ರಾಬರ್ಟ್‌ ವಾದ್ರಾ ಮೇಲೆ ಐಟಿ ದಾಳಿ, ಕಾಂಗ್ರೆಸ್‌ನಿಂದ ವಿರೋಧ

Recommended Video

      ಸೋನಿಯಾ ಅಳಿಯನಿಗೆ ಕಂಟಕ..! | Oneindia Kannada

      ನವದೆಹಲಿ, ಡಿಸೆಂಬರ್ 07: ಸೋನಿಯಾ ಗಾಂಧಿ ಅಳಿಯ, ಉದ್ಯಮಿ ರಾಬರ್ಟ್‌ ವಾದ್ರಾ ಅವರ ಮೇಲೆ ಇಡಿ ದಾಳಿ ನಡೆಸಿರುವುದನ್ನು ಕಾಂಗ್ರೆಸ್‌ ವಿರೋಧಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಿಡಿಸಿರುವ ಕಾಂಗ್ರೆಸ್‌, ಬಿಜೆಪಿಯು ಉದ್ದೇಶಪೂರ್ವಕವಾಗಿ ಈ ಕಾರ್ಯ ಎಸಗಿದೆ ಎಂದಿದೆ.

      ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ರಣದೀಪ್ ಸುರ್ಜೆವಾಲಾ, ಪಂಚ ರಾಜ್ಯಗಳ ಚುನಾವಣೆ ಸೋಲು ಖಚಿತವಾಗಿರುವ ಕಾರಣ ಮೋದಿ ಅವರು ತಮ್ಮ ಹಳೆಯ ತಂತ್ರವನ್ನು ಮುಂದುವರೆಸಿದ್ದು, ಐಟಿ, ಇಡಿ ಸಂಸ್ಥೆಗಳನ್ನು ತಮ್ಮ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಬಳಸುತ್ತಿದ್ದಾರೆ ಎಂದಿದ್ದಾರೆ.

      ಕಳೆದ 54 ತಿಂಗಳುಗಳಿಂದಲೂ ರಾಬರ್ಟ್‌ ವಾದ್ರಾ ವಿರದ್ಧ ಮೋದಿ ಸರ್ಕಾರ ಒಂದಲ್ಲಾ ಒಂದು ರೀತಿಯಲ್ಲಿ ಪಿತೂರಿ ಮಾಡುತ್ತಲೇ ಬಂದಿತ್ತು, ಈಗ ಅಂತಿಮವಾಗಿ ರಾಜಕೀಯ ಲಾಭಕ್ಕಾಗಿ ವಾದ್ರಾ ವಿರುದ್ಧ ಐಟಿ, ಇಡಿ ಅಸ್ತ್ರ ಬಳಸಲಾಗಿದೆ ಎಂದು ಅವರು ಹೇಳಿದರು.

      Congress lambasted on Modi after ED raids on Robert Vadra

      ಎಫ್‌ಐಆರ್‌ ಸಹ ಇಲ್ಲದೆ, ವಾದ್ರಾ ಅವರ ನವದೆಹಲಿ, ಜೈಪುರ ನಿವಾಸ, ದೆಹಲಿಯ ಅವರ ಆಪ್ತರ ನಿವಾಸ, ನೋಯ್ಡಾದ ಅವರ ಸಹೋದರಿಯ ನಿವಾಸಗಳ ಮೇಲೆ ದಾಳಿ ಮಾಡಲಾಗಿದೆ. ಇದು ಕಾನೂನಿಗೆ ವಿರುದ್ಧ ಎಂದು ಕಾಂಗ್ರೆಸ್ ಆರೋಪಿಸಿದೆ.

      ವಾದ್ರಾ ವಕೀಲರು ಹೇಳಿರುವಂತೆ, ಕಚೇರಿಗಳು ತೆರೆಯುವ ಮುನ್ನವೇ ಇಡಿ ಅಧಿಕಾರಿಗಳು ಕಚೇರಿಗೆ ನುಗ್ಗಿ, ಬೀಗಗಳು ಒಡೆದು ಅಕ್ರಮ ಪ್ರವೇಶ ಮಾಡಿದ್ದಾರೆ. ವಾದ್ರಾ ಅವರು ಎಲ್ಲ ಸಂಸ್ಥೆಗಳಿಂದ ಬಂದಿದ್ದ ಎಲ್ಲ ನೊಟೀಸ್‌ಗಳಿಗೆ ಉತ್ತರ ನೀಡಿದ್ದರೂ ಸಹ ಹೀಗೆ ಮಾಡಲಾಗಿರುವುದು ವೈಯಕ್ತಿಕ ದ್ವೇಷ ತೋರಿಸುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+