ಕೋವಿಡ್ 2ನೇ ಅಲೆಯ ಪರಿಣಾಮ: ಅಧಿಕಾರಿಗಳಿಗೆ ಕಡ್ಡಾಯ ರಜೆಗೆ ಇಂಡಿಗೋ ಸೂಚನೆ

ನವದೆಹಲಿ, ಜೂನ್ 1: ಕೊರೊನಾವೈರಸ್‌ನ ಎರಡನೇ ಅಲೆಯ ಪರಿಣಾಮ ಭಾರತದ ಇಂಡಿಗೋ ವಿಮಾನಯಾನ ಸಂಸ್ಥೆಯ ಅಧಿಕಾರಿಗಳಿಗೂ ತಟ್ಟಿದೆ. ಸಾಂಕ್ರಾಮಿಕ ರೋಗದ ಪರಿಣಾಮದಿಂದಾಗಿ ಪ್ರಯಾಣಿಕರ ಸಂಖ್ಯೆ ಗಣನೀಯ ಕಡಿಮೆಯಾಗಿರುವ ಕಾರಣ ಮುಂದಿನ ಸೆಪ್ಟೆಂಬರ್ ತಿಂಗಳಿನವರೆಗೆ ಗರಿಷ್ಠ 4 ಸಂಬಳ ರಹಿತ ರಜೆ ಪಡೆಯಲು ಇಂಡಿಗೋ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದೆ.

"ಎರಡನೇ ಅಲೆ ನಮ್ಮೆಲ್ಲರಿಗೂ ಬಹಳಷ್ಟು ಸಂಕಷ್ಟವನ್ನು ಉಂಟು ಮಾಡಿದೆ. ಇದು ಪ್ರಯಾಣಿಕರ ಸಂಖ್ಯೆಯಲ್ಲಿಯೂ ಭಾರೀ ಕುಸಿತವನ್ನು ಮಾಡಿದೆ. ಈ ಕಾರಣದಿಂದಾಗಿ ವಿಮಾನ ಸೇವೆಗಳನ್ನು ಕೂಡ ಕಡಿಮೆ ಮಾಡಲಾಗಿದೆ" ಎಂದು ಇಂಡಿಗೋ ವಿಮಾನ ಕಾರ್ಯಾಚರಣೆಯ ಹಿರಿಯ ಉಪಾಧ್ಯಕ್ಷ ಆಶಿಮ್ ಮಿತ್ರ ಏರ್‌ಲೈನ್ಸ್‌ನ ಪೈಲಟ್‌ಗಳಿಗೆ ಕಳುಹಿಸಿರುವ ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಇದರಲ್ಲಿ ಆಶಿಮ್ ಮಿತ್ರ ಅವರು ಕಡ್ಡಾಯ ರಜೆಯ ಬಗ್ಗೆಯೂ ವಿವರಿಸಿದ್ದಾರೆ. ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಕಡಿಮೆ ಮಾಡಿರುವ ಕಾರಣದಿಂದಾಗಿ ಸಂಬಳ ರಹಿತ ರಜೆಯನ್ನು ಜಾರಿಗೊಳಿಸಲಾಗಿದೆ. ಒಂದೂವರೆ ದಿನದಿಂದ ನಾಲ್ಕು ದಿನಗಳವರೆಗೆ ಸಿಬ್ಬಂದಿಗಳ ವಿಭಾಗಕ್ಕೆ ಅನುಗುಣವಾಗಿ ರಜೆಯನ್ನು ಪಡೆಯಲು ಸೂಚಿಸುತ್ತಿದೆ ಎಂದು ತಿಳಿಸಿದ್ದಾರೆ.

Covid 2nd wave impact: IndiGo informed employees go on leave without pay for few days

ಆದರೆ ಈ ಕಡ್ಡಾಯ ರಜೆ ಸಂಸ್ಥೆಯ ಬ್ಯಾಂಡ್ ಬಿ ಮತ್ತು ಬ್ಯಾಂಡ್ ಎ ಸಿಬ್ಬಂದಿಗಳಿಗೆ ಒಳಪಡುವುದಿಲ್ಲ ಎಂದಿದ್ದಾರೆ. ಸಂಸ್ಥೆಯ ಬಹುತೇಕ ಸಿಬ್ಬಂದಿಗಳು ಈ ಬ್ಯಾಂಡ್ ಬಿ ಮತ್ತು ಬ್ಯಾಂಡ್ ಎ ವಿಭಾಗದಲ್ಲಿ ಬರುತ್ತಾರೆ. "ಜೂನ್ 1 ರಿಂದ ಆರಂಭಿಸಿ ಮುಂದಿನ ಮೂರು ತಿಂಗಳ ಕಾಲ ಎಲ್ಲಾ ಪೈಲಟ್‌ಗಳು ತಿಂಗಳಿಗೆ 3 ಕಡ್ಡಾಯ ರಜೆ ಪಡೆಯಲಿದ್ದಾರೆ" ಎಂದು ಆಶಿಮ್ ಮಿತ್ರ ತಿಳಿಸಿದ್ದಾರೆ.

ಕೊರೊನಾ ವೈರಸ್‌ನ ಎರಡನೇ ಅಲೆಯ ಪರಿಣಾಮದಿಂದಾಗಿ ಕಳೆದ ಕೆಲ ವಾರಗಳಿಂದ ದೇಶೀಯ ವಿಮಾನಯಾನ ಸೇವೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಸಲಾಗಿದೆ. ಫೆಬ್ರವರಿ 28ರ ವರೆಗೆ ನಿತ್ಯವೂ 3 ಲಕ್ಷ ಪ್ರಯಾಣಿಕರು ವಿಮಾನಗಳಲ್ಲಿ ದೇಶೀಯ ಪ್ರಯಾಣವನ್ನು ಕೈಗೊಳ್ಳುತ್ತಿದ್ದರು. ಮೇ 30ರ ವೇಳೆಗೆ ಇದು 70,000ಕ್ಕೆ ಇಳಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+