ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮುಖಂಡ ಬರ್ಬರ ಹತ್ಯೆ

Posted By:
Subscribe to Oneindia Kannada

ನವದೆಹಲಿ, ಡಿ.29: ಆಮ್ ಆದ್ಮಿ ಪಕ್ಷದ ಮುಖಂಡರೊಬ್ಬರ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದ ಕೊಳತೆ ಸ್ಥಿತಿಯಲ್ಲಿದ್ದ ದೇಹ ಬೇಗಂಪುರ ಪ್ರದೇಶದಲ್ಲಿ ಸೋಮವಾರ ಪತ್ತೆಯಾಗಿದೆ. ಪೊಲೀಸರ ಪ್ರಕಾರ ಭಾನುವಾರ ಸಂಜೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಧೀರೇಂದ್ರ ಈಶ್ವರ್ ಅವರು ಭಾನುವಾರ ಸಂಜೆ ಮನೆ ಬಿಟ್ಟು ಪಶ್ಚಿಮ ದೆಹಲಿಯ ನಂಗೊಲಾಯಿನಲ್ಲಿದ್ದ ಗೆಟ್ ಟುಗೇದರ್ ಪಾರ್ಟಿಗೆ ತೆರಳಿದ್ದರು. ಈ ಸಮಯದಲ್ಲಿ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ಮಾಡಿ ಅನೇಕ ಬಾರಿ ಚುಚ್ಚಿ ಕೊಂದು ಹಾಕಿದ್ದಾರೆ.

Delhi shocker: AAP leader murdered; genitals chopped, face smashed

ಧೀರೇಂದ್ರ ಅವರ ಮರ್ಮಾಂಗಕ್ಕೆ ಚಾಕು ಹಾಕಿ ಕೊಚ್ಚಿದ್ದಾರೆ. ಮುಖವನ್ನು ಹರಿತವಾದ ಆಯುಧರಿಂದ ಚುಚ್ಚಿ ಹಾಳುಗೆಡವಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆಮ್ ಆದ್ಮಿ ಪಕ್ಷದ ಪೂರ್ವಾಂಚಲ್ ಜಿಲ್ಲಾ ಅಧ್ಯಕ್ಷರಾದ ಈಶ್ವರ್ ಅವರು ಇತ್ತೀಚೆಗೆ ಯೋಗ ವಿದ್ಯಾಲಯವನ್ನು ಸ್ಥಾಪಿಸಿದ್ದರು. ಆದರೆ, ಶಾಲೆ ಇದ್ದ ಜಾಗ ವಿವಾದಕ್ಕೀಡಾಗಿತ್ತು. ಈಶ್ವರ್ ಅವರ ಮನೆಯಿಂದ ಕೆಲ ಮೀಟರ್ ಗಳ ಅಂತರದಲ್ಲೇ ಈ ಕೃತ್ಯ ಜರುಗಿದ್ದು, ಕೊಲೆಗೈದ ಬಳಿಕ ದುಷ್ಕರ್ಮಿಗಳು ಹತ್ತಿರದ ಮೋರಿಯಲ್ಲಿ ಶವವನ್ನು ಎಸೆದಿದ್ದಾರೆ. ವೈಯಕ್ತಿಕ ದ್ವೇಷದ ಕಾರಣ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಡಿಸಿಪಿ ವಿಕ್ರಮ್ ಜಿತ್ ಸಿಂಗ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The body of an AAP leader was found near a swamp, where it was allegedly dumped after he was brutally murdered, at outer Delhi's Begumpur area on Monday.
Please Wait while comments are loading...