ಬೈಕ್ ಸ್ಟಂಟ್ ಬೇಡ ಎಂದಿದ್ದಕ್ಕೆ ಯುವಕನನ್ನು ಕೊಚ್ಚಿ ಕೊಂದರು
ನವದೆಹಲಿ, ಜುಲೈ 13: ಬೈಕ್ ಸ್ಟಂಟ್ ಮಾಡುವುದು ಬೇಡ ಎಂದಿದ್ದಕ್ಕೆ ಯುವಕ ಮತ್ತವನ ಸ್ನೇಹಿತರು ಸೇರಿ ಯುವಕನನ್ನು ಹತ್ಯೆ ಮಾಡಿರುವ ಘಟನೆ ದೆಹಲಿಯ ರಘುವೀರನಗರದಲ್ಲಿ ಸೋಮವಾರ ನಡೆದಿದೆ.
Recommended Video
ಸಂತ್ರಸ್ತರನ್ನು ಮನೀಷ್ ಎಂದು ಗುರುತಿಸಲಾಗಿದೆ. ಆತ ರಘುವೀರನಗರದ ನಿವಾಸಿಯಾಗಿದ್ದಾನೆ. ಆತನ ಕಾರ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ.
ಮನೀಷ್‌ನನ್ನು ಹತ್ಯೆ ಮಾಡಿದ ಮೂವರು ಕೂಡ ಅಪ್ರಾಪ್ತರು, ಈ ಘಟನೆಯು ಜುಲೈ 8 ರಂದು ನಡೆದಿತ್ತು.ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಫೂಟೇಜ್‌ನಲ್ಲಿ ರಘುವೀರನಗರದ ಬೀದಿಯಲ್ಲಿ ಹೆಚ್ಚು ಜನಜಂಗುಳಿ ಇರುವ ಪ್ರದೇಶದಲ್ಲೇ ಮನೀಷ್‌ಗೆ ಮೂವರು ಸೇರಿ ಹಲವು ಬಾರಿ ಚಾಕುವಿನಿಂದ ಇರಿದಿರುವುದು ಸೆರೆಯಾಗಿದೆ.

ಮೂವರು ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ. ಅವರಿಂದ ಕೊಲೆಗೆ ಬಳಸಿದ್ದ ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ.
ಜುಲೈ 8 ರಂದು ಆಸ್ಪತ್ರೆಯಿಂದ ಪೊಲೀಸರಿಗೆ ಕರ ಒಂದು ಬಂದಿತ್ತು, ಓರ್ವನನ್ನು ಆಸ್ಪತ್ರೆಗೆ ಕರೆ ತರಲಾಗಿದೆ ಆದರೆ ಆಸ್ಪತ್ರೆಗ ಬರುವ ಮುನ್ನವೇ ವ್ಯಕ್ಇ ಸಾವನ್ನಪ್ಪಿದ್ದ ಎಂದು ಪೊಲೀಸರಿಗೆ ತಿಳಿಸಿದ್ದರು. ಮನೀಷ್ ದೇಹದಲ್ಲಿ 28 ಬಾರಿ ಚಾಕು ಇರಿತದ ಗಾಯಗಳಿದ್ದವು. ಕಾಲು, ಎದೆಗೆ ಚಾಕುವಿನಿಂದ ಇರಿದಿದ್ದರು.












Click it and Unblock the Notifications