ಅರವಿಂದ್ ಕೇಜ್ರಿವಾಲ್ ಆಸ್ತಿ ಘೋಷಣೆ, ಸ್ವಂತ ಕಾರಿಲ್ಲ, ಆದಾಯ ಕುಸಿತ

ನವದೆಹಲಿ, ಫೆಬ್ರವರಿ 05: ದೆಹಲಿ ವಿಧಾನಸಭೆ ಚುನಾವಣೆಯ ಮತದಾನದ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಭರಾಟೆ ಜೋರಾಗಿದೆ. ಈ ನಡುವೆ ಬುಧವಾರದಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ಅರವಿಂದ್ ತಮ್ಮ ಆಸ್ತಿ ಮೌಲ್ಯ 3.4 ಕೋಟಿ ರು ಎಂದು ಘೋಷಿಸಿದ್ದಾರೆ. 2015ರ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಅಫಿಡವಿಟ್ ಗೆ ಹೋಲಿಸಿದರೆ ಕೊಂಚ ಏರಿಕೆಯಾಗಿದೆ. 2.1 ಕೋಟಿ ರು ಎಂದು ಘೋಷಿಸಿದ್ದರು.

ಇತ್ತೀಚಿನ ಅಫಿಡವಿಟ್ ಪ್ರಕಾರ ನಗದು ಹಾಗೂ ಹೂಡಿಕೆ ಸೇರಿದಂತೆ ಚರಾಸ್ತಿ ಮೌಲ್ಯ 9.95 ಲಕ್ಷ ರು, ಕೇಜ್ರಿವಾಲ್ ಪತ್ನಿ ಆಸ್ತಿ 57.07 ಲಕ್ಷ ರು ಇದೆ. ಇದರಲ್ಲಿ 320 ಗ್ರಾಂ ಚಿನ್ನ(12 ಲಕ್ಷ ರು ಮೌಲ್ಯ), 1ಕೆಜಿ ಬೆಳ್ಳಿ (40, 000 ರು) ಸೇರಿದೆ. 2015ರಲ್ಲಿ ಕೇಜ್ರಿವಾಲ್ ಚರಾಸ್ತಿ 2.26 ಲಕ್ಷ ಹಾಗೂ ಪತ್ನಿ ಆಸ್ತಿ 15.28 ಲಕ್ಷ ರು ಇತ್ತು.

Delhi CM Arvind Kejriwal has assets worth Rs 3.4 crore

ಕುತೂಹಲದ ಸಂಗತಿ ಎಂದರೆ ಕೇಜ್ರಿವಾಲ್ ಆದಾಯ ಕುಸಿತ ಕಂಡಿದೆ. 2014-15ರಲ್ಲಿ 7.42 ಲಕ್ಷ ರು ನಷ್ಟಿತ್ತು. 2018-19ರಲ್ಲಿ 2.81 ಲಕ್ಷ ರು ಗೆ ಕುಸಿದಿದೆ. ಕೇಜ್ರಿವಾಲ್ ಪತ್ನಿ ಆಸ್ತಿ 2014-15ರಲ್ಲಿ12.08 ಲಕ್ಷ ರು ಇತ್ತು. 2018-19ರಲ್ಲಿ ಆಸ್ತಿ 9.94 ಲಕ್ಷ ರು ಗೆ ಕುಸಿದಿದೆ.

ಪಿಟಿಐ ವರದಿಯಂತೆ 32 ಲಕ್ಷ ರು ನಗದು, ನಿಶ್ಚಿತ ಠೇವಣಿ ಸುನಿತಾ ಕೇಜ್ರಿವಾಲ್ ಹೆಸರಿನಲ್ಲಿದೆ. ಕೇಜ್ರಿವಾಲ್ ಬಳಿ 12, 000 ರು ನಗದು ಹಾಗೂ 9,000 ರು ನಗದು ಹೊಂದಿದ್ದಾರೆ.

ಕೇಜ್ರಿವಾಲ್ ಅವರು ಯಾವುದೇ ವಾಹನ ಹೊಂದಿಲ್ಲ. ಪತ್ನಿ ಸುನಿತಾ ಬಳಿ ಮಾರುತಿ ಬಲೆನೋ (6.20 ಲಕ್ಷ ರು) ಹೊಂದಿದ್ದಾರೆ. ಕೇಜ್ರಿವಾಲ್ ಸ್ಥಿರಾಸ್ತಿ ಮೌಲ್ಯ 92 ಲಕ್ಷ ರು ನಿಂದ 1.77 ಕೋಟಿ ರುಗೇರಿದೆ. ಪತ್ನಿ ಬಳಿ ಸ್ಥಿರಾಸ್ತಿ ಮೌಲ್ಯ 1 ಕೋಟಿ ರು ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+