ಆಸ್ಪತ್ರೆ, ಹಾಸಿಗೆ, ತುರ್ತು ಸೇವೆಗಾಗಿ ಪ್ರತ್ಯೇಕ ಸಹಾಯವಾಣಿ ತೆರೆದ ದೆಹಲಿ ಸರ್ಕಾರ

ನವದೆಹಲಿ, ಮೇ 11: ಆಸ್ಪತ್ರೆ ಲಭ್ಯತೆ, ಹಾಸಿಗೆ, ತುರ್ತು ಸೇವೆಗಳಿಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 1031 ಪ್ರತ್ಯೇಕ ಸಹಾಯವಾಣಿಯನ್ನು ತೆರೆದಿದ್ದಾರೆ.

ಆಕ್ಸಿಜನ್ ಸಿಲಿಂಡರ್ ಇದೆಯೇ ಎಂದು ಚೆಕ್ ಮಾಡಬಹುದು, ಹಾಸಿಗೆಗಳ ಲಭ್ಯತೆ ಸೇರಿದಂತೆ ಹಲವು ಮಾಹಿತಿಯನ್ನು ಈ ಸಹಾಯವಾಣಿ ಮೂಲಕ ದೆಹಲಿ ಜನರು ಪಡೆಯಬಹುದಾಗಿದೆ.

ಆಸ್ಪತ್ರೆಯ ಹಾಸಿಗೆಗಳ ಬಗ್ಗೆ ಮಾಹಿತಿ: ಆಸ್ಪತ್ರೆಗಳಲ್ಲಿ ಲಭ್ಯವಿರುವ ಆಸ್ಪತ್ರೆಗಳ ಬಗ್ಗೆ ಮಾಹಿತಿ ಪಡೆಯಲು ದೆಹಲಿ ಕೊರೊನಾ ಅಪ್ಲಿಕೇಷನ್ ಡೌನ್‌ಲೋಡ್ ಮಾಡಬಹುದು. ಹಾಗೆಯೇ www.delhifightscorona.in ಮೂಲಕ ಮಾಹಿತಿ ಪಡೆಯಬಹುದು. ಇದರಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗುತ್ತದೆ.

Delhi Issues Dedicated Covid Helpline For Hospital-Bed, Emergencies

ವೈದ್ಯರನ್ನು ಸಂಪರ್ಕಿಸಬಹುದು: ಸಹಾಯವಾಣಿಗೆ ಕರೆ ಮಾಡುವ ಮೂಲಕ ವೈದ್ಯರ ಬಳಿ ಸಲಹೆಯನ್ನು ಪಡೆಯಬಹುದು, ಸರ್ಕಾರದ ಜತೆಗಿರುವ ವೈದ್ಯರು ದಿನದ 24 ಗಂಟೆಯೂ ಲಭ್ಯವಿರಲಿದ್ದಾರೆ.

ಔಷಧಗಳು ಹಾಗೂ ಮಾತ್ರೆಗಳು: ಅರವಿಂದ್ ಕೇಜ್ರಿವಾಲ್ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಔಷಧ ಹಾಗೂ ಮಾತ್ರೆಗಳನ್ನು ತರಲು ರೋಗಿಗಳು ಅಥವಾ ಅವರ ಕಡೆಯವರಿಗಾಗಲಿ ತೊಂದರೆ ಕೊಡಬೇಡಿ ಎಲ್ಲವನ್ನೂ ನೀವೇ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ಕೊರೊನಾ ಸೋಂಕಿತರ ಅಂತ್ಯಕ್ರಿಯೆ: ಒಂದೊಮ್ಮೆ ಹೋಂ ಐಸೊಲೇಷನ್‌ನಲ್ಲಿದ್ದಾಗ ಕೊರೊನಾ ಸೋಂಕಿತರು ಮೃತಪಟ್ಟರೆ 1031 ಸಹಾಯವಾಣಿಗೆ ಕರೆ ಮಾಡಿ , ಕೊರೊನಾ ನಿಯಮಗಳ ಮೂಲಕ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಮಾಡಲು ನೆರವು ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+