ಸ್ವಾತಂತ್ರ್ಯೋತ್ಸವಕ್ಕೆ ಸಿಂಗರ್ ಆಗ್ಬಿಟ್ರು ದೆಹಲಿ ಸಿಎಂ ಕೇಜ್ರಿವಾಲ್
ನವದೆಹಲಿ, ಆಗಸ್ಟ್ 15: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಎಂದ ಕೂಡಲೆ ನೆನಪಿಗೆ ಬರುವುದು ಅವರ ಉಪವಾಸ ಸತ್ಯಾಗ್ರಹ ಮತ್ತು ಅವರ ಕೆಮ್ಮು. ಆದರೆ ಅವರಲ್ಲೊಬ್ಬ ಹಾಡುಗಾರನೂ ಇದ್ದಾನೆ.
ಹೌದು, ತಮ್ಮೊಳಗೊಬ್ಬ ಹಾಡುಗಾರನಿದ್ದಾನೆ (ಉತ್ತಮವೋ ಅಲ್ಲವೋ ಎಂದು ಹಾಡು ಕೇಳಿದವರೆ ಹೇಳಬೇಕು) ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಇಂದು ಸಾಬೀತುಮಾಡಿದ್ದಾರೆ.
ಸ್ವಾತಂತ್ರ್ಯೋತ್ಸವಕ್ಕೆ ದೆಹಲಿಯಲ್ಲಿ ತಮ್ಮ ಭಾಷಣಕ್ಕೆ ಸಜ್ಜಾಗಿದ್ದ ವೇದಿಕೆಯನ್ನು ತಮ್ಮ ಪ್ರತಿಭಾ ಪ್ರದರ್ಶನಕ್ಕೂ ಬಳಸಿಕೊಂಡ ಅರವಿಂದ ಕೇಜ್ರಿವಾಲ್ ಅವರು, ಹಾಡೊಂದನ್ನು ಹಾಡಿದ್ದಾರೆ.
ತಮ್ಮ ಭಾಷಣದ ಕೊನೆಯಲ್ಲಿ ಅವರು 'ಹಮ್ ಹೋಂಗೆ ಕಾಮಯಾಬ್ ಏಕ್ ದಿನ್' ಹಾಡನ್ನು ಹಾಡನ್ನೂ ಪೂರ್ತಿ ಹಾಡಿದ್ದಾರೆ. ಅವರ ಹಾಡಿನ ವೈಖರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿ ಸಿಎಂ ಕೇಜ್ರಿವಾಲ್ ಹಾಡಿಗೆ ಹಲವು ವ್ಯಂಗ್ಯದ ಪ್ರತಿಕ್ರಿಯೆಗಳು ಬಂದಿದ್ದು, ಅವುಗಳಲ್ಲಿ ಆಯ್ದ ಕೆಲವು ಇಲ್ಲಿವೆ ನೋಡಿ...
— prangshu saikia (@i_prangshu) August 15, 2018 |
ಆಗ್ ಲಗಾ ದೇಗಾ ತೂ
ಹಾಡಿನ ರಿಯಾಲಿಟಿ ಶೋ ಒಂದರಲ್ಲಿ ತೀರ್ಪುಗಾರ ಸಂಗೀತ ನಿರ್ದೇಶಕ ಅನು ಮಲ್ಲಿಕ್ (ಆತ ತನ್ನ ಕೆಟ್ಟ ಕಂಠದ ಹಾಡಿಗೂ ಖ್ಯಾತ) ಹಾಡುಗಾರರಿಗೆ 'ಆಗ್ ಲಗಾ ದೇಗಾ ತೂ' ಎಂದು ಹೊಗಳುತ್ತಿರುತ್ತಾರೆ. ಕೇಜ್ರಿವಾಲ್ ಹಾಡು ಕೇಳಿ ಅನು ಮಲ್ಲಿಕ್ 'ಆಗ್ ಲಗಾ ದೇಗಾ ತೂ' ಎನ್ನುತ್ತಿದ್ದಾರೆ.
|
ಹಿಂಸಿಸುವ ಇನ್ನೊಂದು ಮಾರ್ಗ
ಜನರನ್ನು ಹಿಂಸಿಸಲು ಕೇಜ್ರಿವಾಲ್ ಹಾಡಿನ ಮಾರ್ಗ ಹುಡುಕಿಕೊಂಡಿದ್ದಾರೆ ಎಂಬರ್ಥದ ಟ್ವೀಟ್ ಮಾಡಿದ್ದಾರೆ ಎಂಡಿ ಪ್ರಭು.
|
80000 ನಶೆ ಇನ್ನೂ ಇಳಿದಿಲ್ಲ
ಕೇಜ್ರಿವಾಲ್ ಅವರು ಕುಮಾರಸ್ವಾಮಿ ಅವರ ಪ್ರಮಾಣವಚನಕ್ಕೆ ಬಂದಿದ್ದಾಗ ಇಲ್ಲಿನ ಹೊಟೆಲ್‌ನಲ್ಲಿ ಉಳಿದು ಕೊಂಡ ಕೆಲವೇ ಗಂಟೆಗಳಲ್ಲಿ 80000 ಖರ್ಚು ಮಾಡಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದು ದೆಹಲಿಯಲ್ಲೂ ಭಾರಿ ವಿವಾದ ಸೃಷ್ಠಿಸಿತ್ತು. ಇದನ್ನೇ ಬಳಸಿ ಇಲ್ಲೊಬ್ಬರು. 80000ದ ನಶೆ ಇನ್ನೂ ಇಳಿದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
|
ಕಣ್ಣೀರು ಹಾಕಿದ ನೇಹಾ ಕಕ್ಕರ್
ಸಿಂಗಿಂಗ್ ರಿಯಾಲಿಟಿ ಶೋ ಆಡಿಶನ್ ಮಾಡುವ ಹಾಡುಗಾರ್ತಿ ನೇಹಾ ಕಕ್ಕರ್ ಅಭ್ಯರ್ಥಿಗಳು ಉತ್ತಮವಾಗಿ ಹಾಡಿದರೆ ಕಣ್ಣೀರು ಹಾಕಿ 'ನೀವು ಮುಂಬೈಗೆ ಬರುತ್ತೀರಿ' (ಶೋನಲ್ಲಿ ಭಾಗವಹಿಸಲು) ಎನ್ನುತ್ತಾರೆ. ಅರವಿಂದ ಕೇಜ್ರಿವಾಲ್ ಅವರ ಹಾಡು ಕೇಳಿ ನೇಹಾ ಕಕ್ಕರ್ ಕಣ್ಣೀರು ಹಾಕಿ ಅವರನ್ನು ಮುಂಬೈಗೆ ಕರೆಯುತ್ತಿದ್ದಾರೆ.
|
ಪಾಕಿಸ್ತಾನ್ ಐಡಲ್‌ಗಾಗಿ ತಯಾರಿ
ಇಂಡಿಯನ್ ಐಡಲ್ ಸಿಂಗಿಂಗ್ ರಿಯಾಲಿಟಿ ಶೋನಂತೆಯೇ ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಐಡಲ್ ಎಂಬ ಶೋ ಇದೆಯಂತೆ ಅದಕ್ಕೆ ಹೋಗಲು ಕೇಜ್ರಿವಾಲ್ ತಯಾರಿ ನಡೆಸುತ್ತಿದ್ದಾರಂತೆ. ಎಂಥ ಸಾವಾ ಮಾರ್ರೆ...












Click it and Unblock the Notifications