ಕಾರ್ಪೊರೇಟ್‌ ಬೇಹುಗಾರಿಕೆ: 10ಸಾವಿರ ಕೋಟಿ ಹಗರಣ?

ನವದೆಹಲಿ, ಫೆ. 21: ಪೆಟ್ರೋಲಿಯಂ ಸಚಿವಾಲಯದಲ್ಲಿ ನಡೆದ ಕಾರ್ಪೊರೇಟ್‌ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಪೊಲೀಸರು ಸರ್ಕಾರಿ ಅಧಿಕಾರಿಗಳು, ಪತ್ರಕರ್ತರನ್ನು ಬಂಧಿಸಿ ವಿಚಾರಣೆ ನಡೆಸುವುದನ್ನು ಮುಂದುವರೆಸಿದ್ದಾರೆ. ಈ ನಡುವೆ ರಹಸ್ಯ ಕಡತ ಸೋರಿಕೆ ಪ್ರಕರಣದ ಮೊತ್ತ 10 ಸಾವಿರ ಕೋಟಿ ರು ದಾಟುತ್ತದೆ ಎಂದು ಅಂದಾಜಿಸಲಾಗಿದೆ.

ಪೆಟ್ರೋಲಿಯಂ ಸಚಿವಾಲಯದ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ ಪ್ರಕರಣದ ಆರೋಪಿ ಪತ್ರಕರ್ತ ಶಂತನು ಸೈಕಿಯಾ ವಿಚಾರಣೆ ವೇಳೆ ಕೆಲ ಮಾಹಿತಿ ಹೊರ ಹಾಕಿದ್ದು, ಪ್ರಕರಣದ ದಿಕ್ಕು ಬದಲಯಿಸುವ ಸಾಧ್ಯತೆ ಕಂಡು ಬಂಡಿದೆ. ಈ ಹಗರಣದಲ್ಲಿ ಭಾಗಿಯಾಗಿಲ್ಲ. ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿಲ್ಲ ಎಂದು ಹೇಳಿದ್ದಾರೆ.

ಜೊತೆಗೆ ಈ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೆ, ಇದು ರು. 10,000 ಕೋಟಿಯ ಹಗರಣ. ಈ ಹಗರಣದ ಬಗ್ಗೆ ನಾನು ತನಿಖೆ ನಡೆಸುತ್ತಿದ್ದೆ ಎಂದು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಆಫೀಸಿನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸೈಕಿಯಾ ಹೇಳಿದ್ದಾರೆ.

ರಾಜ್‌ನಾಥ್ ಸಿಂಗ್ ಹೇಳಿಕೆ: ಕಾರ್ಪೊರೇಟ್ ಬೇಹುಗಾರಿಕೆ ಹಗರಣದಲ್ಲಿ ಭಾಗಿಯಾಗಿರುವವರ ಮೇಲಿನ ಆರೋಪ ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಹಗರಣದಲ್ಲಿ ಯಾರನ್ನೂ ನಾವು ಬಿಡುವುದಿಲ್ಲ. ಅವರಿಗೆ ಕಠಿಣ ಶಿಕ್ಷೆ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಗುಡುಗಿದ್ದಾರೆ. [ಬೇಹುಗಾರಿಕೆ: ಮಾಜಿ ಪತ್ರಕರ್ತ ಬಂಧನ]

Corporate espionage: Rs 10,000 crore pumped in?

ಕಡತಗಳ ಮಾರಾಟ: ಪೆಟ್ರೋಲಿಯಂ ಖಾತೆಯ ರಹಸ್ಯ ದಾಖಲೆಗಳನ್ನು ಕದ್ದು ಹಣಕ್ಕಾಗಿ ಮಾರಲಾಗಿರುವ ಪ್ರಕರಣ ಇದಾಗಿದ್ದು, 5 ಲಕ್ಷ, 10 ಲಕ್ಷ ಹಾಗೂ 2 ಕೋಟಿ ರು ಗಳಿಗೆ ಮಾರಾಟವಾಗಿವೆ. ಬಜೆಟ್ ಮಂಡನೆ ವಿವರ, ಬೆಲೆ ಸಂಬಂಧಿಸಿದ ದಾಖಲೆಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ.

ಇಲ್ಲಿವರೆಗೂ ತೈಲ ಸಚಿವಾಲಯದ ಇಬ್ಬರು ಅಧಿಕಾರಿಗಳು, ಇಬ್ಬರು ಮಧ್ಯವರ್ತಿಗಳು ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ನ ಒಬ್ಬ ಎಕ್ಸಿಕ್ಯೂಟಿವ್‌ ಬಂಧಿಸಲಾಗಿತ್ತು. ನಾನಾ ಕಂಪನಿಗಳ ಒಟ್ಟು ಐವರು ಎಕ್ಸಿಕ್ಯೂಟಿವ್‌ಗಳ ವಿರುದ್ಧ ಕ್ರಿಮಿನಲ್ ಸಂಚು, ಕದ್ದ ವಸ್ತುಗಳ ಬಳಕೆ ಮುಂತಾದ ಗುರುತರವಾದ ಆರೋಪಗಳನ್ನು ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಸಿ ಬಸ್ಸಿ ಹೇಳಿದ್ದಾರೆ.

ಶಂತನು ಸೈಕಿಯಾ, ಪ್ರಯಾಸ್ ಜೈನ್, ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಪೊರೇಟ್ ವ್ಯವಹಾರಗಳ ವ್ಯವಸ್ಥಾಪಕ ಶೈಲೇಶ್ ಸಕ್ಸೇನಾ, ಜುಬಿಲೆಂಟ್ ಎನರ್ಜಿಯ ಸೀನಿಯರ್ ಎಕ್ಸಿಕ್ಯುಟಿವ್ ಸುಭಾಶ್ಚಂದ್ರ, ರಿಲಯನ್ಸ್ ಎಡಿಎಜಿ ರಿಶಿ ಆನಂದ್, ಎಸ್ಸಾರ್ ಡಿಜಿಎಂ ವಿನಯ್ ಮತ್ತು ಕೇರ್ನ್ಸ್ ಇಂಡಿಯಾ ಜಿಎಂ ಕೆ.ಕೆ ನಾಯ್ಕ್ ಬಂಧಿತ ವ್ಯಕ್ತಿಗಳಾಗಿದ್ದಾರೆ.

ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಇಲಾಖೆಗಳ ಕಚೇರಿಗಳ ಮೇಲೆ ಹಠಾತ್ ದಾಳಿ ನಡೆಸಲು ಪೊಲೀಸರು ವ್ಯೂಹ ರಚಿಸಿದ್ದಾರೆ. ಹಣ ರವಾನೆ ಮೂಲದ ಬಗ್ಗೆ ಸುಳಿವು ಸಿಕ್ಕಿದ್ದು, ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+