• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಧ್ಯಮ ರಂಗದ 529 ಜನರ ಕೊರೊನಾ ಟೆಸ್ಟ್. ನೆಗೆಟೀವ್ ಎಷ್ಟು?

|

ನವದೆಹಲಿ, ಏಪ್ರಿಲ್ 29: ದೆಹಲಿಯ ಜನತೆಗೆ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಕೆಲಸ ಮಾಡುವ ಮಾಧ್ಯಮ ವೃತ್ತಿರಂಗದವರಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

"ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ 529 ಜನರ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಅದರಲ್ಲಿ ಕೇವಲ ಮೂವರಿಗೆ ಮಾತ್ರ ಪಾಸಿಟೀವ್ ಬಂದಿದೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಕ್ಯಾಬ್, ಆಟೋ ಡ್ರೈವರ್‌ಗಳಿಗೆ ಸಿಹಿ ಸುದ್ದಿ ಕೊಟ್ಟ ಕೇಜ್ರಿವಾಲ್

"ಈಗ ದೇಶ ಎದುರಿಸುತ್ತಿರುವ ಇಂತಹ ಕ್ಲಿಷ್ಟ ಸಮಯದಲ್ಲಿ ಮಾಧ್ಯಮದವರ ಪಾತ್ರ ಬಹಳ ಮುಖ್ಯವಾದದ್ದು. ಪಾಸಿಟೀವ್ ಬಂದ ಮೂವರೂ ಬೇಗ ಗುಣಮುಖವಾಗಲಿ ಎಂದು ಹಾರೈಸುತ್ತೇನೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಕೊರೊನಾ ಸೋಂಕು ಪೀಡಿತರನ್ನು ಮಾಧ್ಯಮವರು ಭೇಟಿಯಾಗುತ್ತಿರುವುದರಿಂದ, ಕಳೆದ ವಾರ ಎಲ್ಲಾ ಮಾಧ್ಯಮದವರ ಕೊರೊನಾ ಟೆಸ್ಟ್ ಮಾಡಿಸಲು ದೆಹಲಿ ಸರಕಾರ ನಿರ್ಧರಿಸಿತ್ತು.

ಮಾಧ್ಯಮದಲ್ಲಿ ಕೆಲಸ ಮಾಡುವವರಿಗಾಗಿ ವಿಶೇಷ ಕೋವಿಡ್ 19 ತಪಾಸಣಾ ಕೇಂದ್ರವನ್ನು ದೆಹಲಿ ಸರಕಾರ ತೆರೆದಿತ್ತು. ಕರ್ನಾಟಕ ಸರಕಾರ ಕೂಡಾ, ಮಾಧ್ಯಮದವರಿಗೆ ಈ ತಪಾಸಣೆಯನ್ನು ನಡೆಸಿತ್ತು.

ಪ್ರಿಂಟ್ ಮತ್ತು ಇಲೆಕ್ಟ್ರಾನಿಕ್ ಮೀಡಿಯಾದಲ್ಲಿ ಕೆಲಸ ಮಾಡುವವರು, ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಳ್ಳಲು, ಕೇಂದ್ರ ಸರಕಾರ ಸೂಚಿಸಿತ್ತು.

English summary
Kejriwal shares ‘happy’ news, says only 3 of 529 media persons Covid-19 positive in Delhi, ದೆಹಲಿ ಜನತೆ ಜೊತೆ ಸಿಹಿಸುದ್ದಿ ಹಂಚಿಕೊಂಡ ಸಿಎಂ ಕೇಜ್ರಿವಾಲ್
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X