• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯ ಕರ್ನಾಟಕ ಭವನ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ

|

ನವದೆಹಲಿ, ಜೂನ್ 13: ದೆಹಲಿಯ ಕರ್ನಾಟಕ ಭವನ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

   ಏನು?ತನ್ನಷ್ಟಕ್ಕೆ ತಾನೇ ವರ್ಕೌಟ್ ಮಾಡ್ತಿರೋ ಈ ಯಂತ್ರದ ನಿಗೂಢ ರಹಸ್ಯ | Oneindia Kannada

   ಕರ್ನಾಟಕ ಭವನದಲ್ಲಿ ರೂಂ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದ 25 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿದೆ. ಇವರು ಮೂಲತಃ ದೆಹಲಿಯವರಾಗಿದ್ದು, ಜೂನ್ 8ರವರೆಗೆ ಕೆಲಸಕ್ಕೆ ಬಂದಿದ್ದ ಆತ ಜ್ವರದಿಂದ ಬಳಲುತ್ತಿದ್ದ ಪರೀಕ್ಷೆ ಮಾಡಿಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

   ಭಾರತದಲ್ಲಿ ಒಂದೇ ದಿನ 11 ಸಾವಿರ ಕೊರೊನಾ ಸೋಂಕಿತರು ಪತ್ತೆ

   ದೆಹಲಿ ಚಾಣಕ್ಯ ಪುರಿಯ ಕೌಟಿಲ್ಯ ರಸ್ತೆ ಮಾರ್ಗಕ್ಕೆ ಹೊಂದಿಕೊಂಡಿರುವ ಕರ್ನಾಟಕ ಭವನ 1 ಅಲ್ಲಿ ಈ ಯುವಕನು ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಈಗ ಕರ್ನಾಟಕ ಭವನದ ಅಧಿಕಾರಿಗಳು ಹೇಳುವಂತೆ ಈ ಯುವಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

   ಕರ್ನಾಟಕದ ರಾಜ್ಯ ಸರ್ಕಾರದ ಮೂರು ಭವನಗಳಲ್ಲಿ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ಈಗಾಗಲಿ ಅಲ್ಲಿ ಸ್ಯಾನಿಟೈಸರ್ ಮುಂತಾದ ಸಾಧನಗಳನ್ನು ಇರಿಸಲಾಗಿದೆ.ದೆಹಲಿಯ ನಿವಾಸಿಯಾಗಿರುವ ಈ ವ್ಯಕ್ತಿಗೆ ಭವನದ ಸಿಬ್ಬಂದಿ ಅಲ್ಲದ, ಇತರರ ಸಂಪರ್ಕದಿಂದ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.

   ಸೋಂಕಿತ ವ್ಯಕ್ತಿಯಲ್ಲಿ ಕಡಿಮೆ ಪ್ರಮಾಣದ ರೋಗ ಲಕ್ಷಣ ಗೋಚರಿಸಿದ್ದರಿಂದ ಮನೆಯಲ್ಲಿಯೇ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ನೀಡಲು ದೆಹಲಿ ಸರ್ಕಾರ ನಿರ್ಧರಿಸಿದೆ ಎಂದು ಭವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

   English summary
   Delhi Karnataka Bhavan Worker Postie For Coronavirus Saturday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X