ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಮಂತ್ರಿ ಮೋದಿಗೆ ಸಂವಿಧಾನದ ಪುಸ್ತಕ ಕಳಿಸಿದ್ದೇಕೆ ಕಾಂಗ್ರೆಸ್?

|
Google Oneindia Kannada News

Recommended Video

Congress gifts a copy of constitution to Modi from AMAZON | CONSTITUTION | MODI | CONGRESS | GIFT

ನವದೆಹಲಿ, ಜನವರಿ.26: ಕಾಂಗ್ರೆಸ್ 71ನೇ ಗಣರಾಜ್ಯೋತ್ಸವ ದಿನಾಚರಣೆ ದಿನವೇ ಸಂವಿಧಾನದ ಪ್ರತಿಯನ್ನು ಆನ್ ಲೈನ್ ನಲ್ಲಿ ಬುಕ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸಂವಿಧಾನದ ಪ್ರತಿಯನ್ನು ಕಳುಹಿಸಿಕೊಡುವುದಾಗಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಆದಷ್ಟು ಬೇಗ ಈ ಸಂವಿಧಾನದ ಪ್ರತಿ ನಿಮ್ಮನ್ನು ತಲುಪುತ್ತದೆ. ಭಾರತವನ್ನು ಇಬ್ಭಾಗ ಮಾಡುವ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಬಿಡುವಿನ ಸಮಯದಲ್ಲಿ ಈ ಸಂವಿಧಾನವನ್ನು ಓದಿರಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ದೇವರಿಗೂ ಸಿಎಎ: ತಿರುಪತಿ ತಿಮ್ಮಪ್ಪ, ಶಬರಿಮಲೆ ಅಯ್ಯಪ್ಪಗೂ ಪೌರತ್ವ!ದೇವರಿಗೂ ಸಿಎಎ: ತಿರುಪತಿ ತಿಮ್ಮಪ್ಪ, ಶಬರಿಮಲೆ ಅಯ್ಯಪ್ಪಗೂ ಪೌರತ್ವ!

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿಯನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ. ಸಂವಿಧಾನದಲ್ಲಿ ಇರುವ ಸಮಾನತೆ, ಭ್ರಾತೃತ್ವ, ಜಾತ್ಯಾತೀತ ನಿಲುವಿನ ಬಗ್ಗೆ ತಿಳಿಸಲು ಪ್ರಧಾನಮಂತ್ರಿಗೆ ಈ ಪ್ರತಿಯನ್ನು ಕಳುಹಿಸಿ ಕೊಡಲಾಗುತ್ತಿದೆ ಎಂದು ಕಾಂಗ್ರೆಸ್ ತಿಳಿಸಿದೆ.

Congress Party Book The Constitution Copy In Online For PM

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಿಡಿಮಿಡಿ:

ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯು ಧರ್ಮದ ಆಧಾರದಲ್ಲಿ ಭಾರಿತೀಯರನ್ನು ಇಬ್ಭಾಗಗೊಳಿಸುತ್ತಿದೆ. ಈ ಕಾಯ್ದೆಯು ದೋಷಪೂರಿತವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದರ ಬೆನ್ನಲ್ಲೇ ಕೇರಳ, ಪಂಜಾಬ್ ಹಾಗೂ ರಾಜಸ್ಥಾನ ಸರ್ಕಾರಗಳು ಅಧಿವೇಶನದಲ್ಲಿ ಸಿಎಎ ವಿರುದ್ಧ ನಿರ್ಣಯ ಅಂಗೀಕಾರಗೊಳಿಸಿವೆ. ಇನ್ನು, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕೂಡಾ ಸಿಎಎ ವಿರುದ್ಧ ಮೌನ ಮುರಿದಿದ್ದಾರೆ. ಸಿಎಎ ವಿಚಾರದಲ್ಲಿ ಕೇಂದ್ರ ಸರ್ಕಾರವು ತಪ್ಪು ಹಜ್ಜೆಯಿಟ್ಟಿದ್ದು, ದೋಷಪೂರಿತ ಕಾಯ್ದೆ ವಿರುದ್ಧ ತೆಲಂಗಾಣ ಅಧಿವೇಶನದಲ್ಲೂ ನಿರ್ಣಯ ಅಂಗೀಕರಿಸುವುದಾಗಿ ತಿಳಿಸಿದ್ದರು.

English summary
Congress Party Book The Constitution Copy In Online For Prime Minister Narendra Modi. Constitution Is Reaching You Soon, When You Get Time Off From Dividing The Country Please Do Read It- Congress Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X