• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಬ್ಲಿಘಿಗೆ ಹೋಗಿದ್ದ ವಿಷಯ ಕಾಂಗ್ರೆಸ್‌ ಮುಖಂಡ ಮುಚ್ಚಿಟ್ಟರೂ ಕೊರೊನಾ ಬಿಚ್ಚಿಟ್ಟಿತು

|

ನವದೆಹಲಿ, ಏಪ್ರಿಲ್ 9: ದೆಹಲಿಯ ಕಾಂಗ್ರೆಸ್ ಮುಖಂಡ ತಬ್ಲಿಘಿ ಜಮಾತ್‌ ಕಾರ್ಯಕ್ರಮಕ್ಕೆ ತೆರಳಿ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅವರ ಸಂಪೂರ್ಣ ಕುಟುಂಬಕ್ಕೂ ಕೊರೊನಾ ಆವರಿಸಿದೆ.

ಇಡೀ ದೇಶದಕ್ಕೆ ಕೊರೊನಾ ಹರಡಲು ಹಾಟ್‌ಸ್ಪಾಟ್‌ ಆಗಿದ್ದ ದೆಹಲಿ ತಬ್ಲಿಘಿ ಜಮಾತ್ ಮರ್ಕಜ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ಹೋಗಿಯೂ ಪೊಲೀಸರಿಗೆ ಮಾಹಿತಿ ನೀಡದೆ ಅಡಗಿ ಕುಳಿತಿದ್ದ ಕಾಂಗ್ರೆಸ್ ಮುಖಂಡನಿಗೆ ಈಗ ಕೊರೊನಾ ಒಕ್ಕರಿಸಿದೆ.

ಜಮಾತ್ ಮಸೀದಿಗೆ ಹೋಗಿದ್ದವರ ರಾಜ್ಯಾವಾರು ಅಂಕಿ-ಅಂಶ ಇಲ್ಲಿದೆಜಮಾತ್ ಮಸೀದಿಗೆ ಹೋಗಿದ್ದವರ ರಾಜ್ಯಾವಾರು ಅಂಕಿ-ಅಂಶ ಇಲ್ಲಿದೆ

ಮಾಜಿ ರಾಜಕಾರಣಿ , ಅವರ ಪತ್ನಿ ಈಗ ಆ ಪ್ರದೇಶದ ಕೌನ್ಸಿಲರ್ ಕೂಡ ಆಗಿದ್ದಾರೆ, ಹಾಗೂ ಅವರ ಮಗಳಿಗೆ ಕೊರೊನಾ ತಗುಲಿದೆ.

ಅವರ ನಿರ್ಲಕ್ಷ್ಯದಿಂದಲೇ ಈ ರೀತಿಯಾಗಿದೆ ಎಂದು ಪೊಲೀಸರು ತಿಳಿಸಿದ್ದು, ಅವರಿರುವ ದೀನ್‌ಪುರವನ್ನು ಸೀಲ್ ಮಾಡಲಾಗಿದೆ.ಮೂವರನ್ನು ಅಂಬೇಡ್ಕರ್ ಆಸ್ಪತ್ರೆಗೆ ಸೇರಿಸಲಾಗಿದೆ.

ಯಾರ್ಯಾರು ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದಿರಿ ಎಂದು ಪೊಲೀಸರು ಕೇಳುವಾಗ ವಿಚಾರವನ್ನು ತಾವು ಕೂಡ ಹೋಗಿದ್ದ ವಿಚಾರವನ್ನು ಮುಚ್ಚಿಟ್ಟಿದ್ದರು. ಆದರೆ ಕೊರೊನಾ ಅದನ್ನು ಬಯಲಿಗೆಳೆದಿದೆ. ದೀನಪುರ ಪ್ರದೇಶದ 250 ಮನೆಗಳನ್ನು ಸೀಲ್ ಮಾಡಲಾಗಿದೆ.

ಕೊರೊನಾ:ಆಸ್ಪತ್ರೆ ಸುತ್ತ ಅರೆಬೆತ್ತಲಾಗಿ ಓಡಾಡಿದ ಜಮಾತ್ ಕಾರ್ಯಕರ್ತರು ಕೊರೊನಾ:ಆಸ್ಪತ್ರೆ ಸುತ್ತ ಅರೆಬೆತ್ತಲಾಗಿ ಓಡಾಡಿದ ಜಮಾತ್ ಕಾರ್ಯಕರ್ತರು

ಅವರ್ಯಾರು ಮನೆಬಿಟ್ಟು ಹೊರ ಬರುವಂತಿಲ್ಲ. ದೆಹಲಿಯಲ್ಲಿ ಒಟ್ಟು 720 ಕೊರೊನಾ ಪ್ರಕರಣಗಳು ದಾಖಲಾಗಿದ್ದು 12 ಮಂದಿ ಮೃತಪಟ್ಟಿದ್ದಾರೆ.

ದೆಹಲಿ ಶೇ.60ರಷ್ಟು ಕೊರೊನಾ ಪ್ರಕರಣಗಳು ತಬ್ಲಿಘಿ ಜಮಾತ್ ಕಾರ್ಯಕ್ರಮದಿಂದಲೇ ಹುಟ್ಟಿಕೊಂಡಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

English summary
A Congress leader in Delhi has been charged by the police for not disclosing that he had visited Markaz Nizamuddin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X