ಪ್ರತಿ ತಿಂಗಳೂ 3000 ಕೆಜಿ ಚಿನ್ನ ಕಳ್ಳಸಾಗಣೆ

curbs-to-contain-current-account-deficit-lead-to-high-gold-smuggled-pc
ನವದೆಹಲಿ, ಜ.28: ಚಿನ್ನದ ಆಮದು ಮತ್ತು ಅಧಿಕ ಆಮದು ಸುಂಕಗಳಿಂದಾಗಿ ಚಿನ್ನದ ಕಳ್ಳಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಖುದ್ದು ಹಣಕಾಸು ಸಚಿವ ಪಿ ಚಿದಂಬರಂ ಅವರೇ ಹೇಳಿದ್ದಾರೆ.

ಇತ್ತೀಚೆಗೆ ಕೆಲವು ತಿಂಗಳಲ್ಲಿ ತಿಂಗಳಿಗೆ ಸರಾಸರಿ 3 ಸಾವಿರ ಕೆಜಿಯಷ್ಟು ಚಿನ್ನ ಕಳ್ಳಸಾಗಣೆ ಮಾರ್ಗದಲ್ಲಿ ದೇಶದೊಳಕ್ಕೆ ಬಂದಿದೆ. ಇದೊಂದು ದಾಖಲೆಯೇ ಸರಿ. ಆದರೆ ಹಾಗಂತ ಆಮದು ಮೇಲಿನ ನಿರ್ಬಂಧಗಳನ್ನು ಸಡಿಲಿಸುವುದಾಗಲಿ ಅಥವಾ ಆಮದು ಸುಂಕಗಳನ್ನು ಕಡಿಮೆ ಮಾಡುವುದಾಗಲಿ ಸಾಧ್ಯವಿಲ್ಲ ಎಂದು ಚಿದಂಬರಂ ಸ್ಪಷ್ಟಪಡಿಸಿದ್ದಾರೆ.

ಸರಕಾರವು ಚಿನ್ನದ ಮೇಲಿನ ಆಮದು ಸುಂಕವನ್ನು ಶೇ. 10ರಷ್ಟು ಏರಿಸಿದ್ದರೆ RBI ಚಿನ್ನದ ಆಮದು ಮೇಲೆ ಒಂದಷ್ಟು ನಿರ್ಬಂಧಗಳನ್ನು ಹೇರಿತ್ತು. ಚಾಲ್ತಿ ಖಾತೆ ಕೊರತೆ ಅಧಿಕ ಪ್ರಮಾಣದಲ್ಲಿರುವುದೇ ಇದಕ್ಕೆ ಕಾರಣವಾಗಿದೆ. ಚಾಲ್ತಿ ಖಾತೆ ಕೊರತೆ ಕಳೆದ ವರ್ಷ 88 ಶತಕೋಟಿ ಡಾಲರಿನಷ್ಟಿತ್ತು. ಪ್ರಸ್ತುತ ಅದು 50 ಶತಕೋಟಿ ಡಾಲರ್ ಆಜುಬಾಜಿನಲ್ಲಿದೆ.

ಆದರೆ ಮುಂದಿನ ತಿಂಗಳಲ್ಲಿ current account deficit- CAD ಕಡಿಮೆಗೊಂಡು ಪರಿಸ್ಥಿತಿ ಸುಧಾರಿಸಿದರೆ ಚಿನ್ನದ ಆಮದು ಸುಂಕವನ್ನು (ಮಾರ್ಚ್ ನಂತರ) ತಗ್ಗಿಸುವುದಾಗಿಯೂ ಚಿದಂಬರಂ ಭರವಸೆ ನೀಡಿದ್ದಾರೆ.

ಚಿನ್ನದ ಆಮದು ಪ್ರಮಾಣ ಕಡಿಮೆಯಾಗಲೇಬೇಕು:
ದೇಶದ ಹಿತದೃಷ್ಟಿಯಿಂದ CAD ಕಡಿಮೆ ಮಾಡುವುದು ಅನಿವಾರ್ಯ ಮತ್ತು ಅತ್ಯಗತ್ಯ. ಹಾಗಾಗಿ ಚಿನ್ನದ ಆಮದು ಮೇಲಿನ ನಿರ್ಬಂಧಗಳನ್ನು ಹೇರುವ ಮೂಲಕ ಚಿನ್ನದ ಆಮದು ಪ್ರಮಾಣ ಕಡಿಮೆಯಾಗಿದೆ. ಕಳೆದ ಮೇ ತಿಂಗಳಲ್ಲಿ 162 ಕೆಜಿ ಚಿನ್ನ ಆಮದಾಗಿತ್ತು.

ಆದರೆ ಸೂಕ್ತ ನಿರ್ಬಂಧಗಳ ಮೂಲಕ ಆ ಪ್ರಮಾಣವನ್ನು ನವೆಂಬರ್ ವೇಳೆಗೆ 19.3 ಟನ್ ಗೆ ಕುಗ್ಗಿಸಲಾಗಿದೆ. ಇದು ಹೀಗೇ ಮುಂದುವರಿದರೆ ಮುಂಧಿನ ಮಾರ್ಚ್ ವೇಳೆಗೆ ಚಿನ್ನ ಆಮದು ಮೇಲಿನ ನಿರ್ಬಂಧಗಳನ್ನು ಸಡಿಲಿಸಲು ಸಾಧ್ಯವಾಗುತ್ತದೆ ಎಂದು ಚಿದಂಬರಂ ವಿಶ್ಲೇಷಿಸಿದರು.

ಆದರೆ ಈ ಮಧ್ಯೆ ಚಿನ್ನದ ಕಳ್ಳ ಸಾಗಣೆ ಏರುತ್ತಿರುವುದು ಆತಂಕಕಾರಿಯಾಗಿದೆ. ಪ್ರಧಾನವಾಗಿ, ಸಮುದ್ರದ ಮೂಲಕ ಹಡಗುಗಳಲ್ಲಿ ಚಿನ್ನದ ಕಳ್ಳಸಾಗಣೆಯಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+