ಕೋವಿಡ್-19 ಲಸಿಕೆ ಪಡೆಯಲು ನೋಂದಣಿ ಅಗತ್ಯ: ಯಾವುದೇ ಬಲವಂತವಿಲ್ಲ!

ನವದೆಹಲಿ, ಡಿಸೆಂಬರ್ 18: ಕೊರೊನಾವೈರಸ್ ಲಸಿಕೆ ಭಾರತದ ಮಾರುಕಟ್ಟೆ ಪ್ರವೇಶಿಸಿದ ಕೂಡಲೇ ಎಲ್ಲರೂ ತೆಗೆದುಕೊಳ್ಳಲೇಬೇಕು ಎಂಬಂತಿಲ್ಲ. ಆರೋಗ್ಯ ಸಚಿವಾಲಯದ ಪ್ರಕಾರ, ಕೊರೊನಾ ಲಸಿಕೆ ತೆಗೆದುಕೊಳ್ಳುವುದು ಸ್ವಯಂಪ್ರೇರಿತವಾಗಿರುತ್ತದೆ.

ಕೊರೊನಾವೈರಸ್ ಲಸಿಕೆ ತೆಗೆದುಕೊಳ್ಳಲು ಯಾವುದೇ ಬಲವಂತವಿಲ್ಲ. ಆದಾಗ್ಯೂ, ಲಸಿಕೆ ಪಡೆಯಲು ಬಯಸುವವರು ಮೊದಲು ನೋಂದಾಯಿಸಿಕೊಳ್ಳಬೇಕಾಗುತ್ತದೆ. ಸಚಿವಾಲಯವು ತಿಳಿಸಿದ ಕಾರ್ಯವಿಧಾನದ ಪ್ರಕಾರ ನೋಂದಣಿ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿರುತ್ತದೆ. ಇನ್ನು ವ್ಯಾಕ್ಸಿನೇಷನ್ ಸಮಯದ ಬಗ್ಗೆ ಮಾಹಿತಿಯನ್ನು ಫೋನ್‌ನಲ್ಲಿ ತಿಳಿಸಲಾಗುವುದು ಎನ್ನಲಾಗಿದೆ.

ಇದೇ ವೇಳೆ ಕೊರೊನಾವೈರಸ್ ಲಸಿಕೆ ಪಡೆಯಲು ಆನ್‌ಲೈನ್ ನೋಂದಣಿ ಕಡ್ಡಾಯವಾಗಿದೆ ಎಂದು ಸಚಿವಾಲಯ ತಿಳಿಸಿದೆ. ನೀವು ನೋಂದಣಿ ಮಾಡಿದ ಬಳಿಕ ನಿಮಗೆ ವ್ಯಾಕ್ಸಿನೇಷನ್ ದಿನಾಂಕವನ್ನು ನಿಮ್ಮ ನೋಂದಾಯಿತ ಮೊಬೈಲ್‌ಗೆ ಸಂಖ್ಯೆಗೆ ಸಂದೇಶ ಕಳುಹಿಸಲಾಗುತ್ತದೆ. ಲಸಿಕೆ ಪಡೆಯಲು ಗುರುತಿನ ಚೀಟಿ ಅವಶ್ಯಕತೆಯಿದೆ.

Covid Shot Voluntary No Forcefull: Central Government

ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ರಾಜ್ಯ ಅಥವಾ ಕೇಂದ್ರ ನೀಡುವ ಯಾವುದೇ ಗುರುತಿನ ಚೀಟಿ ಮಾನ್ಯವಾಗಿರುತ್ತದೆ.

ಕೊರೊನಾ ಲಸಿಕೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಸಚಿವಾಲಯ ಉತ್ತರಗಳನ್ನು ನೀಡಿದೆ. ಹಲವಾರು ಲಸಿಕೆಗಳ ಪ್ರಯೋಗ ಅಂತಿಮ ಹಂತದಲ್ಲಿದ್ದು, ಲಸಿಕೆ ಬಂದ ಕೂಡಲೇ ಸರ್ಕಾರ ವ್ಯಾಕ್ಸಿನೇಷನ್ ಶುರು ಮಾಡಲಿದೆ. ಭಾರತದಲ್ಲಿ ಲಭ್ಯವಿರುವ ಲಸಿಕೆಗಳು ಇತರ ದೇಶಗಳಲ್ಲಿ ಅಭಿವೃದ್ಧಿಪಡಿಸಿದ ಲಸಿಕೆಗಳಷ್ಟೇ ಪರಿಣಾಮಕಾರಿ ಎಂದು ಸಚಿವಾಲಯ ಹೇಳಿದೆ. ಅಲ್ಲದೆ, ಈ ಹಿಂದೆ ಕೋವಿಡ್ -19 ಸೋಂಕಿಗೆ ಒಳಗಾದ ಜನರಿಗೆ ಪೂರ್ಣ ಪ್ರಮಾಣದ ಕೊರೊನಾವೈರಸ್ ಲಸಿಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+