ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ತೀವ್ರ ವಾಯುಮಾಲಿನ್ಯ: 2019ರ ನವೆಂಬರ್‌ಗಿಂತ, 2020ರ ನವೆಂಬರ್‌ನಲ್ಲಿ ಹೆಚ್ಚು

|
Google Oneindia Kannada News

ನವದೆಹಲಿ, ಡಿಸೆಂಬರ್ 01: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ವೀಪರೀತ ಹಂತಕ್ಕೆ ಹೋಗುತ್ತಿದೆ. ಇದಕ್ಕೆ ಉದಾಹರಣೆಯಂತೆ ದೆಹಲಿಯಲ್ಲಿ 2019ರ ನವೆಂಬರ್ ತಿಂಗಳಿಗಿಂತ 2020ರ ನವೆಂಬರ್‌ನಲ್ಲಿ ಹೆಚ್ಚಿನ ಕಲುಷಿತ ಗಾಳಿಯು ದಾಖಲಾಗಿದೆ.

ರಾಜಧಾನಿ ಸುತ್ತಲಿನ ರಾಜ್ಯಗಳಲ್ಲಿ ಈ ವರ್ಷದ ಆರಂಭಿಕ ಕೊಯ್ಲಿನಿಂದಾಗಿ ದೊಡ್ಡ ಪ್ರಮಾಣದಲ್ಲಿ ಕೃಷಿ ಕೂಳೆಗಳನ್ನು ನಾಶಪಡಿಸಲು ಬೆಂಕಿ ಹಚ್ಚಿರುವುದು ರಾಜಧಾನಿಯನ್ನು ಅಪಾರ ಪ್ರಮಾಣದಲ್ಲಿ ವಾಯುಮಾಲಿನ್ಯಕ್ಕೆ ಒಂದು ಪ್ರಮುಖ ಕಾರಣವಾಗಿದೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ಶೀಘ್ರದಲ್ಲಿಯೇ ಕಾನೂನು: ಕೇಂದ್ರ ಸರ್ಕಾರವಾಯುಮಾಲಿನ್ಯ ನಿಯಂತ್ರಣಕ್ಕೆ ಶೀಘ್ರದಲ್ಲಿಯೇ ಕಾನೂನು: ಕೇಂದ್ರ ಸರ್ಕಾರ

ಈ ಋತುವಿನಲ್ಲಿ ಪಂಜಾಬ್‌ನಲ್ಲೊಂದರಲ್ಲೇ 76,590 ಕೃಷಿ ಕೂಳೆಗಳನ್ನು ಸುಡುವ ಘಟನೆಗೆ ಸಾಕ್ಷಿಯಾಗಿದೆ. ಆದರೆ ಇದು 2019ರಲ್ಲಿ 55,210 ಆಗಿದ್ದು, ನವೆಂಬರ್ 4 ಮತ್ತು ನವೆಂಬರ್ 7ರ ನಡುವೆ ಗರಿಷ್ಠ ಕೃಷಿ ಕೂಳೆ ಸುಡುವ ಘಟನೆಗಳು ದಾಖಲಾಗಿವೆ ಎಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್ಐ) ತಿಳಿಸಿದೆ.

Delhi Pollution: National Capital Breathed More Polluted Air In November 2020 Than 2019

ಈ ವರ್ಷ ನವೆಂಬರ್‌ನಲ್ಲಿ ದೆಹಲಿಯಲ್ಲಿ ಒಂದು ಬಾರಿ ಮಾತ್ರ ಮಳೆಯಾಗಿದೆ. 2018ರಲ್ಲಿ ಎರಡು ಬಾರಿ, 2019ರಲ್ಲಿ ಮೂರು ಬಾರಿ ಮಳೆಯಾಗಿದೆ. ಈ ವರ್ಷ ಗಾಳಿ ಹೆಚ್ಚು ಮಾಲಿನ್ಯಗೊಂಡಿದ್ದು, ಕಳೆದ ನವೆಂಬರ್‌ ತಿಂಗಳಿನಲ್ಲಿ ಒಂಭತ್ತು ತೀವ್ರ ವಾಯು ಮಾಲಿನ್ಯ ದಿನಗಳನ್ನು ಕಂಡಿದೆ. AQI ಮಾಪನದ ಪ್ರಕಾರ 2019ರಲ್ಲಿ 7 ದಿನಗಳು, 2018 ಮತ್ತು 2017ರ ನವೆಂಬರ್ ತಿಂಗಳಲ್ಲಿ ಐದು ದಿನ ತೀವ್ರ ಕಲುಷಿತ ಗಾಳಿ ದಾಖಲಾಗಿದೆ.

ನವೆಂಬರ್‌ನಲ್ಲಿ ದೆಹಲಿಯ ಸರಾಸರಿ AQI, 2019 ರಲ್ಲಿ 312 ಕ್ಕೆ ಹೋಲಿಸಿದರೆ ಈ ವರ್ಷ 328 ರಷ್ಟಿದೆ. 30 ದಿನಗಳ ಸರಾಸರಿ AQI, 2019 ರಲ್ಲಿ ಕಡಿಮೆ ಇದ್ದರೂ, ಅದು 2016 ರ ನವೆಂಬರ್‌ನಲ್ಲಿ 374 ಕ್ಕೆ ಗರಿಷ್ಠ ಮಟ್ಟವನ್ನು ತಲುಪಿತು. 2017 ರಲ್ಲಿ 361 ಮತ್ತು 2018 ರಲ್ಲಿ 335 ರಷ್ಟಿತ್ತು .

ದೆಹಲಿಯ ವಾಯು ಮಾಲಿನ್ಯವು ಈ ವರ್ಷದ ನವೆಂಬರ್‌ನಲ್ಲಿ ಎರಡು ಬಾರಿ ತುರ್ತು ಮಟ್ಟವನ್ನು ದಾಟಿದೆ. ದೆಹಲಿ ಸರ್ಕಾರ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದ ಹೊರತಾಗಿಯೂ, ದೀಪಾವಳಿಯ ಹಬ್ಬದ ವೇಳೆ ಮಾಲಿನ್ಯ ಮಟ್ಟ ಮತ್ತು ನಂತರದ ದಿನಗಳು, ಕಳೆದ ನಾಲ್ಕು ವರ್ಷಗಳಲ್ಲಿ ಗರಿಷ್ಠ ಮಟ್ಟದಲ್ಲಿದೆ.

English summary
Delhi saw more polluted air in November 2020 than in 2019. Delhi's air pollution saw an uptick due to lesser rainfall and rampant stubble burning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X