ಬಿಜೆಪಿಗೆ ಮುಂದಿದೆ ಮಾರಿ ಹಬ್ಬ: ಕೀರ್ತಿ ಅಜಾದ್
ಬೆಂಗಳೂರು, ಡಿ.24: ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಪಕ್ಷದಿಂದ ಅಮಾನತುಗೊಂಡಿರುವ ಸಂಸದ ಕೀರ್ತಿ ಅಜಾದ್ ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಡಿಡಿಸಿಎ ಪ್ರಕರಣ ಸರ್ಕಾರಕ್ಕೆ ತೊಂದರೆ ಕೊಡುತ್ತಿದೆ ಎಂದಾದರೆ, ಐಪಿಎಲ್ ಭ್ರಷ್ಟಾಚಾರದ ಹೊಣೆಯನ್ನು ಸರ್ಕಾರ ಹೊರುವುದೇ? ಎಂದು ಪ್ರಶ್ನಿಸಿದ್ದಾರೆ. ಇನ್ನಷ್ಟು ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆಯುವೆ ಎಂದು ಕೀರ್ತಿ ಅಜಾದ್ ಗುಡುಗಿದ್ದಾರೆ.
ಮಾಜಿ ಕ್ರಿಕೆಟರ್, ಹಾಲಿ ಸಂಸದ ಕೀರ್ತಿ ಅಜಾದ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಪಕ್ಷದಿಂದ ಬುಧವಾರ ಸಂಜೆ ಉಚ್ಚಾಟನೆ ಮಾಡಲಾಗಿತ್ತು. ಕೀರ್ತಿ ಅಜಾದ್ ಅವರು ಡಿಡಿಸಿಎ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವಿಡಿಯೋ ಸಾಕ್ಷ್ಯ ಬಹಿರಂಗಪಡಿಸಿ, ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪ ಹೊರೆಸಿದ್ದರು.[ಡಿಡಿಸಿಎ ಭ್ರಷ್ಟಾಚಾರ: ವಿಡಿಯೋ ಸಾಕ್ಷ್ಯ ಬಹಿರಂಗ]
ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿರುವ ದರ್ಭಾಂಗ ಕ್ಷೇತ್ರದ ಸಂಸದ ಕೀರ್ತಿ ಅಜಾದ್ ಅವರು ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ 52 ಪ್ರಶ್ನೆಗಳನ್ನು ಹಾಕಿದ್ದಾನೆ ಅದಕ್ಕೆ ಉತ್ತರ ನೀಡಲಿ ಎಂದಿದ್ದಾರೆ.[ಸಂಸದ ಕೀರ್ತಿ ಅಜಾದ್, ಬಿಜೆಪಿಯಿಂದ ಅಮಾನತು]
ದೆಲ್ಲಿ ಹಾಗೂ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಅವ್ಯವಹಾರದ ಬಗ್ಗೆ ವಿಕಿಲೀಕ್ಸ್ ಇಂಡಿಯಾ ಸಂಗ್ರಹಿಸಿದ ವಿಡಿಯೋ ಸಾಕ್ಷ್ಯವನ್ನು ಕಳೆದ ಭಾನುವಾರ ಪ್ರದರ್ಶಿಸಿದ್ದರು.ಈಗ ಸಂಗ್ರಹಿಸಿರುವ ದಾಖಲೆಗಳನ್ನು ಇಟ್ಟುಕೊಂಡು ದೆಹಲಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುವುದಾಗಿ ಹೇಳಿದರು.

ಎಲ್ ಕೆ ಅಡ್ವಾಣಿ ಅವರ ಸಲಹೆ ಕೇಳುತ್ತೇನೆ: ಕೀರ್ತಿ
ಭ್ರಷ್ಟಾಚಾರದ ವಿರುದ್ಧ ಮಾತನಾಡಿದರೆ ಪಕ್ಷದಿಂದ ಉಚ್ಚಾಟನೆ ಮಾಡುತ್ತಾರೆ ಎಂದರೆ ಪಕ್ಷದ ಸಿದ್ಧಾಂತದ ಬಗ್ಗೆ ಪ್ರಶ್ನೆ ಕೇಳಬೇಕಾಗುತ್ತದೆ. ನಾನು ಈ ಬಗ್ಗೆ ಹಿರಿಯ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರನ್ನು ಪ್ರಶ್ನಿಸುತ್ತೇನೆ. ಅಮಾನತು ಆದೇಶ ಹೊರಡಿಸುವ ಮುನ್ನ ನೋಟಿಸ್ ನೀಡಬೇಕು. ಸಂಸದೀಯ ಮಂಡಳಿಯಲ್ಲಿ ಚರ್ಚೆಯಾಗಬೇಕು ಯಾವುದೇ ಕ್ರಮ ಅನುಸರಿಸಿಲ್ಲ ಏಕೆ ಎಂದು ಕೇಳಿದರು.

ಕಾಂಗ್ರೆಸ್ ಅಥವಾ ಆಮ್ ಆದ್ಮಿ ಪಕ್ಷದ ಜೊತೆ ಕೈ ಜೋಡಿಸಿಲ್ಲ
ನಾನು ಕಾಂಗ್ರೆಸ್ ಅಥವಾ ಆಮ್ ಆದ್ಮಿ ಪಕ್ಷದ ಜೊತೆ ಕೈ ಜೋಡಿಸಿಲ್ಲ. ನನಗೆ ಅದರ ಅವಶ್ಯಕತೆ ಇಲ್ಲ. ಬೇಕಾದರೆ ಸುಬ್ರಮಣಿಯನ್ ಸ್ವಾಮಿ ನನಗೆ ನೆರವು ನೀಡಲಿ. ನನ್ನ ತಂದೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದರು. ನಾನು ಮೋದಿ ಅವರು ಹಾಕಿಕೊಟ್ಟ ಮಾರ್ಗದಲ್ಲೇ ಸಾಗುತ್ತಿದ್ದೇನೆ. ಮೋದಿ ಅವರು ಈ ಬಗ್ಗೆ ಗಮನ ಹರಿಸಲಿ ಎಂದಿದ್ದಾರೆ.

Wikileaks4India ನಿಂದ ಖಚಿತ ಮಾಹಿತಿ
ಸುಮಾರು 28 ನಿಮಿಷಗಳ ವಿಡಿಯೋ ಐದು ಭಾಗಗಳಲ್ಲಿದ್ದು, ಡಿಡಿಸಿಎ ಉಪ ಗುತ್ತಿಗೆ, ಅವ್ಯವಹಾರಗಳ ಬಗ್ಗೆ ವಿವರಣೆ ಇದೆ. Wikileaks4India ನಿಂದ ಖಚಿತ ಮಾಹಿತಿ ಪಡೆದು ಈ ವಿಡಿಯೋ ತಯಾರಿಸಲಾಗಿದೆ. ಇದರಲ್ಲಿ ನಕಲಿ ಕಂಪನಿಗಳು, ಉಪ ಗುತ್ತಿಗೆ ಅಕ್ರಮದ ಬಗ್ಗೆ ಹೇಳಲಾಗಿದೆ. ಕೋಟಿಗಟ್ಟಲೆ ಪಡೆದ ಕಂಪನಿಗಳಿಗೆ ಗುತ್ತಿಗೆ ಕೆಲಸ ನೀಡಿದ ಬಗ್ಗೆ ದಾಖಲೆಗಳೇ ಇಲ್ಲ. ಸುಮಾರು 14 ನಕಲಿ ಕಂಪನಿಗಳ ವಿರುದ್ಧ ಭ್ರಷ್ಟಾಚಾರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು.

ಅರುಣ್ ಜೇಟ್ಲಿಗೆ ಸೆಹ್ವಾಗ್ ಬೆಂಬಲ
ಅರುಣ್ ಜೇಟ್ಲಿ ಅವರು ಅಧಿಕಾರದಲ್ಲಿದ್ದ 13 ವರ್ಷಗಳ ಯಾವುದೇ ಅಕ್ರಮ ನಡೆದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕ್ರಿಕೆಟರ್ ಗಳಾದ ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಮುಂತಾದವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಹೇಳಿಕೆ ನೀಡಿದ ಅರವಿಂದ್ ಕೇಜ್ರಿವಾಲ್ ಹಾಗೂ ಐವರ ವಿರುದ್ಧ ಜೇಟ್ಲಿ ಅವರು 10 ಕೋಟಿ ರು ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
|
ಇದು ಐಎಸ್ಐಎಸ್ ನ ವಿಷಯವೇ?
ಪ್ರತಿಕ್ರಿಯೆಗೆ ಅವಕಾಶವಿಲ್ಲದ್ದಂತೆ ಸರ್ವಾಧಿಕಾರ ಧೋರಣೆ ನಡೆಸುವುದು ಎಷ್ಟು ಸರಿ? ಇದು ಐಎಸ್ಐಎಸ್ ನ ವಿಷಯವೇ?
|
ಮಂಜುಲ್ ಅವರಿಂದ ಕಾರ್ಟೂನ್
ಡಿಡಿಸಿಎ ಹಗರಣ, ಮಾಜಿ ಕ್ರಿಕೆಟರ್ ಕೀರ್ತಿ ಅಜಾದ್ ಅವರ ಬೌಲಿಂಗ್, ಅಮಾನತು ಬಗ್ಗೆ ವ್ಯಂಗ್ಯ ಚಿತ್ರಕಾರ ಮಂಜುಲ್ ಅವರಿಂದ ಕಾರ್ಟೂನ್
|
ಕೀರ್ತಿಗೆ ಬೆಂಬಲ ವ್ಯಕ್ತಪಡಿಸಿದ ಸ್ವಾಮಿ
ಭ್ರಷ್ಟಾಚಾರ ವಿರುದ್ಧ ಹೊರಾಟಕ್ಕಿಳೀದರೆ ಕೀರ್ತಿಗೆ ಬೆಂಬಲ ವ್ಯಕ್ತಪಡಿಸುತ್ತೇನೆ ಇದರಲ್ಲಿ ಯಾವ ತಪ್ಪಿಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.












Click it and Unblock the Notifications