ದೆಹಲಿ ಶಾಸಕಿ ಅತಿಶಿಗೆ ಕೊರೊನಾ ಸೋಂಕು ಪಾಸಿಟಿವ್
ದೆಹಲಿ ರಾಜ್ಯದ ಶಾಸಕಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರು ಆದ ಅತೀಶಿಗೆ ಬುಧವಾರ ಕೋವಿಡ್-19 ಸೋಂಕು ತಗುಲಿರುವುದು ದೃಢವಾಗಿದೆ. ಬುಧವಾರ ಪರೀಕ್ಷೆಯ ಬಳಿಕ ಕೋವಿಡ್-19 ಪಾಸಿಟಿವ್ ಎಂದು ವರದಿ ಬಂದಿದೆ.
Recommended Video
ಇವರು ಅಷ್ಟೇ ಅಲ್ಲದೆ ಎಎಪಿ ವಕ್ತಾರ ಅಕ್ಷಯ್ ಮರಾಠೆ ಮತ್ತು ಸಲಹೆಗಾರ ಅಭಿನಂದಿತ ದಯಾಳ್ ಮಾಥೂರ್‌ಗೂ ಕೂಡ ಕೋವಿಡ್-19 ಪಾಸಿಟಿವ್ ಆಗಿದೆ.
ಕಲ್ಕಾಜಿ ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾದ ಅತಿಶಿ ತನ್ನನ್ನು ಪ್ರತ್ಯೇಕಿಸಿಕೊಂಡಿದ್ದು, ಪ್ರಸ್ತುತ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕೋವಿಡ್-19 ಪರೀಕ್ಷೆ ನೆಗೆಟಿವ್ ಬಂದು ಒಂದೇ ವಾರದಲ್ಲಿ ಈ ವರದಿ ಬಂದಿದೆ.

ಮಂಗಳವಾರ, ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ವೈರಸ್ ರೋಗಲಕ್ಷಣಗಳನ್ನು ತೋರಿಸಿದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರೀಕ್ಷೆಗಳು ನಂತರದ ದಿನಗಳಲ್ಲಿ ನೆಗೆಟಿವ್ ಬಂದಿದೆ. ಆದರೆ, ಜೈನ್ ಬುಧವಾರ ಮತ್ತೊಂದು ಪರೀಕ್ಷೆಗೆ ಒಳಗಾಗಿದ್ದು ಫಲಿತಾಂಶದ ನಿರೀಕ್ಷೆಯಲ್ಲಿದೆ.
ದೇಶದಲ್ಲಿ ಮೂರನೇ ಅತಿ ಹೆಚ್ಚು ಪ್ರಕರಣಗಳು ದೆಹಲಿಯಲ್ಲಿದ್ದು, ಸೋಂಕಿತರ ಸಂಖ್ಯೆ 45,000 ಗಡಿ ದಾಟಿದೆ. ಈವರೆಗೆ 1,837 ಜನರು ಈ ವೈರಸ್‌ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸುಮಾರು 23,000 ಸಕ್ರಿಯ ರೋಗಿಗಳು ಪ್ರಸ್ತುತ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.












Click it and Unblock the Notifications