ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಜಸ್ಲೀನ್ ಕೌರ್ ಪ್ರಕರಣ ರಾಜಕೀಯ ತಿರುವು ಪಡೆಯಿತೇ?

By Vanitha
|
Google Oneindia Kannada News

ನವದೆಹಲಿ, ಆಗಸ್ಟ್. 25 : ಅವಾಚ್ಯ ಶಬ್ದಗಳಾಡಿ ರೇಗಿಸಿದ ಎಂಬ ಕಾರಣ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪುಂಡಾರಿಯ ಜಾತಕ ಬಿಚ್ಚಿಟ್ಟಿದ್ದ ಕಾಲೇಜು ಯುವತಿ ಪ್ರಕರಣಕ್ಕೆ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗೆ ಗುರಿಯಾಗಿದ್ದ ಲೈಂಗಿಕ ದೌರ್ಜನ್ಯ ವಿಚಾರ ಇದೀಗ ಬಿಜೆಪಿ ಕಾರ್ಯಕರ್ತರು ಮತ್ತು ಆಪ್‌ ಪಕ್ಷಗಳ ಕಾರ್ಯಕರ್ತರ ನಡುವೆ ಕಾದಾಟಕ್ಕೆ ಕಾರಣವಾಗಿದೆ.[ಏನ್ ಮಾಡ್ಕೋತಿಯೋ ಮಾಡ್ಕೋ ಅಂದವನಿಗೆ ತಕ್ಕ ಶಾಸ್ತಿ]

Delhi boy abuse girl on road incident take political turn on Tuesday

ದೆಹಲಿಯ ಅಗರ್ ವಾಲ್ ಬಳಿಯ ತಿಲಕ್‌ ನಗರ ನಿವಾಸಿ ಜಸ್ಲೀನ್ ಕೌರ್ ಆಪ್ ಪಕ್ಷದ ಕಾರ್ಯಕರ್ತೆ. ಈಕೆ ಆಪ್ ಪಕ್ಷದ ಖ್ಯಾತಿ ಹೆಚ್ಚಿಸಲು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸ್ಟೇಟಸ್ ಅಪ್ ಲೋಡ್ ಮಾಡಿದ್ದಾಳೆ. ಈಕೆ ಹೇಳುತ್ತಿರುವುದರಲ್ಲಿ ಕೊಂಚವೂ ಸತ್ಯವಿಲ್ಲ ಎಂದು ಸಾಕಷ್ಟು ಚರ್ಚೆಯಾಗುತ್ತಿದೆ.

ಯುವತಿಯನ್ನು ರೇಗಿಸಿದ ಆರೋಪ ಎದುರಿಸುತ್ತಿರುವ ವಿಕಾಸ್ ಯೋಗಿ ಯಾವುದೇ ತಪ್ಪು ಮಾಡಿಲ್ಲ. ಆದರೆ ಯುವತಿ ಸುಳ್ಳಿನ ಸರಮಾಲೆ ಪೋಣಿಸಿದ್ದಾಳೆ ಎಂದು ಪುರುಷ ವೇದಿಕೆ ಸಮಾಜ ಯುವತಿ ಮೇಲೆ ಕಿಡಿಕಾರಿದ್ದಾರೆ.

ಈತ ಪುಂಡಾಟ ನಡೆಸಿದ್ದರೆ ನೇರವಾಗಿ ಪೊಲೀಸ್ ಗೆ ದೂರು ದಾಖಲಿಸಬಹುದಿತ್ತು. ಆತನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಅವಶ್ಯಕತೆ ಇರಲಿಲ್ಲ. ಆತ ಮಾಡಿರುವ ನಾವು ಇನ್ನೊಬ್ಬರಿಗೆ ನೋವು ಕೊಡಲು ಇಚ್ಛಿಸುವುದಿಲ್ಲ ಎಂದು ಉತ್ತರಿಸಿದ್ದಾಳೆ.

ಸಾರ್ವಜನಿಕರು ಸಹಾಯಕ್ಕೆ ಬರಲಿಲ್ಲ ಎಂದು ಹೇಳಿರುವ ವಿಷಯದ ಮೇಲೂ ಸಾಕಷ್ಟು ಚರ್ಚೆ ನಡೆಯುತ್ತಿದ್ದರೂ, ಸಾರ್ವಜನಿಕರು ಸಹಾಯಕ್ಕೆ ಬಾರದೇ ಇರುವುದಕ್ಕೆ ಹೇಗೆ ಸಾಧ್ಯ ಎಂದು ಆಪ್ ಕಾರ್ಯಕರ್ತೆಯ ಹುನ್ನಾರ ಎಂದು ಹೇಳಿದ್ದಾರೆ.

ಆಕೆ ಫೇಸ್‌ ಬುಕ್‌ನಲ್ಲಿ ಆರೋಪಿಯ ಬೈಕ್ ನಂಬರ್ ಆತನ ಕುರಿತಾಗಿ ಸ್ಟೇಟಸ್ ಹಾಕಿರುವುದನ್ನು ಗಣನೆಗೆ ತೆಗೆದು ಕೊಂಡ ಪೊಲೀಸರು, ಆತನ ಬಗ್ಗೆ ವಿಚಾರಿಸದೆ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಫೇಸ್ ಬುಕ್ ನಲ್ಲಿ ಜಸ್ಲೀನ್ ಕವೂರ್ ವಿರುದ್ದ ಹಲವಾರು ಪ್ರಶ್ನೆಗಳು ಏಳುತ್ತಿವೆ.

First, I want to clear that I am against eve teasing and eve teasers should be punished hard. If that person is guilty...

Posted by Aalok Pradhan onMonday, August 24, 2015

English summary
Delhi boy abuse girl on road incident take political turn on Tuesday. This incident fully turned in Fight between the BJP and the Amm Aadmi party activites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X