ದೆಹಲಿ ಆಸ್ಪತ್ರೆಯಲ್ಲಿ ಕೊವಿಡ್19 ಚಿಕಿತ್ಸೆಗೆ ಕಾಯಬೇಕಿಲ್ಲ: ಹೊಸ ನಿಯಮಗಳಿವು
ನವದೆಹಲಿ, ಜೂನ್ 5: ಆಸ್ಪತ್ರೆಗಳಿಗೆ ಬಂದರೆ ಚಿಕಿತ್ಸೆ ಪಡೆಯಲು ಗಂಟೆಗಟ್ಟಲೆ ಕಾಯಬೇಕು ಎಂಬ ದೂರು ಬಂದಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಸಾಕಷ್ಟು ನಿಯಮಗಳಲ್ಲಿ ಬದಲಾವಣೆ ಮಾಡಿದೆ.
ಕೊವಿಡ್ 19 ರೋಗಿಗಳಗಾಗಿಯೇ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ರೋಗಿಗಳ ಸೇವೆಗೆ ಸಿದ್ಧರಿರಬೇಕು ಎಂದು ತಿಳಿಸಲಾಗಿದೆ.
ದೆಹಲಿಯಲ್ಲಿ 1359 ಹೊಸ ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಒಟ್ಟು 25 ಸಾವಿರ ಕೊರೊನಾ ಸೋಂಕಿತ ಪ್ರಕರಣಗಳಿವೆ. 650 ಮಂದಿ ಮೃತಪಟ್ಟಿದ್ದಾರೆ.

ಒಟ್ಟಿನಲ್ಲಿ ರೋಗಿಗಳ ಜೀವ ಉಳಿಸುವುದು ನಮ್ಮ ಮುಖ್ಯ ಕರ್ತವ್ಯವಾಗಿದೆ. ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗಾಗಿಯೇ ಆಸ್ಪತ್ರೆಯಲ್ಲಿ ಹಾಸಿಗೆಗಳನ್ನು ಮೀಸಲಿಡಲಾಗಿದೆ ಎಂದು ಉಪಮುಖ್ಯಮಂತ್ರಿ ಮನೀಷ್ ಸಿಸೊಡಿಯಾ ತಿಳಿಸಿದ್ದಾರೆ.
-ಈ ಹೊಸ ನಿಯಮಗಳ ಪ್ರಕಾರ ಕೊವಿಡ್ 19 ರೋಗಿಗಳನ್ನು ಆಂಬ್ಯುಲೆನ್ಸ್‌ನಲ್ಲಿ ಕರೆ ತರುವಾಗ ಯಾವುದೇ ದಾಖಲೆಗಳನ್ನು ಕೇಳಬಾರದು.
- ಒಂದು ಗಂಟೆಯ ಒಳಗೆ ವೈದ್ಯರು ರೋಗಿಗಳಿಗೆ ಚಿಕಿತ್ಸೆಎ ನೀಡಬೇಕು.
-ರೋಗಿಗಳ ದಾಖಲಾತಿ ಪ್ರಕ್ರಿಯೆ ಎಲ್ಲವೂ 15 ನಿಮಿಷಗಳಲ್ಲಿ ಮುಗಿಯಬೇಕು
-ಒಂದೊಮ್ಮೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇದ್ದರೆ, ಬೇರೆ ಆಸ್ಪತ್ರೆಗಳಿಗೆ ಕಳುಹಿಸಿಕೊಡುವುದು ಆಸ್ಪತ್ರೆಯ ಕರ್ತವ್ಯವಾಗಿರುತ್ತದೆ.












Click it and Unblock the Notifications