ಆಮ್ ಆದ್ಮಿ ಜಯಭೇರಿ: ಎಕ್ಸಿಟ್ ಪೋಲುಗಳೂ ಧೂಳೀಪಟ

ಎಪ್ಪತ್ತು ಶಾಸಕರ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ತನ್ನ ನಿಖರತೆಯನ್ನು ಕಾಪಾಡಿಕೊಳ್ಳುವಲ್ಲಿ ಈ ಬಾರಿ ಸಂಪೂರ್ಣ ವಿಫಲವಾಗಿದೆ.

7-8 ವಾಹಿನಿಗಳು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಿದ್ದ ಸಮೀಕ್ಷೆಗಳಲ್ಲಿ ಯಾವ ಸಮೀಕ್ಷೆಗಳೂ ನಿಜವಾದ ಫಲಿತಾಂಶಕ್ಕೆ ಹತ್ತಿರವಾಗದೇ, ಮುಂದಿನ ದಿನಗಳಲ್ಲಿ ಎಕ್ಸಿಟ್ ಪೋಲುಗಳ ಸತ್ಯಾಸತ್ಯಯನ್ನೇ ಪ್ರಶ್ನಿಸುವಂತಾಗಿದೆ. (ಗುಪ್ತಚರ ಇಲಾಖೆ ಸ್ಫೋಟಕ ವರದಿ)

ವಾಹಿನಿಗಳ ಸಮೀಕ್ಷೆ ಜೊತೆ ಗುಪ್ತಚರ ಇಲಾಖೆ ನೀಡಿರುವ ಸಮೀಕ್ಷಾ ವರದಿ ಕೂಡಾ ಉಲ್ಟಾ ಹೊಡೆದಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 14ರಿಂದ 16 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲಿದೆ ಎಂದು ಗುಪ್ತಚರ ಇಲಾಖೆ ವರದಿ ಮಾಡಿತ್ತು.

ಇದರ ಜೊತೆಗೆ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಗಳು ಕೂಡಾ ಠುಸ್ ಆಗಿದೆ. ಬಹುಷಃ ಹೊರಬಿದ್ದಿರುವ ಜನಾದೇಶವನ್ನು ನೋಡಿ ಎರಡೂ ಪಕ್ಷಗಳು ನಿಬ್ಬೆರಗಾಗಿರಬಹುದು. ಬಿಜೆಪಿ ತನ್ನ ಆಂತರಿಕ ಸಮೀಕ್ಷೆಯಲ್ಲಿ ಪಕ್ಷಕ್ಕೆ 36 - 39 ಸೀಟು ಗೆಲ್ಲಬಹುದೆಂದು ಹೇಳಿತ್ತು (ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟ)

ಸಮೀಕ್ಷೆಗಳಲ್ಲಿ ಹೆಚ್ಚುಕಮ್ಮಿ ಕರಾರುವಕ್ಕಾದ ನಂಬರ್ ನೀಡುವಲ್ಲಿ ಹೆಸರುವಾಸಿಯಾಗಿರುವ 'ಚಾಣಕ್ಯ' ಸಮೀಕ್ಷಾ ವರದಿ ಕೂಡಾ ಈ ಬಾರಿ ಸುಳ್ಳಾಗಿದೆ. ವಿವಿಧ ವಾಹಿನಿಗಳು ಎಕ್ಸಿಟ್ ಪೋಲ್ ನಲ್ಲಿ ನೀಡಿದ್ದ ಸೀಟುಗಳೆಷ್ಟು, ನಿಜವಾದ ಫಲಿತಾಂಶವೇನು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ (ದೆಹಲಿ ಅಸೆಂಬ್ಲಿಯ ಒಟ್ಟು ಸ್ಥಾನಗಳು - 70)

ಇಂಡಿಯಾ ಟಿವಿ - ಸಿವೋಟರ್ಸ್ (ಆವರಣದಲ್ಲಿ ಅಂತಿಮ ಫಲಿತಾಂಶ)

ಇಂಡಿಯಾ ಟಿವಿ - ಸಿವೋಟರ್ಸ್ (ಆವರಣದಲ್ಲಿ ಅಂತಿಮ ಫಲಿತಾಂಶ)

ಆಮ್ ಆದ್ಮಿ ಪಕ್ಷ : 53 (67)
ಬಿಜೆಪಿ : 17 (03)
ಕಾಂಗ್ರೆಸ್ : 00 (00)
ಇತರರು : 00 (00)

ಇಂಡಿಯಾ ಟುಡೆ, ಸಿಸಿರೋ (ಆವರಣದಲ್ಲಿ ಅಂತಿಮ ಫಲಿತಾಂಶ)

ಇಂಡಿಯಾ ಟುಡೆ, ಸಿಸಿರೋ (ಆವರಣದಲ್ಲಿ ಅಂತಿಮ ಫಲಿತಾಂಶ)

ಆಮ್ ಆದ್ಮಿ ಪಕ್ಷ : 39 (67)
ಬಿಜೆಪಿ : 29 (03)
ಕಾಂಗ್ರೆಸ್ : 02 (00)
ಇತರರು : 00 (00)

ಎಬಿಪಿ - ನೀಲ್ಸನ್ (ಆವರಣದಲ್ಲಿ ಅಂತಿಮ ಫಲಿತಾಂಶ)

ಎಬಿಪಿ - ನೀಲ್ಸನ್ (ಆವರಣದಲ್ಲಿ ಅಂತಿಮ ಫಲಿತಾಂಶ)

ಆಮ್ ಆದ್ಮಿ ಪಕ್ಷ : 39 (67)
ಬಿಜೆಪಿ : 28 (03)
ಕಾಂಗ್ರೆಸ್ : 03 (00)
ಇತರರು : 00 (00)

News 24 - Today's Chanakya (ಆವರಣದಲ್ಲಿ ಅಂತಿಮ ಫಲಿತಾಂಶ)

News 24 - Today's Chanakya (ಆವರಣದಲ್ಲಿ ಅಂತಿಮ ಫಲಿತಾಂಶ)

ಆಮ್ ಆದ್ಮಿ ಪಕ್ಷ : 48 (67)
ಬಿಜೆಪಿ : 22 (03)
ಕಾಂಗ್ರೆಸ್ : 00 (00)
ಇತರರು : 00 (00)

AXIS - APM (ಆವರಣದಲ್ಲಿ ಅಂತಿಮ ಫಲಿತಾಂಶ)

AXIS - APM (ಆವರಣದಲ್ಲಿ ಅಂತಿಮ ಫಲಿತಾಂಶ)

ಆಮ್ ಆದ್ಮಿ ಪಕ್ಷ : 53 (67)
ಬಿಜೆಪಿ : 17 (03)
ಕಾಂಗ್ರೆಸ್ : 02 (00)
ಇತರರು : 00 (00)

Times Now (ಆವರಣದಲ್ಲಿ ಅಂತಿಮ ಫಲಿತಾಂಶ)

Times Now (ಆವರಣದಲ್ಲಿ ಅಂತಿಮ ಫಲಿತಾಂಶ)

ಆಮ್ ಆದ್ಮಿ ಪಕ್ಷ : 38 (67)
ಬಿಜೆಪಿ : 34 (03)
ಕಾಂಗ್ರೆಸ್ : 03 (00)
ಇತರರು : 00 (00)

India News (ಆವರಣದಲ್ಲಿ ಅಂತಿಮ ಫಲಿತಾಂಶ)

India News (ಆವರಣದಲ್ಲಿ ಅಂತಿಮ ಫಲಿತಾಂಶ)

ಆಮ್ ಆದ್ಮಿ ಪಕ್ಷ : 53 (67)
ಬಿಜೆಪಿ : 17 (03)
ಕಾಂಗ್ರೆಸ್ : 00 (00)
ಇತರರು : 00 (00)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+