ಕ್ರಿಮಿನಲ್ ಕೇಸು ಹೆಚ್ಚಿರುವವರ ಸಾಲಿನಲ್ಲಿ ಬಿಜೆಪಿ ಸಿಎಂ ಫಡ್ನವೀಸ್ ನಂಬರ್ ಒನ್

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 13: ದೇಶದಲ್ಲಿನ ಮುಖ್ಯಮಂತ್ರಿಗಳ ಪೈಕಿ ಹನ್ನೊಂದು ಮಂದಿ ವಿರುದ್ಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಎಡಿಆರ್ ವರದಿ ಮಾಹಿತಿ ಬಹಿರಂಗ ಪಡಿಸಿದ್ದು, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ 22 ಕ್ರಿಮಿನಲ್ ಪ್ರಕರಣಗಳಿವೆ. ಆ ಪೈಕಿ 3 ಗಂಭೀರ ಪ್ರಕರಣಗಳಿವೆ.

ದ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ (ನ್ಯೂ) ಈ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದ್ದು, ಭಾರತದ ಇಪ್ಪತ್ತೊಂಬತ್ತು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಆಸ್ತಿ ವಿವರಗಳು ನೀಡಲಾಗಿದೆ.

ಶ್ರೀಮಂತ ಸಿಎಂಗಳ ಪಟ್ಟಿ ಬಿಡುಗಡೆ, ಸಿದ್ದರಾಮಯ್ಯಗೆ ಎಷ್ಟನೇ ಸ್ಥಾನ?

ಇನ್ನು ಕ್ರಿಮಿನಲ್ ಪ್ರಕರಣಗಳನ್ನು ಹೊತ್ತಿರುವ ಮುಖ್ಯಮಂತ್ರಿಗಳ ಪೈಕಿ ಎರಡನೇ ಸ್ಥಾನದಲ್ಲಿ ಇರುವವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್. ಅವರ ವಿರುದ್ಧ 11 ಪ್ರಕರಣಗಳಿವೆ. ಮೂರನೇ ಸ್ಥಾನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದ್ದು, ಹತ್ತು ಪ್ರಕರಣಗಳಿವೆ. ಇನ್ನು ಗಂಭೀರ ಪ್ರಕರಣಗಳ ಸಂಖ್ಯೆಯಲ್ಲಿ ಕೇಜ್ರಿವಾಲ್ ನಾಲ್ಕು ಕೇಸುಗಳ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ಹನ್ನೊಂದು ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ

ಹನ್ನೊಂದು ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ

ಒಟ್ಟು ಮೂವತ್ತೊಂದು ಮುಖ್ಯಮಂತ್ರಿಗಳ ಪೈಕಿ ಹನ್ನೊಂದು ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್, ದೆಹಲಿಯ ಅರವಿಂದ್ ಕೇಜ್ರಿವಾಲ್, ಜಾರ್ಖಂಡ್ ನ ರಘುಬರ್ ದಾಸ್, ಉತ್ತರಪ್ರದೇಶದ ಯೋಗಿ ಆದಿತ್ಯನಾಥ್, ತೆಲಂಗಾಣದ ಕೆ.ಚಂದ್ರಶೇಖರ್ ರಾವ್, ಕೇರಳದ ಪಿಣರಾಯಿ ವಿಜಯನ್, ಜಮ್ಮು-ಕಾಶ್ಮೀರದ ಮೆಹಬೂಬಾ ಮುಫ್ತಿ,

ಗಂಭೀರ ಅಪರಾಧ ಪ್ರಕರಣಗಳು

ಗಂಭೀರ ಅಪರಾಧ ಪ್ರಕರಣಗಳು

ಪುದುಚೆರಿಯ ವಿ.ನಾರಾಯಣಸ್ವಾಮಿ, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು, ಪಂಜಾಬ್ ನ ಕ್ಯಾ. ಅಮರೀಂದರ್ ಸಿಂಗ್ ವಿರುದ್ಧ ಕ್ರಿಮಿನಲ್ ಕೇಸುಗಳಿವೆ. ಈ ಪೈಕಿ ಚಂದ್ರಬಾಬು ನಾಯ್ಡು, ವಿ.ನಾರಾಯಣಸ್ವಾಮಿ ಹಾಗೂ ಮೆಹಬೂಬಾ ಮುಫ್ತಿ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿಲ್ಲ. ಗಂಭೀರ ಅಪರಾಧ ಪ್ರಕರಣಗಳು ಅಂದರೆ, ಕೊಲೆ, ಕೊಲೆ ಯತ್ನ, ವಂಚನೆ, ಅಪರಾಧಕ್ಕೆ ಕುಮ್ಮಕ್ಕು ಹೀಗೆ.

ಚಂದ್ರಬಾಬು ನಾಯ್ಡು ಶ್ರೀಮಂತ ಸಿಎಂ

ಚಂದ್ರಬಾಬು ನಾಯ್ಡು ಶ್ರೀಮಂತ ಸಿಎಂ

ಇನ್ನು ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು 177 ಕೋಟಿ ಆಸ್ತಿ ಹೊಂದುವ ಮೂಲಕ ನಂಬರ್ ಒನ್ ಸ್ಥಾನದಲ್ಲಿದ್ದರೆ, ತ್ರಿಪುರಾ ಸಿಎಂ ಮಾಣಿಕ್ ಸರ್ಕಾರ್ 26 ಲಕ್ಷ ಆಸ್ತಿ ಹೊಂದಿದ್ದು ಕೊನೆಯ ಸ್ಥಾನ ಪಡೆದಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಆರನೇ ಸ್ಥಾನ

ಸಿದ್ದರಾಮಯ್ಯ ಅವರಿಗೆ ಆರನೇ ಸ್ಥಾನ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಸ್ತಿ 13.61 ಕೋಟಿ ರುಪಾಯಿ. ಶ್ರೀಮಂತ ಸಿಎಂಗಳ ಪಟ್ಟಿಯಲ್ಲಿ ಅವರು 6ನೇ ಸ್ಥಾನದಲ್ಲಿದ್ದಾರೆ. 2013ರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಸಿದ್ದರಾಮಯ್ಯ ಘೋಷಿಸಿದ್ದ ಆಸ್ತಿ 5.15 ಕೋಟಿ ರುಪಾಯಿ. ಶೈಕ್ಷಣಿಕ ಅರ್ಹತೆ ವಿಚಾರಕ್ಕೆ ಬಂದರೆ 31 ಮುಖ್ಯಮಂತ್ರಿಗಳ ಪೈಕಿ 12ನೇ ತರಗತಿ ಪಾಸಾದವರು ಮೂವರು. ಪದವೀಧರರು 12 ಮಂದಿ, ವೃತ್ತಿಪರ ಪದವಿ 10, ಸ್ನಾತಕೋತ್ತರ ಪದವಿ 5, ಡಾಕ್ಟರೇಟ್ ಪಡೆದವರು ಒಬ್ಬರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ADR report discloses in it's report that, criminal cases against 11 chief minister of Indian states and union territories. 22 criminal cases against Maharashtra chief minister Devendra Fadnavis.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ