ಕಾರ್ಪೋರೇಟ್ ತೆರಿಗೆ ಕಡಿತ ಲೋಕಸಭೆಯಲ್ಲಿ ಅಂಗೀಕಾರ
ನವದೆಹಲಿ, ಡಿಸೆಂಬರ್ 02: ಕಾರ್ಪೋರೇಟ್ ತೆರಿಗೆ ಕಡಿತ ದರವನ್ನು ಕಡಿತಗೊಳಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಇಂದು ಅಂಗೀಕಾರಗೊಂಡಿತು. ಅತಿ ಹೆಚ್ಚು ಮೊತ್ತದ ತೆರಿಗೆ ಕಡಿತ ಕಳೆದ 28 ವರ್ಷಗಳಲ್ಲೇ ಇದೇ ಮೊದಲ ಬಾರಿಯಾಗಿದೆ.
ಸೆಪ್ಟೆಂಬರ್ ನಲ್ಲಿ ಶೇ. 10 ಕಾರ್ಪೋರೇಟ್ ತೆರಿಗೆ ಕಡಿತಗೊಳಿಸಲಾಗಿತ್ತು, ಇದರ ಒಟ್ಟು ಮೊತ್ತ 1.45 ಲಕ್ಷ ಕೋಟಿಗಳಾಗಿದೆ. ಕಳೆದ ಆರು ವರ್ಷಗಳಿಂದ ಗಣನೀಯವಾಗಿ ಕುಸಿಯುತ್ತಿದ್ದ ಚೇತರಿಸಲು ಈ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದು ಹೇಳಬಹುದು.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾರ್ಪೋರೇಟ್ ಸಂಸ್ಥೆಗಳಿಗಿದ್ದ ಶೇ.30 ತೆರಿಗೆಯನ್ನು ಶೇ.22 ಕ್ಕೆ ಇಳಿಸಲಾಗುತ್ತದೆ. ಹೊಸ ಕಾರ್ಪೋರೇಟ್ ಸಂಸ್ಥೆಗಳಿಗಿದ್ದ ತೆರಿಗೆಯನ್ನು ಶೇ.15 ಕ್ಕೆ ಇಳಿಸಲಾಗಿದೆ. ಸದ್ಯದರಲ್ಲಿಯೇ ಕುಸಿದಿರುವ ಆರ್ಥಿಕತೆ ಬಲ ಬರಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಪದೇ ಪದೇ ಆರ್ಥಿಕ ದರ ಕುಸಿಯುತ್ತಿದ್ದು, ಅದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಪದ್ದತಿ ಅಳವಡಿಸಿಕೊಳ್ಳುವ ಕಾರ್ಪೋರೇಟ್ ಕಂಪನಿಗಳಿಗೆ ಯಾವುದೇ ರೀತಿಯ ತೆರಿಗೆ ಕಡಿತ ಅಥವಾ ರಿಯಾಯಿತಿ ಸಿಗುವುದಿಲ್ಲ.












Click it and Unblock the Notifications