ಮೋದಿ 2.0 ಪ್ರಮಾಣ ವಚನಕ್ಕೆ ಬೀಫ್ ಗಿಫ್ಟ್, ಬಿಜೆಪಿ ತಾಣಕ್ಕೆ ಕನ್ನ

ನವದೆಹಲಿ, ಮೇ 31: ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ದೆಹಲಿ ಬಿಜೆಪಿ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ.

ಇಷ್ಟೇ ಅಲ್ಲದೆ, ಬಿಜೆಪಿಯ ದೆಹಲಿ ಘಟಕದ ಅಧಿಕೃತ ವೆಬ್ ತಾಣದಲ್ಲಿ ಗೋಮಾಂಸ ಬೀಫ್ ಚಿತ್ರ ಹಾಕಲಾಗಿದೆ. ಮೋದಿ ಅವರ ಪ್ರಮಾಣ ವಚನ ಸಂದರ್ಭಕ್ಕೆ ತಕ್ಕಂತೆ ಪೂರ್ವನಿಯೋಜಿತವಾಗಿ ಹ್ಯಾಕ್ ಮಾಡಿ, ಬೀಫ್ ಚಿತ್ರ ಹಾಕಲಾಗಿದೆ ಜೊತೆಗೆ ಗೋಮಾಂಸದ ಬಗೆ ಬಗೆ ಖಾದ್ಯಗಳನ್ನು ವೆಬ್ ಸೈಟ್ ಮೆನುವಿನಲ್ಲಿ ನೀಡಲಾಗಿದೆ.

Delhi BJP Website hacked during Modi 2.0 Oath taking

ಬಿಜೆಪಿ ಎಂಬ ಹೆಸರನ್ನು ಬೀಫ್ ಎಂದು ಬದಲಾಯಿಸಿ ನಂತರ Shadow_V1P3R ಎಂದು ಬರೆದಿದ್ದಾರೆ. ಈ ಹೆಸರಿನ ತಂಡದವರು ವೆಬ್ ತಾಣವನ್ನು ಹ್ಯಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪಕ್ಷದ ಇತಿಹಾಸ, ನಾಯಕರು, ಧ್ಯೇಯ ಇನ್ನಿತರ ಮೆನುಗಳನ್ನು ಬದಲಾಯಿಸಲಾಗಿದೆ.

Delhi BJP Website hacked during Modi 2.0 Oath taking

ಇದೇ ವರ್ಷ ಬಿಜೆಪಿಯ ಅಧಿಕೃತ ವೆಬ್ ತಾಣವನ್ನು ಹ್ಯಾಕ್ ಮಾಡಲಾಗಿತ್ತು, 15-20 ದಿನಗಳ ಕಾಲ ವೆಬ್ ಸೈಟ್ ದುರಸ್ತಿಯಾಗಿರಲಿಲ್ಲ. ವಿಪಕ್ಷಗಳು ಟ್ರಾಲ್ ಮಾಡಿದ್ದರು.

ಬಿಜೆಪಿ ವೆಬ್ ಸೈಟ್ ಹ್ಯಾಕ್ ಮಾಡಿದ ಬಳಿಕ ಮೋದಿ ಅವರಿರುವ ವಿಡಿಯೋ ಕ್ಲಿಪಿಂಗ್ ಹಾಕಲಾಗಿದ್ದು, ಜತೆಗೆ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮೆರ್ಕಲ್ ಇದ್ದಾರೆ. ಪ್ರಧಾನಿ ಮೋದಿ ಅವರು ಹೆಲೋ ಎನ್ನುತ್ತಿರುವಾಗ ಏಂಜೆಲಾ ಅವರು ನನಗೆ ಬಾಯ್ ಫ್ರೆಂಡ್ ಇದ್ದಾನೆ ಎನ್ನುತ್ತಾ ಮೋದಿ ಅವರನ್ನು ನೋಡದಂತೆ ಅವರ ಹಿಂಬದಿಗೆ ಸರಿಯುವಂಥ ವಿಡಿಯೋ ಹಾಕಲಾಗಿತ್ತು. ಕೇಂದ್ರ ಸರ್ಕಾರದ ವೆಬ್ ಸೈಟ್ ಗಳು ಹೆಚ್ಚಿನ ಭದ್ರತೆ ಹೊಂದಿಲ್ಲ ಎಂದು ಎಥಿನಿಕಲ್ ಹ್ಯಾಕರ್ ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+