ದೆಹಲಿ ಹಿಂಸಾಚಾರ: 630 ಮಂದಿ ಬಂಧನ, 123 FIR ಇನ್ನಿತರೆ ಅಂಕಿ-ಅಂಶ

ದೆಹಲಿ, ಫೆಬ್ರವರಿ 28: ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ವರೆಗೆ 123 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಗಲಭೆಗೆ ಸಂಬಂಧಿಸಿದಂತೆ 630 ಮಂದಿಯನ್ನು ಬಂಧಿಸಿದ್ದಾರೆ ಅಥವಾ ವಶಕ್ಕೆ ಪಡೆದಿದ್ದಾರೆ.

ಭಾನುವಾರದಿಂದಲೂ ದೆಹಲಿಯಲ್ಲಿ ಸಿಎಎ ಪರ ಮತ್ತು ವಿರೋಧಿಗಳ ನಡುವೆ ಮಾರಾಮಾರಿ ನಡೆಯುತ್ತಿದ್ದು, ಅದೀಗ ಕೋಮು ಗಲಭೆಯ ರೂಪ ಪಡೆದುಕೊಂಡಿದೆ. ಗಲಭೆಯಲ್ಲಿ ಈವರೆಗೆ 42 ಮಂದಿ ಸಾವನ್ನಪ್ಪಿದ್ದಾರೆ.

ಗಲಭೆ ಹತ್ತಿಕ್ಕರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವು ಯತ್ನಗಳನ್ನು ಮಾಡುತ್ತಿದೆಯಾದರೂ ಗಲಭೆ ನಿಯಂತ್ರಣಕ್ಕೆ ಬಂದಿಲ್ಲ. ಇಂದೂ ಸಹ ಕೆಲವು ಶಾಲೆಗಳಿಗೆ ಬೆಂಕಿ ಹಚ್ಚಲಾಗಿದೆ.

Delhi Police Registers 123 FIRs And Arrest 630 People

ಮಾಹಿತಿಯಂತೆ ಕಳೆದ ನಾಲ್ಕು ದಿನದಲ್ಲಿ ಈಚೆಗೆ ಸಹಾಯ ಕೋರಿ ದೆಹಲಿ ಪೊಲೀಸ್ ಕಂಟ್ರೋಲ್‌ ರೂಂ ಗೆ 15000 ಕರೆಗಳು ಬಂದಿವೆಯಂತೆ. ಭಾನುವಾರ ಒಂದೇ ದಿನ 700 ಕ್ಕೂ ಹೆಚ್ಚು ಕರೆಗಳು ದೆಹಲಿ ಪೊಲೀಸ್ ಕಂಟ್ರೋಲ್‌ ರೂಂ ಗೆ ಬಂದಿವೆ.

ಯಾರೂ ಸಹ ವದಂತಿಗಳನ್ನು ನಂಬಬಾರದೆಂದು ಪೊಲೀಸರು ವಿನಂತಿ ಮಾಡಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದು ಹಾಗೂ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಹಾಕಬಾರದೆಂದು ವಿನಂತಿ ಮಾಡಿದ್ದಾರೆ.

ಹಿಂಸಾಚಾರ ತೀವ್ರವಾಗಿದ್ದ ಈಶಾನ್ಯ ದೆಹಲಿಯ ಶಾಲೆಗಳಿಗೆ ಶನಿವಾರ ರಜೆ ಘೋಷಿಸಲಾಗಿತ್ತು, ಆದರೆ ಈಗ ಪರಿಸ್ಥಿತಿ ಸ್ವಲ್ಪ ಹತೋಟಿಗೆ ಬಂದಿರುವ ಕಾರಣ ಶನಿವಾರ ಶಾಲೆಗಳನ್ನು ಕಾರ್ಯನಿರ್ವಹಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+