ಸುಮಾರು 9.1 ರಿಂದ 9.2 ತೀವ್ರತೆಯ ಭೂಕಂಪ ಸಂಭವಿಸಲಿದೆ. ರಾಷ್ಟ್ರ ರಾಜಧಾನಿ ಪ್ರದೇಶದ ಸುತ್ತಮುತ್ತಲಿನಲ್ಲಿರುವ ಭುಕಂಪ ಕೇಂದ್ರದಲ್ಲಿ ಭೂಕಂಪ ಸಂಭವಿಸಲಿದೆ ಎಂದು ಈ ಮೆಸೇಜ್ ನಲ್ಲಿ ಹೇಳಲಾಗಿತ್ತು. ಇದು ದೆಹಲಿಯ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಈ ಮೆಸೇಜ್ ಅನ್ನು ನಾಸಾವೇ ಕಳಿಸಿದೆ ಎಂದೂ ಸುಳ್ಳು ಹೇಳಲಾಗಿತ್ತು.

ಮೆಕ್ಸಿಕೋದಲ್ಲಿ ಭೀಕರ ಭೂಕಂಪ:ರಿಕ್ಟರ್ ಮಾಪನದಲ್ಲಿ 8.0 ತೀವ್ರತೆ ದಾಖಲು ಮೆಕ್ಸಿಕೋದಲ್ಲಿ ಭೀಕರ ಭೂಕಂಪ:ರಿಕ್ಟರ್ ಮಾಪನದಲ್ಲಿ 8.0 ತೀವ್ರತೆ ದಾಖಲು

"ನಾಸಾ ಪ್ರಕಾರ, ದೆಹಲಿಯನ್ನು ಇದೇ ಏಪ್ರಿಲ್ 7 ರಿಂದ 15 ರವೊಳಗೆ ಸುಮಾರು 9.1 ರಿಂದ 9.2 ತೀವ್ರತೆಯ ಭೂಕಂಪ ಅಪ್ಪಳಿಸಲಿದೆ. ಬಹುಶಃ ಭೂಕಂಪ ಕೇಂದ್ರ ಗುರ್ಗಾಂವ್ ಇದ್ದಿರಬಹುದು. ಇದು ಜಗತ್ತಿನ ಇತಿಹಾಸದಲ್ಲೇ ಎರಡನೆಯ ಅತೀ ದೊಡ್ಡ ಭೂಕಂಪ ಎನ್ನಿಸಿಕೊಳ್ಳಲಿದೆ. ಇದರಿಂದ ರಾಜಧಾನಿ ಸಾಕಷ್ಟು ನಷ್ಟವನ್ನೂ, ಜೀವಹಾನಿಯನ್ನೂ ಅನುಭವಿಸಬೇಕಾಗುತ್ತದೆ. ಈ ಭೂಕಂಪ ಭಾರತದ ದೆಹಲಿ, ಹರ್ಯಾಣ, ಪಂಜಾಬ್, ಜಮ್ಮು ಕಾಶ್ಮೀರದಿಂದ ತಮಿಳುನಾಡು, ರಾಜಸ್ಥಾನದಿಂದ ಬಿಹಾರ್ ವರೆಗೂ ವ್ಯಾಪಿಸಬಹುದು. ಪಾಕಿಸ್ತಾನದಲ್ಲೂ ಇದರ ಪರಿಣಾಮ ಕಂಡುಬರಬಹುದು. ಆದ್ದರಿಂದ ಒಂದು ವಾರದ ಕಾಲ ದೆಹಲಿಯಿಂದ ದೂರವಿರಿ. ಸರ್ಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಿ, ಹೆಚ್ಚಿನ ಮಾಹಿತಿಗೆ ಈ ವೆಬ್ ಸೈಟ್ ನೋಡಿ... " ಎಂದು ನಕಲಿ ವೆಬ್ ಸೈಟ್ ಅಡ್ರೆಸ್ ನೀಡಲಾಗಿದೆ.

Delhi to be hit by 9.1 magnitude earthquake: NASA says its fake message

ಆದರೆ ನಾಸಾ ಎಂದಿಗೂ ತನ್ನ ಅಧಿಕೃತ ಜಾಲತಾಣದಲ್ಲಿ ಇಂಥ ಮೆಸೇಜ್ ಗಳನ್ನು ಹಾಕಿಯೇ ಇಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ಇವೆಲ್ಲ ಶುದ್ಧ ಸುಳ್ಳು ಎಂದು ಸ್ವತಃ ನಾಸಾ ಹೇಳಿದೆ.

English summary
"Delhi to be hit by 9.1 magnitude earthquake" This messages circulating in whatsapp and people of Delhi feel tensed by reading this. But NASA confirms its fake message.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X