ದೆಹಲಿ ಪೊಲೀಸರಿಂದ ಭರ್ಜರಿ ಬೇಟೆ, 40 ಕೋಟಿ ಮೌಲ್ಯ ಮಾದಕ ವಸ್ತು ವಶ
ನವದೆಹಲಿ, ಜೂನ್ 7: ದೆಹಲಿ ಪೊಲೀಸರು ಬುಧವಾರ ಭರ್ಜರಿ ಬೇಟೆಯಾಡಿದ್ದಾರೆ. ಭಾರೀ ಮಾದಕ ವಸ್ತು ಜಾಲವನ್ನು ಭೇದಿಸಿದ ರಾಜಧಾನಿಯ ಪೊಲೀಸರ ವಿಶೇಷ ತಂಡ ಸುಮಾರು 40 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಂತರಾಷ್ಟ್ರೀಯ ಮಾದಕ ವಸ್ತು ಕಳ್ಳ ಸಾಗಣೆ ಜಾಲವನ್ನು ಪತ್ತೆ ಹಚ್ಚಿರುವ ದೆಹಲಿ ಪೊಲೀಸರು 4 ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಸಮಾಜವಾದಿ ಪಕ್ಷದ ನಾಯಕ ಅಬು ಅಜೀಮ್ ಸಂಬಂಧಿಯಾಗಿದ್ದಾನೆ.

ಇನ್ನು ಮಾದಕ ವಸ್ತು ಕಳ್ಳಸಾಗಾಣಿಕೆ ಜಾಲದಲ್ಲಿ ಯಾರೆಲ್ಲಾ ಇದ್ದಾರೆ, ಇದರ ಕಿಂಗ್ ಪಿನ್ ಯಾರು ಎಂಬುದು ತನಿಖೆಯ ಬಳಿಕವಷ್ಟೆ ತಿಳಿದು ಬರಬೇಕಿದೆ. ಇದು ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪತ್ತೆಯಾದ ಬೃಹತ್ ಮಾದಕ ವಸ್ತು ಜಾಲವಾಗಿದೆ.












Click it and Unblock the Notifications