ದೆಹಲಿಯಲ್ಲಿ ಮೈತ್ರಿ ಬಗ್ಗೆ ಮಾತಿಲ್ಲ, ಸಂಭಾವ್ಯ ಪಟ್ಟಿಯಲ್ಲಿ ಶೀಲಾ, ಸುಶೀಲ್

ನವದೆಹಲಿ, ಏಪ್ರಿಲ್ 21: ದೆಹಲಿ ಹಾಗೂ ಹರ್ಯಾಣದಲ್ಲಿ ಆಮ್ ಆದ್ಮಿ ಪಕ್ಷದ ಜತೆಗಿನ ಮೈತ್ರಿ ಬಗ್ಗೆ ಅಂತಿಮ ರೂಪ ನೀಡಲಾಗಿದ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಹೆಸರಿಸಲು ಮುಂದಾಗಿದೆ. ಇನ್ನೆರಡು ದಿನಗಳಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ಹೆಸರಿಸುವುದಾಗಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೇಳಿದ್ದಾರೆ.

ದೆಹಲಿಯ 7 ಲೋಕಸಭಾ ಕ್ಷೇತ್ರಗಳಿಗೆ ಸಂಭಾವ್ಯ ಪಟ್ಟಿಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಕಳುಹಿಸಲಾಗಿದೆ. ಆಮ್ ಅದ್ಮಿ ಪಕ್ಷದಿಂದ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಈ ನಡುವೆ ಕಾಂಗ್ರೆಸ್ ಕಳಿಸಿರುವ ಸಂಭಾವ್ಯ ಪಟ್ಟಿಯಂತೆ ಚಾಂದನಿ ಚೌಕ್​ನಿಂದ ಮೂರು ಬಾರಿ ದೆಹಲಿ ಸಿಎಂ ಆಗಿದ್ದ, ಹಾಲಿ ದೆಹಲಿ ರಾಜ್ಯ ಘಟಕ ಅಧ್ಯಕ್ಷ ಶೀಲಾ ದೀಕ್ಷಿತ್ ಸ್ಪರ್ಧಿಸುವ ಸಾಧ್ಯತೆಯಿದೆ. ಕಳೆದ ಬಾರಿ ಈ ಕ್ಷೇತ್ರದಿಂದ ಕಪಿಲ್ ಸಿಬಲ್ ನಿಂತು ಸೋಲು ಕಂಡಿದ್ದರು. ನವದೆಹಲಿ ಕ್ಷೇತ್ರದಿಂದ ಮಾಜಿ ಕೇಂದ್ರ ಸಚಿವ ಅಜಯ್ ಮಾಕೇನ್ ಸ್ಪರ್ಧಿಸುವ ಸಾಧ್ಯತೆಯಿದೆ.

Congress to announce candidates for 7 Lok Sabha seats in Delhi within two days

ಒಲಿಂಪಿಕ್ ಪದಕ ವಿಜೇತ ಖ್ಯಾತ ಕುಸ್ತಿಪಟು ಸುಶೀಲ್​ಕುಮಾರ್​ಅವರಿಗೆ ಪಶ್ಚಿಮ ದೆಹಲಿಯಿಂದ ಟಿಕೆಟ್ ಸಿಗಬಹುದು. ಪೂರ್ವ ದೆಹಲಿಯಿಂದ ಅರವಿಂದರ್ ಸಿಂಗ್ ಲವ್ಲಿ, ದಕ್ಷಿಣ ದೆಹಲಿಯಿಂದ ರಮೇಶ್​ಕುಮಾರ್, ಈಶಾನ್ಯ ದೆಹಲಿಯಿಂದ ಜೆ.ಪಿ.ಅಗರ್ವಾಲ್, ವಾಯುವ್ಯ ದೆಹಲಿಯಿಂದ ರಾಜ್ ಕುಮಾರ್ ಚೌಹಾಣ್ ಅವರಿಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಲಾಗಿದೆ.

ಹಿರಿಯ ಮುಖಂಡ ಸಜ್ಜನ್ ಕುಮಾರ್ ಅವರ ಸೋದರ ರಮೇಶ್ ಕುಮಾರ್, ಜೈ ಪ್ರಕಾಶ್ ಅಗರವಾಲ್, ರಾಜೇಶ್ ಲಿಲೋಥಿಯಾ ಹೆಸರುಗಳು ಕೇಳಿ ಬಂದಿವೆ. ದೆಹಲಿ ಹಾಗೂ ಹರ್ಯಾಣದಲ್ಲಿ ಎಎಪಿ ಮೈತ್ರಿ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎಂದು ದೆಹಲಿ ಕಾಂಗ್ರೆಸ್ ಉಸ್ತುವಾರಿ ಪಿ.ಸಿ.ಚಾಕೋ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+