ಸ್ಪಷ್ಟನೆ ನೀಡಿದ ಕೇಂದ್ರ: ಕಟಿಂಗ್ ಶಾಪ್, ಸಲೂನ್ ತೆರೆಯುವಂತಿಲ್ಲ

ನವ ದೆಹಲಿ, ಏಪ್ರಿಲ್ 25: ಕೇಂದ್ರ ಸರ್ಕಾರ ಲಾಕ್‌ಡೌನ್ ನಿಯಮದಲ್ಲಿ ಇನ್ನಷ್ಟು ಸಡಿಲಿಕೆ ತಂದಿದೆ. ಬಹುತೇಕ ಎಲ್ಲ ಅಂಗಡಿಗಳನ್ನು ತೆರೆಯಬಹುದು ಎಂದು ತಿಳಿಸಿದೆ. ಇಂದು ಹೊಸ ಮಾರ್ಗಸೂಚಿಯನ್ನು ನೀಡಿದ್ದು, ಈ ಆದೇಶ ಕೊಂಚ ಗೊಂದಲವನ್ನು ಉಂಟು ಮಾಡಿತ್ತು.

ಎಲ್ಲ ಅಂಗಡಿಗಳು ಅಂದರೆ, ಕಟಿಂಗ್ ಶಾಪ್, ಸಲೂನ್, ಬ್ಯೂಟಿ ಪಾರ್ಲರ್‌ಗಳು ಸಹ ಓಪನ್ ಆಗಲಿವೆಯೇ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಇದೀಗ ಈ ಗೊಂದಲಕ್ಕೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸ್ಪಷ್ಟನೆ ನೀಡಿದೆ.

Coronavirus Lockdown Reaxation Is Not Included For Cutting Shop And Salon

ಟ್ವೀಟ್ ಮೂಲಕ ಕಟಿಂಗ್ ಶಾಪ್, ಸಲೂನ್, ಬ್ಯೂಟಿ ಪಾರ್ಲರ್‌ಗಳು ತೆರೆಯುವುದಿಲ್ಲ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ರೆಸ್ಟೋರೆಂಟ್‌ಗಳು ಹಾಗೂ ಬಾರ್‌ಗಳು ಇದೇ ರೀತಿ ಮುಚ್ಚಿರುತ್ತವೆ.

"ಹೇರ್ ಸಲೂನ್‌ಗಳು ಮತ್ತು ಕಟಿಂಗ್ ಶಾಪ್‌ಗಳು ಮೇ 3ರವರೆಗೆ ತೆರೆಯುವುದಿಲ್ಲ. ನಮ್ಮ ಈ ಹಿಂದಿನ ಆದೇಶವು ವಸ್ತುಗಳ ಮಾರಾಟ ನಡೆಸುವ ಅಂಗಡಿಗಳಿಗಷ್ಟೇ ಅನ್ವಯವಾಗಲಿದೆ. ಕಟಿಂಗ್ ಶಾಪ್ ಹಾಗೂ ಹೇರ್ ಸಲೂನ್‌ಳನ್ನು ತೆರೆಯಲು ಯಾವುದೇ ಅನುಮತಿಯಿಲ್ಲ. ಅಂತೆಯೇ ಮದ್ಯದಂಗಡಿಗಳನ್ನು ತೆರೆಯಲು ಸಹ ಅನುಮತಿಯಿಲ್ಲ" ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ.

ಲಾಕ್‌ಡೌನ್ ಸಡಲಿಕೆಯಲ್ಲಿ ವಸ್ತುಗಳ ಮಾರಾಟ ನಡೆಸುವ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಿದ್ದು, ಹೇರ್ ಸಲೂನ್‌ಗಳು ಮತ್ತು ಕಟಿಂಗ್ ಶಾಪ್‌ಗಳ ಬಾಗಿಲನ್ನು ಲಾಕ್‌ಡೌನ್ ಮುಗಿಯುವವರೆಗೆ ತೆರೆಯುವಂತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+