Dr Rajkumar: ಬೆಂಗಳೂರಲ್ಲಿ ಡಾ.ರಾಜ್‌ಕುಮಾರ್ ಸಮಾಧಿಗೆ 2.5 ಎಕರೆ ಜಾಗ ಕೊಟ್ಟಿದ್ದು ಸರಿಯೇ - ಚೇತನ್ ಅಹಿಂಸಾ ಪ್ರಶ್ನೆ
Dr Rajkumar: ಕನ್ನಡಿಗರ ಕಣ್ಮಣಿ, ನಟ ಸಾರ್ವಭೌಮ ದಿವಂಗತ ಡಾ.ರಾಜ್‌ಕುಮಾರ್ ಅವರ ಜನ್ಮದಿನಾಚರಣೆ ಸಂಭ್ರಮಾಚರಣೆಯಲ್ಲಿ ಕನ್ನಡಿಗರಿದ್ದೇವೆ. ಆದರೆ, ಕನ್ನಡಿಗರ ಸಂಭ್ರಮದ ನಡುವೆ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಅವರು ಮಾಡಿರುವ ಟ್ವೀಟ್ ಇದೀಗ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಡಾ.ರಾಜ್ ಕುಮಾರ್ ಅವರ ಸಮಾಧಿಗೆ ಬೆಂಗಳೂರಿನ ಹೃದಯಭಾಗದಲ್ಲಿ ಜಾಗ ಕೊಟ್ಟಿರುವುದನ್ನು ಅವರು ಪ್ರಶ್ನೆ ಮಾಡಿದ್ದಾರೆ.
ಚೇತನ್ ಅಹಿಂಸಾ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ "ನಾವು ರಾಜಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ "ಸಮಾಧಿ ಕಾಂಪ್ಲೆಕ್ಸ್'ಕ್ಕಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು; ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ." ಎಂದು ಹೇಳಿದ್ದಾರೆ.

ಇಂದು ನಟ ರಾಜ್‌ಕುಮಾರ್ ಅವರ ಜನ್ಮದಿನಾಚರಣೆಯ ಸಂಭ್ರಮದಲ್ಲಿ ಕನ್ನಡಿಗರಿದ್ದಾರೆ. ಆದರೆ ಇಂದೇ ನಟ ಚೇತನ್ ಅಹಿಂಸಾ ಅವರು ಈ ರೀತಿಯ ಪ್ರಶ್ನೆಯೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಎತ್ತಿದ್ದಾರೆ. ಇದಕ್ಕೆ ನೆಟ್ಟಿಗರು ತುಸು ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
Dr Rajkumar: ನೆಟ್ಟಿಗರು ಹೇಳಿದ್ದೇನು
ಮಂಜು ಎನ್ನುವವರು ಡಾ.ರಾಜ್ ಕುಮಾರ್ ಅವರು ಕೇವಲ ಒಬ್ಬ ಮಹಾನ್ ಕಲಾವಿದರೇ.. ಅವರು ಕರ್ನಾಟಕ ಮತ್ತು ಕರ್ನಾಟಕಕ್ಕೆ ಧ್ವನಿಯಾಗಿದ್ದರು.. ಮೌಲ್ಯಗಳನ್ನು ಹೊಂದಿರುವ ಮಹಾನ್ ಮನುಷ್ಯ. ಅವರ ಸಣ್ಣ ಸನ್ನೆಗಳು ಮತ್ತು ನಡವಳಿಕೆಗಳು ಜನರಿಗೆ ಸ್ಫೂರ್ತಿ ನೀಡಿವೆ ಎಂದಿದ್ದಾರೆ. ಕರ್ನಾಟಕದ ಜನರನ್ನು ಒಗ್ಗೂಡಿಸುವ ವ್ಯಕ್ತಿಗೆ 2.5 ಎಕರೆ ಭೂಮಿ ತುಂಬಾ ಕಡಿಮೆ, ತಂಬಾಕು ಉತ್ಪನ್ನಗಳು ಮತ್ತು ಮದ್ಯವನ್ನು ಪ್ರಚಾರ ಮಾಡಲು ತಮ್ಮ ಆತ್ಮವನ್ನು ಮಾರುವ ನಟರಿಗಿಂತ ಉತ್ತಮ ಮನುಷ್ಯ ಮತ್ತು ಮಾದರಿ ವ್ಯಕ್ತಿ ಎಂದು ನೆಟ್ಟಿಗರು ಹೇಳಿದ್ದಾರೆ.
ಸುಮನ್ ಎನ್ನುವವರು ಚೇತನ್ ಅವರೇ, ನೀವು ಭಾರತದವರು, ಅದೂ ಕರ್ನಾಟಕದ ಮೂಲದವರು. ಯಾರಾದರೂ ಆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಮತ್ತು ನೀವು ಅದನ್ನು ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನೀವು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತೀರಿ ಎಂದು ನಾನು ಭಾವಿಸಿರಲಿಲ್ಲ, ಆದರೆ ಅವರನ್ನು ಆಚರಿಸಬಾರದು ಎಂದಲ್ಲ. ಈ ಮನಸ್ಥಿತಿ ನಿಮ್ಮ ಸ್ವಂತ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದೂ ತೀಕ್ಷ್ಣವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಮ್ಮ ಹೆಮ್ಮೆಯ ಡಾ. ರಾಜ್‌ಕುಮಾರ್ ಅವರನ್ನು ಕೇವಲ ರಾಜ್‌ಕುಮಾರ್ ಎಂದು ಕರೆಯುವ ಮೂಲಕ ನೀವು ದಂತಕಥೆಯನ್ನು ಎಷ್ಟು ಗೌರವಿಸುತ್ತೀರಿ ಎಂಬುದನ್ನು ತೋರಿಸಿದ್ದೀರಿ.. ಅವರು ಅರ್ಹರು ಮತ್ತು ಅವರಿಗೆ ಏನು ಸಿಕ್ಕರೂ ಅದು ತುಂಬಾ ಕಡಿಮೆ.. ಅನಗತ್ಯವಾಗಿ ಚರ್ಚಿಸಬೇಡಿ ಎಂದು ರಾಘವೇಂದ್ರ ಬಿ.ಕೆ ಎನ್ನುವವರು ಪ್ರತಿಕ್ರಿಯೆ ನೀಡಿದ್ದಾರೆ.
We respect Rajkumar as a great artist
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) April 24, 2026
Yet, we must question whether 2.5 acres in center of B’luru for actor’s ‘memorial complex’ (‘06) was a thoughtful move
Primary fight in 21c India is LAND— govt must allocate w/ foresight & public utility not w/ an opportunistic eye on votes pic.twitter.com/CF6MEPi8D1












Click it and Unblock the Notifications